ಲೋಕದರ್ಶನ ವರದಿ
ತಾಂಬಾ 17: ಜ್ಞಾನದ ಮೂಲ ದೇಗುಲವೇ ಶಾಲೆಯಾಗಿದೆ, ಮಕ್ಕಳಲ್ಲಿ ಅಧಮ್ಯ ಚೈತನ್ಯವನ್ನು ತುಂಬಿ ಜಗಕ್ಕೆ ಬೆಳಕು ಚೆಲ್ಲುವಂತೆ ಮಾಡುವುದೇ ಶಿಕ್ಷಕನ ಆದ್ಯ ಕರ್ತವ್ಯವಾಗಿದೆ. ಮಕ್ಕಳಲ್ಲಿ ಹುದುಗಿದ ಮಹಾನ್ ದಿವ್ಯಶಕ್ತಿಯನ್ನು ಹೊರತೆಗೆಯುವ ಕಾಯಕ ಅಷ್ಟೊಂದು ಸುಲಭವಾದುದ್ದಲ್ಲ, ಆದರೂ ಕೂಡಾ ಶಿಕ್ಷಕನಾದವನು ನಿರಂತರ ಪ್ರಯತ್ನದ ಫಲವಾಗಿ ಮಕ್ಕಳಲ್ಲಿ ಅಡಗಿದ ಶಕ್ತಿಯನ್ನು ಹೊರತೆಗೆದು ಜಗತ್ತಿಗೆ ದಿವ್ಯ ಚೇತನಗಳಾಗಿ, ಮೂತರ್ಿಗಳಾಗಿ ರೂಪಿಸುವ ನಂದಾದೀಪದಂತೆ ಶಿಕ್ಷಕ ಸದಾ ಪ್ರಯತ್ನ ಪಡುತ್ತಿರುತ್ತಾನೆ ಎಂದು ಸಾಹಿತಿ, ಕನರ್ಾಟಕ ಸರಕಾರದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂತೋಷಕುಮಾರ ನಿಗಡಿ ಹೇಳಿದರು.
ಶಿರಶ್ಯಾಡ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ "ಮಕ್ಕಳ ಕುರಿತು ಪುನಃ ಚೇತನ ಮತ್ತು 2018-19 ನೇ ಸಾಲಿನ ಬಿಳ್ಕೋಡುವ" ಸಮಾರಂಭದ ಉಪನ್ಯಾಸಕರಾಗಿ ಮಾತನಾಡಿದ ಅವರು ತಂದೆ ತಾಯಿ ಗುರುಹಿರಿಯರ ಋಣತೀರಿಸುವದು ಅಸಾಧ್ಯದ ಮಾತು, ಆದರೆ ಕನಿಷ್ಠ ಪಕ್ಷ ಸಾಸಿವೆ ಕಾಳಷ್ಟಾದರೂ ಈ ಬದುಕನ್ನು ಸಂಸ್ಕಾರ, ಸಂಸ್ಕೃತಿ ಮತ್ತು ಸನ್ಮಾರ್ಗ ಪಥದಲ್ಲಿ ನಡೆದು ಬದುಕನ್ನು ನಂದಾದೀಪ ಮಾಡಿಕೊಂಡು ಮತ್ತೊಬ್ಬರ ಬಾಳಿಗೆ ಬೆಳಕಾಗಿ ನಿಂತರೆ ಸ್ವಲ್ಪವಾದರೂ ಅವರ ಋಣ ತೀರಿಸಿದಂತಾಗುತ್ತದೆ ಎಂದರು.
ಹಿರಿಯ ಶಿಕ್ಷಕರಾದ ಎಸ್ ಬಿ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಮೌಲ್ಯಯುತವಾದ ಜೀವನ ಸಾಕಾರ ಜೀವನವಾಗಿ ರೂಪಗೊಳ್ಳುತ್ತದೆ. ಸರಿಯಾದ ಆರೋಗ್ಯ ಭಾಗ್ಯವನ್ನು ಕಾಪಾಡಿಕೊಂಡು ಇಂದಿನ ಯುವ ಪೀಳಿಗೆ ಬದುಕ ಬೇಕಾಗಿದೆ ಎಂದರು.
ಎಸ್ ಡಿ ಎಮ್ ಸಿ ಅಧ್ಯಕ್ಷರಾದ ನಾನಾಗೌಡ ಕೆ ಬಿರಾದಾರ ಮಾತನಾಡಿ ವಿದ್ಯಾಥರ್ಿಯ ಜೀವನ ಬಂಗಾರ ಜೀವನವಿದ್ದಂತೆ ಅದನ್ನು ಯಾರು ಹಾಳು ಮಾಡಿಕೊಳ್ಳಬಾರದು ಮತ್ತು ದುಷ್ಟಚಟಗಳಿಂದ ದೂರವಿರಬೇಕೆಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದ ವೇದಿಕೆ ಮೇಲೆ ಶಂಕರಗೌಡ ಪಾಟೀಲ, ಬಮ್ಮಗೊಂಡ ಪಾಸೋಡಿ, ಹಿರಗಣ್ಣ ಪಾಸೋಡಿ, ಮಹಾಂತೇಶ ಅಲೇಗಾಂವಿ, ಶಾಲಾ ಮುಖ್ಯಗುರುಗಳು ಆರ್ ಎನ್ ಕಂದಗಲ್, ಎಸ್ ಎಸ್ ಬಸಗೊಂಡ, ಎಮ್ ಎಮ್ ಕೋಳಿ, ಎ ಎ ಬಿರಾದಾರ, ಎಸ್ ಜಿ ಅವಜಿ, ಕೆ ಎಚ್ ಸಮಗಾರ, ಸಿ ಆರ್ ಸುಧಾಮ ಉಪಸ್ಥಿತರಿದ್ದರು, ಮಹಾಂತೇಶ ಕೋಳಿ ಸ್ವಾಗತ್ತಿಸಿದರು, ಹಣಮಂತ ಪೂಜಾರಿ ನಿರುಪಿಸಿ ವಂದಿಸಿದರು ನಂತರ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.