ಬದಲಾದ 'ಸುಪ್ರೀಂ' ನಿಲುವು, ತ್ವರಿತವಾಗಿ ಅಲೋಕ್ ವಮರ್ಾ ಅಜರ್ಿ ವಿಚಾರಣೆ!

ನವದೆಹಲಿ: ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋಟರ್್ ಅವರಣದಲ್ಲಿ ಇಂದು ಕೆಲ ಕುತೂಹಲಕಾರಿ ಘಟನೆಗಳು ನಡೆದಿದ್ದು, ಸಿಬಿಐ ನಿದರ್ೆಶಕ ಅಲೋಕ್ ಕುಮಾರ್ ಅವರ ಅಜರ್ಿಯ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದ್ದ ಕೋಟರ್್ ಇದೀಗ ದಿಢೀರ್ ತನ್ನ ನಿಲುವು ಬದಲಿಸಿ ಇಂದು ಸಂಜೆಯೇ ಅಜರ್ಿ ವಿಚಾರಣೆ ನಡೆಸುವುದಾಗಿ ಹೇಳಿದೆ. 

ಕೇಂದ್ರ ಸಕರ್ಾರ ತಮ್ಮನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಕ್ರಮವನ್ನು ಪ್ರಶ್ನಿಸಿ ಸಿಬಿಐ ನಿದರ್ೆಶಕ ಅಲೋಕ್ ವಮರ್ಾ ಅವರು ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರ ಮೂಲಕ ತಮ್ಮ ಅಜರ್ಿ ಸಲ್ಲಿಕೆ ಮಾಡಿದ್ದರು. ಈ ಅಜರ್ಿಯ ವಿಚಾರಣೆಯನ್ನು ಇಂದು ನಡೆಸಿದ ನ್ಯಾಯಾಲಯ ಅಜರ್ಿಯ ತುತರ್ು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿತ್ತು. 

ಸಿಜೆಐ ರಂಜನ್ ಗಗೋಯ್, ನ್ಯಾ. ಎಸ್ ಕೆ ಕೌಲ್ ಮತ್ತು ಕೆ.ಎಂ ಜೋಸೆಫ್ ಅವರ ತ್ರಿಸದಸ್ಯ ಪೀಠ ಅಜರ್ಿಯ ವಿಚಾರಣೆ ನಡೆಸಿತ್ತು. ಇಂದು ಬೆಳಗಿನ ವಿಚಾರಣೆ ವೇಳೆ ಅಲೋಕ್ ವಮರ್ಾ ಅವರ ಗೌಪ್ಯ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ ನೀವೂ ಯಾರೂ ಕೂಡ ವಿಚಾರಣೆ ಆಲಿಸಲು ಅರ್ಹರಲ್ಲ ಎಂದು ಹೇಳುವ ಮೂಲಕ ಹೇಳಿಕೆ ಸೋರಿಕೆಯನ್ನು ತೀವ್ರವಾಗಿ ಖಂಡಿಸಿತ್ತು. 

ಇದೇ ವೇಳೆ ಅಲೋಕ್ ವಮರ್ಾ ಪರ ವಕೀಲ ನಾರಿಮನ್ ಅವರು ಅಜರ್ಿಯ ತುತರ್ು ವಿಚಾರಣೆಗೆ ಮನವಿ ಮಾಡಿದರು. ಈ ವೇಳೆ ಆರಂಭದಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದ ನ್ಯಾಯಪೀಠ ಬಳಿಕ ಪ್ರಕರಣದ ಗಂಭೀರತೆಯನ್ನು ಪರಿಶೀಲಿಸಿ ಇಂದಿನ ಕೋಟರ್್ ಕಲಾಪ ಅವಧಿ ಮುಕ್ತಾಯದ ಬಳಿಕ ಅಜರ್ಿಯ ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ವೇಳೆ ವಕೀಲ ನಾರಿಮನ್ ರನ್ನು ಉದ್ದೇಶಿಸಿದ ನ್ಯಾಯಪೀಠ, ನಾರಿಮನ್ ಅವರೇ ಇದು ನಿಮಗಾಗಿ ಮಾತ್ರ. ನಿಮ್ಮ ಹಿರಿತನಕ್ಕೆ ಕೋಟರ್್ ಗೌರವ ನೀಡುತ್ತದೆ ಮತ್ತು ಕೋಟರ್್ ಅತ್ಯಂತ ಗೌರವಿಸುವ ಕೌನ್ಸಿಲ್ ಸದಸ್ಯರು ನೀವು. ಹೀಗಾಗಿ ನಿಮಗಾಗಿ ಕೋಟರ್್ ಕಲಾಪದ ಅವಧಿ ಮುಕ್ತಾಯದ ಬಳಿಕ ಅಜರ್ಿಯ ವಿಚಾರಣೆ ನಡೆಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.