ಹೀರಾತುಗಳಲ್ಲಿ ಕನ್ನಡ ಬಳಕೆಗೆ ಕರವೇ ಒತ್ತಾಯ


ಲೋಕದರ್ಶನ ವರದಿ

ಬೆಳಗಾವಿ : ಕನ್ನಡ ಭಾಷೆಯನ್ನು ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕಡ್ಡಾಯವಾಗಿ ಬಳಸಲು ಕ್ರಮ ಕೈಗೊಳಬೇಕೆಂದು ಒತ್ತಾಯಿಸಿ ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬುಧವಾರದಂದು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಬುಧವಾರ ದಿನದಂದು ಈ ಕುರಿತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಜಾಹೀರಾತು ಫಲಕಗಳು, ಹೋಡರ್ಿಂಗ್, ಅಂಗಡಿ ಮುಗಟ್ಟುಗಳ, ಶಾಲಾ ಕಾಲೇಜ್ ನಾಮಫಲಕ, ರಾಜಕಾರಣಿಯ ಶುಭಾಶಯ ಕಟೌಟಗಳಲ್ಲಿ ಕನ್ನಡವನ್ನು ಬಳಸಲು ಈ ಮೂಲಕ ಒತ್ತಾಯಿಸಲಾಗಿದೆ.

ಪ್ರಸ್ತುತ ಕನ್ನಡ ಬಳಕೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಅರೋಪಿಸಲಾಗಿದ್ದು, ಸಕರ್ಾರದ ಆದೇಶ ಪಾಲಿಸಬೇಕಾದ ಪಾಲಿಕೆ ಅಧಿಕಾರಿಗಳು ಆದೇಶ ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಎಲ್ಲದರಲ್ಲಿ ಶೇ.75ರಷ್ಟು ಕನ್ನಡವನ್ನು ಬಳಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ. 

ಮುಂಬರುವ 15 ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಕನ್ನಡ ಬಳಕೆ ಮಾಡದ ಜಾಹೀರಾತುಗಳನ್ನು ಕಿತ್ತು, ಮಸಿ ಬಳಿಯಬೇಕಾಗುತ್ತದೆ ಎಂದು ಮನವಿಯಲ್ಲಿ ಕರವೇ ಜಿಲ್ಲಾ ಘಟಕ ಎಚ್ಚರಿಸಿದೆ. ಇಂದಿನ ಪ್ರತಿಭಟನೆಯಲ್ಲಿ ಮಹಾದೇವ ತಳವಾರ ಸುರೇಶ ಗವನ್ನವರ, ದೀಪಕ ಗುಡಗನಟ್ಟಿ, ದೇವೆಂದ್ರ ತಳವಾರ, ಗಜಾನನ ಶಿಂಗೆ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.