ಬಾಗಲಕೋಟೆ 04: ಪ್ರತಿಷ್ಠೆಯ ಕಣವಾಗಿದ್ದ ಜಮಖಂಡಿ ಉಪ ಚುನಾವಣೆಗೆ ಮತದಾನ ಮುಗಿದ್ದು, ಎಲ್ಲೆಡೆ ಅಭ್ಯಥರ್ಿಗಳ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿದೆ. ಮತದಾರ ಯಾರಿಗೆ ವರವಾಗಿದ್ದಾರೆಂಬು ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಯಾರು ಗೆಲ್ಲವರು ಎಂಬ ಕುತುಹಲ ಮೂಡಿಸಿದೆ.
ಕಳೆದ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಅಭ್ಯಥರ್ಿಗಳ ನಡುವೆ ಸ್ಪಧರ್ೆಯಲ್ಲಿ ಕುದೆಳೆಯ ಅಂತರದಲ್ಲಿ ಕಾಂಗ್ರೇಸ್ ಅಭ್ಯಥರ್ಿ ಜಯ ಸಾಧಿಸಿದ್ದ ಸಿದ್ದು ನ್ಯಾಮಗೌಡರ ರಸ್ತೆ ಅಪಘಾತದಲ್ಲಿ ನಿಧನರಾಗಿರುವದರಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯಥಿ ಆನಂದ ನ್ಯಾಮಗೌಡ ಹಾಗೂ ಬಿಜೆಪಿ ಅಭ್ಯಥರ್ಿ ಶ್ರಿಕಾಂತ ಕುಲಕಣರ್ಿ ಮದ್ಯೆ ತೀವ್ರ ಪೈಪೋಟಿ ನಡೆದಿದೆ.
ಈ ಬಾರಿ ಉಪ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದ್ದು, ಎರಡು ಪಕ್ಷಗಳು ಸಮಬಲದಲ್ಲಿವೆ ಎಂಬ ಮಾತು ಕೇಳಿ ಬರುತ್ತಿವೆ. ಮತದಾರರ ನಿಧರ್ಾರ ಮತಪೆಟ್ಟಿಕೆಯಲ್ಲಿ ಭದ್ರವಾಗಿದ್ದು, ಯಾರು ಜಯ ಸಾಧಿಸಲಿದ್ದಾರೆಂಬುದನ್ನು ನವೆಂಬರ 6ರ ವರೆಗೆ ಕಾಯಲೇಬೇಕಾಗಿದೆ. ಈಗಾಗಲೇ ಮತದಾನದ ಲೆಕ್ಕಾಚಾರ ಶುರುವಾಗಿದ್ದು, ಯಾವ ಯಾವ ಅಭ್ಯಥರ್ಿಗಳಿಗೆ ಎಷ್ಟು ಎಷ್ಟು ಮತಗಳು ಬಿದ್ದಿರಬಹುದೆಂಬರ ಲೆಕ್ಕಾಚಾರದಲ್ಲಿ ಎರಡು ಪಕ್ಷಗಳು ತೊಡಗಿವೆ.
ಸಿದ್ದು ನ್ಯಾಮಗೌಡರಿಂದ ತೆರವಾದ ಸ್ಥಾನಕ್ಕೆ ಅವರ ಮಗ ಆನಂದ ನ್ಯಾಮಗೌಡರ ಅವರಿಗೆ ಅನುಕಂಪವೋ ಇಲ್ಲವೇ ಎರಡು ಬಾರಿ ಸೋತು ಮುಂದಿನ ಚುನಾವಣೆಗೆ ಸ್ಪಧರ್ಿಸಲ್ಲ ಎಂದ ಶ್ರೀಕಾಂತ ಕುಲಕಣರ್ಿ ಅವರ ಪರವಾಗಿ ಇರುತ್ತದೆಯೋ ಎಂಬ ಕಾತುರ ಎಲ್ಲರಲ್ಲಿದೆ. ಆದರೆ ಈ ಬಾರಿ ಕಳೆದ ಚುನಾವಣೆಗಿಂತ ದಾಖಲೆ ಮತದಾನವಾಗಿದ್ದು, ಮತದಾರ ಯಾರಿಗೆ ವಲಿಯಲಿದ್ದಾರೆ ಎಂಬುದನ್ನು ನವೆಂಬರ 6ರ ವರೆಗೆ ಕಾಯಲೇಬೇಕು.
ಕಳೆದ 2013ರ ಚುನಾವಣೆಯಲ್ಲಿ ಶೇ.74.26 ರಷ್ಟು ಮತದಾನವಾದರೆ 2018ರ ಚುನಾವಣೆಯಲ್ಲಿ ಶೇ.69 ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಉಪ ಚುನಾವಣೆಯಲ್ಲಿ ಶೇ.77.17 ರಷ್ಟು ಮತದಾನವಾಗಿದೆ. ಉಪ ಚುನಾವಣೆಯಲ್ಲಿ ಒಟ್ಟು 7 ಅಬ್ಯಥರ್ಿಗಳು ಸ್ಪಧರ್ಿಸಿದ್ದರೂ ಸಹ ನೇರ ಪೈಪೋಟಿ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯಥರ್ಿಗಳ ನಡುವೆ ಇತ್ತು. ಇಬ್ಬರು ಅಭ್ಯಥರ್ಿಗಳು ಅನುಕಂಪ ಪಡೆಯಲು ಮುಂದಾಗಿದ್ದರು.