ಜಕರಾಯ ಪೂಜಾರಿ, ಸತೀಶ ಪಾಟೀಲ ಆಯ್ಕೆ

Zakaray Pujari, Satish Patil selected

ವಿಜಯಪುರ 10: ರೈತ ಈ ದೇಶದ ಬೆನ್ನೆಲುಬು ಎಂದು ಪ್ರತಿಬಾರಿ ಚುನಾವಣೆಯ ಸಂದರ್ಭದಲ್ಲಿ ರೈತರಿಗೆ ಹೇಳಿ ಆರಿಸಿ ಬಂದಂತಹ ಜನಪ್ರತಿನಿಧಿಗಳು ರೈತರಿಗೆ ಕಷ್ಟಗಳು ಒದಗಿಬಂದಾಗ ಧ್ವನಿ ಎತ್ತದೆ ಮೊಸ ಮಾಡುತ್ತಿದ್ದಾರೆ, ರೈತರೆಲ್ಲರು ಸಂಘಟಿತರಾಗಿ ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಿಕೊಂಡರೆ ಮಾತ್ರ ರೈತರಿಗೆ ನ್ಯಾಯ ಸಿಗಬಹುದು ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಅಂದರು. 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲಾ ಸಂಚಾಲಕರಾಗಿ ಜಂಬಗಿ ಗ್ರಾಮದ ಜಕರಾಯ ಪೂಜಾರಿ ಹಾಗೂ ಕನ್ನೂರ ಗ್ರಾಮದ ಸತೀಶ ಪಾಟೀಲ ಅವರನ್ನು ಸಂಚಾಲಕರಾಗಿ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಜಿಲ್ಲಾ ಕಚೇರಿಯಲ್ಲಿ ಆದೇಶ ಪ್ರತಿ ನೀಡಿ ಸಂಘದ ತತ್ವ ಸಿದ್ದಾಂತವನ್ನು ತಿಳಿ ಹೇಳಿ ಸಂಘಟನೆ ಬಲಪಡಿಸಿ ರೈತರ ಕಷ್ಟಗಳಿಗೆ ಬೆನ್ನೆಲುಬಾಗಿ ಯಾವುದೇ ರಾಜಕೀಯ ಪಕ್ಷದ ಆಸೆಗಳಿಗೆ ಬಲಿಯಾಗದೇ ನಿಷ್ಠೆಯಿಂದ ಸಂಘಟನೆ ಮಾಡುವಂತೆ ಹೇಳಿದರು. 

ರೈತ ಸಂಘಟನೆ ಜವಾಬ್ದಾರಿ ಬಹು ಮುಖ್ಯವಾದದು, ಜಿಲ್ಲೆಯ ರೈತರಿಗೆ ಯಾವುದೇ ರೀತಿಯ ಅನ್ಯಾಯ ಆದರೆ ತಕ್ಷಣದಿಂದಲೇ ಕಾರ್ಯಪ್ರವತ್ತರಾಗಿ ನ್ಯಾಯಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು, ಜಿಲ್ಲೆಯ ಎಲ್ಲಾ ತಾಲೂಕು, ಹೊಬಳಿ ಹಾಗೂ ಗ್ರಾಮಗಳಲ್ಲಿ ರೈತ ಸಂಘದ ಘಟಕಗಳನ್ನು ಮಾಡಬೇಕು ಅದರಲ್ಲಿ ಹಿರಿಯರ, ಕಿರಿಯರ ಹಾಗೂ ಮಹಿಳಾ ಘಟಕದ ಸದಸ್ಯರನ್ನ ಸೇರಿಸಿ ಸಂಘಟನೆ ಮಾಡಬೇಕು ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಕೋಲಾರ ಅಧ್ಯಕ್ಷರಾದ ಸೋಮು ಬಿರಾದಾರ, ಸಂಚಾಲಕರಾದ ಜಕರಾಯ ಪೂಜಾರಿ, ಸತೀಶ ಪಾಟೀಲ, ಸಂಗಪ್ಪ ಟಕ್ಕೆ, ಮುತ್ತು ಬಿರಾದಾರ, ಬಸ್ಸು ನ್ಯಾಮಗೊಂಡ, ಸುಭಾಸ ಹಿಟ್ಟನಳ್ಳಿ, ಶರಣಪ್ಪ ಜಮಖಂಡಿ ಸೇರಿದಂತೆ ಅನೇಕರು ಇದ್ದರು.