ಯುವಸ್ಪಂದನ: ಅರಿವು ಕಾರ್ಯಕ್ರಮ

ಕೊಪ್ಪಳ 24: ಕಲೆ, ನೃತ್ಯ, ಸಾಹಿತ್ಯ, ಜಾನಪದ, ಐತಿಹಾಸಿಕ ಹಾಗೂ ಯುವಕರಿಗೆ ಪ್ರಸ್ತುತ ಜೀವನದಲ್ಲಿ ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಎಂದು ತಾಲೂಕು ಯುವ ಪರಿವರ್ತಕರಾದ ಮಂಜುನಾಥ ದಾಸರ ಅವರು ಅಭಿಪ್ರಾಯ ಪಟ್ಟರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಕಲ್ಪ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಸಂಸ್ಥೆ, ಎಪಿಡಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರು ಅನುಷ್ಠಾನಗೊಳ್ಳುತ್ತಿರುವ ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾದ ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅರಿವು ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಜೀವನ ಶೈಲಿಗಳು, ಸಂಬಂಧಗಳು ವೈಯಕ್ತಿಕ ಬೆಳವಣಿಗೆಗಳ ಸಂರಕ್ಷತೆ, ಲಿಂಗ, ವೃತ್ತಿ ಸ್ಥೂಲ ಹಾಗೂ ಆರ್ಥಿಕತೆ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಹಾಗೂ ಮಾನಸಿಕ ಅರಿವು, ಮಾನಸಿಕ ಅಸ್ವಸ್ಥತೆ, ಸಂವಹನ ಸಮಸ್ಯೆಗಳು ಹಾಗೂ ಅದರ ಪರಿಹಾರಗಳ ಕುರಿತು ತಿಳಿಸಿಕೊಡಲಾಯಿತು. ಯುವ ಸ್ಪಂದನ ಕೇಂದ್ರದ ಸಹಾಯವಾಣಿ ಸಂಖ್ಯೆ: 18004251448, ಮೊ. ಸಂ: 9535993848 ಕ್ಕೆ ಕರೆ ಮಾಡಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬಹುದು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ವಿರೇಶ ಎಸ್ ಹಾಗೂ ಉಪನ್ಯಾಸ ವರ್ಗದವರು, ಯುವ ಸ್ಪಂದನ ತಂಡದವರು, ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.