ಕಂಪ್ಲಿ08:. ಮೈತ್ರಿ ಸಕರ್ಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ನಲ್ಲಿ ಆರ್ಯವೈಶ್ಯ ನಿಗಮ ಮಂಡಳಿ ಸ್ಥಾಪನೆ ಜೊತೆಗೆ 10 ಕೋಟಿ ಅನುದಾನ ನೀಡಿರುವ ಹಿನ್ನಲೆಯಲ್ಲಿ ಕಂಪ್ಲಿ ಆರ್ಯವೈಶ್ಯ ಸಂಘ, ಕನರ್ಾಟಕ ಆರ್ಯವೈಶ್ಯ ಮಹಾ ಮಂಡಳಿ, ವಾಸವಿ ಯುವಜನ ಸಂಘ ಹಾಗೂ ವಾಸವಿ ಮಹಿಳಾ ಸಂಘದ ನೇತೃತ್ವದಲ್ಲಿ ತಾಲೂಕಿನ ಅಂಬೇಡ್ಕರ್ ವೃತ್ತದಲ್ಲಿ ಉಪ ತಹಶಿಲ್ದಾರ್ ಬಿ.ರವೀಂದ್ರಕುಮಾರ್ಗೆ ಅಭಿನಂದನಾ ಪತ್ರ ಸಲ್ಲಿಸುವ ಮೂಲಕ ಸಕರ್ಾರಕ್ಕೆ ರವಾನಿಸಿದರು.
ನಂತರ ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿ.ವಿ.ಸುಬ್ಬಾರಾವ್ ಮಾತನಾಡಿ, ಕಳೆ 70 ವರ್ಷದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಆಧ್ಯತೆ ನೀಡಲಿಲ್ಲ. ಆದರೆ, ಇಂದಿನ ಮೈತ್ರಿ ಸಕರ್ಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆರ್ಯವೈಶ್ಯ ಸಮಾಜ ಅಭಿವೃದ್ಧಿ ದೃಷ್ಠಿಯಿಂದ ಬಜೆಟ್ನಲ್ಲಿ ಆರ್ಯವೈಶ್ಯ ನಿಗಮ ಮಂಡಳಿ ಸ್ಥಾಪನೆ ಮೂಲಕ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಮತ್ತು ಆರ್ಯವೈಶ್ಯ ಸಮಾಜದ ಅಭಿವೃದ್ಧಿಗೆ 6 ಕೋಟಿ ನೀಡಿರುವುದು ಈ ಸಮುದಾಯಕ್ಕೆ ಮತ್ತಷ್ಟು ಬಲವಂತಾಗಿದೆ. ಸಿಎಂ ಕುಮಾರಸ್ವಾಮಿ ಅವರು ಆರ್ಯವೈಶ್ಯ ಸಮಾಜದ ಬಗ್ಗೆ ಕಾಳಜಿ ತೋರಿಸಿದ್ದಾರೆ. ಸಿಎಂ ಹಾಗೂ ಸಕರ್ಾರಕ್ಕೆ ಆರ್ಯವೈಶ್ಯ ಸಮಾಜದಿಂದ ಅಭಿನಂದನೆ ಸಲ್ಲಿಸಲಾಗುತ್ತದೆ. ಸಕರ್ಾರದ ಆರ್ಯವೈಶ್ಯ ಸಮುದಾಯವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮತ್ತು ಸಕರ್ಾರಕ್ಕೆ ಅಭಿನಂದನಾ ಪತ್ರ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಕನರ್ಾಟಕ ಆರ್ಯವೈಶ್ಯ ಮಹಾಮಂಡಳಿಯ ರಾಜ್ಯ ಸಂಘಟನಾ ಕಾರ್ಯದಶರ್ಿ ಡಿ.ವಿ.ಸತ್ಯನಾರಾಯಣ, ಕನರ್ಾಟಕ ಆರ್ಯವೈಶ್ಯ ಯುವಜನ ಮಹಾಮಂಡಳಿಯ ರಾಜ್ಯ ಆಧ್ಯಕ್ಷ ಜಿ.ವಿ.ಕೋಟೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಸುಬ್ರಮಣ್ಯಂ, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಜಿ.ಚನ್ನಮ್ಮ, ಮುಖಂಡರಾದ ಶ್ರೀಧರ್ ಶ್ರೇಷ್ಠಿ, ರಾಜರಾವ್, ರಾಮಲಿಂಗಯ್ಯ, ಸಂದೀಪ್, ಕೆ.ರಾಜೇಂದ್ರ, ವಿ.ಸತ್ಯನಾರಾಯಣ, ರಮಾ ಸೇರಿದಂತೆ ಅನೇಕರಿದ್ದರು.