ಮಿಲ್ಲತ್ ಶಿಕ್ಷಣ ಸಂಸ್ಥೆಗೆ ಅಧ್ಯಕ್ಷರಾಗಿ ಜಹೀರ್ಅಲಿ ಆಯ್ಕೆ

ಲೋಕದರ್ಶನ ವರದಿ

ಕೊಪ್ಪಳ 06: ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸಂಸ್ಥೆಯ ನಿದರ್ೇಶಕರಾಗಿದ್ದ ಎಂ.ಡಿ.ಜಹೀರ್ಅಲಿ ಅವಿರೋಧ ಆಯ್ಕೆಗೊಂಡಿದ್ದಾರೆ. ಇತ್ತೀಚಿಗಷ್ಟೇ ಮಿಲ್ಲತ್ ಶಾಲಾ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಸದರಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು.

ನೂತನ  ಅಧ್ಯಕ್ಷರ ಆಯ್ಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಸಲಹೆಗಾರ ಹಾಗೂ ಆಡಳಿತಮಂಡಳಿ ಸಂಸ್ಥಾಪಕ ನಿರ್ದೇಶಕ ಎಂ. ಸಾದಿಕ್ ಅಲಿಯವರು ನೂತನ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ನೂತನ ಅದ್ಯಕ್ಷರ ಅವಧಿ ಮಾರ್ಚ್  01 ರಿಂದ ಬರುವ 2021 ಫೆಬ್ರುವರಿ 28 ರವರೆಗೆ ಇರುತ್ತದೆ. ಸಭೆಯಲ್ಲಿ ಸಂಸ್ಥಾಪಕ ಹಾಗೂ ಆಡಳಿತ ಮಂಡಳಿಯ ಪ್ರಥಮ ಅಧ್ಯಕ್ಷ ಸೈಯದ್ ಗೌಸ್ಪಾಶಾ ಖಾಜಿ ಸೇರಿದಂತೆ ಹಾಲಿ ಅಧ್ಯಕ್ಷ ಸೈಯದ್ ಇಮಾಮ್ಹುಸೇನ್ ಸಿಂದೋಗಿ, ಆಡಳಿತ ಮಂಡಳಿ ನಿರ್ದೇಶಕರಾದ ಸೈಯದ್ ನಜೀರ್ ಅಹ್ಮದ್, ಅಮ್ಜದ್ಪಟೇಲ್,  ದಾವುದ್ ಹುನಗುಂದ, ಎಂ.ಪಾಶಾ ಕಾಟನ್, ಅಬ್ದುಲ್ ಅಜೀಜ್ ಮಾನ್ವೀಕರ್, ಎಂ.ಡಿ.ಆಸೀಫ್ ಅಲಿ ಕರ್ಕಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ನಂತರ ನೂತನ ಅಧ್ಯಕ್ಷ ಎಂ.ಡಿ.ಜಹೀರ್ಅಲಿಯವರಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ಅಭಿನಂದಿಸಿದರು. ಮಿಲ್ಲತ್ ಪಬ್ಲಿಕ್ಶಾಲೆಯ ಶಿಕ್ಷಕ ವರ್ಗದಿಂದ ದಿ. 07ರಂದು ಶಾಲಾ ಸಭಾಂಗಣದಲ್ಲಿ ಅಭಿನಂದನೆ ಮತ್ತು ಸನ್ಮಾನ ಸಮಾರಂಭ ಜರುಗಲಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಮಹ್ಮದ್ ಅಜೀಜ್ ರೇವಡಿ ತಿಳಿಸಿದ್ದಾರೆ.