ಎಂಎಸ್ ಧೋನಿ ವಿರುದ್ಧ ವಾಗ್ದಾಳಿ ನಡೆಸಿದ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್

ಮುಂಬೈ 03: ಭಾರತದ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಝೀ ಸ್ವಿಚ್‌ಗೆ ನೀಡಿದ ಸಂದರ್ಶನದಲ್ಲಿ ವೇಳೆ ಯೋಗರಾಜ್ ಸಿಂಗ್, ಧೋನಿ ಯುವರಾಜ್ ಅವರ ವೃತ್ತಿಜೀವನವನ್ನು ಹಾಳುಮಾಡಿದರು. ಧೋನಿಯ ಪ್ರಭಾವವಿಲ್ಲದಿದ್ದರೆ, ಯುವರಾಜ್ ಅವರ ವೃತ್ತಿಜೀವನವು ಇನ್ನೂ ನಾಲ್ಕೈದು ವರ್ಷಗಳವರೆಗೆ ಇರುತ್ತದೆ ಎಂದು ಹೇಳಿದರು.

ನಾನು ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ.  ಧೋನಿ ಮಹಾನ್ ಕ್ರಿಕೆಟಿಗರಾಗಿರಬಹುದು. ಆದರೆ ಅವರು ನನ್ನ ಮಗನಿಗೆ ಮಾಡಿದ್ದನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ನಾನು ಜೀವನದಲ್ಲಿ ಎರಡು ಕೆಲಸಗಳನ್ನು ಮಾಡುವುದಿಲ್ಲ. ಮೊದಲನೆಯದಾಗಿ, ನನಗೆ ಅನ್ಯಾಯ ಮಾಡಿದವರನ್ನು ಕ್ಷಮಿಸಲ್ಲ. ಎರಡನೆಯದಾಗಿ, ನಾನು ಅವರನ್ನು ಭೇಟಿಯಾದಾಗ ಎಂದಿಗೂ ಅವರನ್ನು ತಬ್ಬಿಕೊಳ್ಳುವುದಿಲ್ಲ ಎಂದು ಹೇಳಿದರು.