ಲೋಕದರ್ಶನ ವರದಿ
ಕೂಡ್ಲಿಗಿ27: ಸೈನಿಕರು ಆದರ್ಶಗಳನ್ನು ಮೈಗೂಡಿಸಿಕೊಳ್ಳವ ಮೂಲಕ ಯುವಕರು ದೇಶ ಭಕ್ತಿ ಬೆಳೆಸಿಕೊಳ್ಳಬೇಕು
ಎಂದು ಉಪನ್ಯಾಸಕ ಪಿ. ಉಮೇಶ್ ಹೇಳಿದರು. ಅವರು ಸ್ಥಳೀಯ ಎಸ್ಎವಿಟಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಗುರುವಾರ ಯುವ ಬ್ರಿಗೇಡ್ ವತಿಯಿಂದ ಏರ್ಪಡಿಸಿದ್ದ ಕಾಗರ್ಿಲ್ ಯುದ್ದದ ವಿಜಯೋತ್ಸವದ 19ನೇ ವಷರ್ಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಜನರು ಇಂದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮ ಸೈನಿಕರೇ ಕಾರಣರಾಗಿದ್ದಾರೆ. ಅವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಚಳಿ, ಮಳೆ, ಗಾಳಿ ಎನ್ನದೆ ದೇಶದ ಗಡಿ ಕಾಯುತ್ತಿದ್ದು, ನಮ್ಮ ಮೇಲೆ ಎರಗುವ ಎದುರಾಳಿಗಳನ್ನು ಹಿಮ್ಮೆಟ್ಟಿ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ.
ಅದರಲ್ಲೂ 1999ರಲ್ಲಿ ನಡೆದ ಕಾಗರ್ಿಲ್ ಯುದ್ದದಲ್ಲಿ ನಮ್ಮ ಸೈನಿಕರು ದೇಶ ರಕ್ಷಣೆಗಾಗಿ ವೀರಾವೇಶದಿಂದ ಹೋರಾಡಿದ ನೂರಾರು ಸೈನಿಕರು ಮಾತೃಭೂಮಿಗಾಗಿ ಹುತಾತ್ಮರಾಗಿ ನಮಗೆ ನೀಡಿ ಹೋದ ವಿಜಯದ ದಿನವೇ ಕಾಗರ್ಿಲ್ ಯುದ್ದ ವಿಜಯೋತ್ಸವ. ಈ ಯುದ್ದದಲ್ಲಿ ಹುತಾತ್ಮರಾದ ಸೈನಿಕರನ್ನು ಪ್ರತಿ ದಿನ ನೆನೆಯುವುದೇ ನಾವು ಅವರಿಗೆ ನೀಡುವ ಅತಿ ದೊಡ್ಡ ಗೌರವವಾಗಿದೆ ಎಂದರು.
ಮಾಜಿ ಸೈನಿಕ ಎಚ್. ರಮೇಶ್ ಮಾತನಾಡಿ, ಕಾಗರ್ಿಲ್ ಯುದ್ದ ದೇಶದ ರಕ್ಷಣೆಯ ಪ್ರಶ್ನೆಯಾಗಿತ್ತು. ಈ ಯುದ್ದವನ್ನು ನಾವು ಗೆಲ್ಲಲೇ ಬೇಕು ಎಂದು ಪಣ ತೊಟ್ಟಿದ್ದ ಅನೇಕ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಯುದ್ದವನ್ನು ಜಯಿಸುವ ಮೂಲಕ ಹುತಾತ್ಮರಾದರು ಎಂದು ನೆನೆದರು. ಮತ್ತೊಬ್ಬ ಮಾಜಿ ಸೈನಿಕ ಅಜೇಯ ಕುಮಾರ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಜಿಲಾನ್ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವ ಬ್ರಿಗೇಡ್ ತಾಲ್ಲೂಕು ಸಂಚಾಲಕ ಕೆ.ಎಚ್.ಎಂ. ಸಚಿನ್ ಕುಮಾರ್, ಮಾಳ್ಗಿ ಗುರುರಾಜ್, ಮಣಿ, ಉಪನ್ಯಾಸಕರಾದ ಅನಿಲ್ ಕುಮಾರ್, ಪ್ರಶಾಂತ ಕುಮಾರ್, ದೈಹಿಕ ಶಿಕ್ಷಣ ನಿದರ್ೇಶಕ ಗುರುಬಸವರಾಜ ಇದ್ದರು. ವಿದ್ಯಾಥರ್ಿನಿಯರಾದ ಚಂದ್ರಮತಿ, ಸುಪ್ರಿಯಾ, ವಿಜಯಲಕ್ಷ್ಮಿ ನಿರ್ವಹಿಸಿದರು.