ಯುವಜನತೆ ಡ್ರಗ್ಸ್‌ನಿಂದ ದೂರವಿದ್ದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು: ಭಾವ್ಡೇಕರ್
Youth should stay away from drugs and build a bright future: Bhavdekar
ಬೆಳಗಾವಿ 30: ನಗರದ ಶಹಾಪುರ ಪೊಲೀಸ್ ಠಾಣೆ, ಭಾರತೀಯ ಕುಟುಂಬ ಯೋಜನಾ ಸಂಘ ಮತ್ತು ವಡಗಾವಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ದಿ. 28 ರಂದು “ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ”ವನ್ನು ಆಯೋಜಿಸಲಾಗಿತ್ತು.
ಎಫ್.ಪಿ.ಎ. ಐ. ಬೆಳಗಾವಿ ಶಾಖೆಯ ಅಧ್ಯಕ್ಷರಾದ ಡಾ. ವಿ. ಸಿ. ಭಾವ್ಡೇಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ, 'ಚಕ್ರವನ್ನು ಒಡೆದು ಹಾಕೋಣ, ಸಂಘಟಿತ ಅಪರಾಧವನ್ನು ನಿಲ್ಲಿಸೋಣ' ಎಂಬ ಈ ವರ್ಷದ ಘೋಷ ವಾಕ್ಯವನ್ನು ಹೇಳುತ್ತಾ, ಈ ಕಾರ್ಯಕ್ರಮದ ಉದ್ದೇಶ ಪ್ರತಿಯೊಬ್ಬ ಯುವಕ-ಯುವತಿಯ ಜೀವನ ಅಮೂಲ್ಯವಾದುದು ಆದರೆ ಇಂದು ಡ್ರಗ್ ದುರುಪಯೋಗವು ಅಮೂಲ್ಯ ಭವಿಷ್ಯವನ್ನು ನಾಶ ಪಡಿಸುತ್ತಿದೆ. ಡ್ರಗ್ ಮೊದಲಿಗೆ ಕುತೂಹಲದಿಂದ ನಂತರ ಒತ್ತಡದಿಂದ ಕೊನೆಗೆ ನಶೆಗೆ ಕಾರಣವಾಗುತ್ತದೆ ಇದರಿಂದ ದೂರವಿದ್ದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಶ್ರೀ. ಮಣಿಕಠ ಪೂಜಾರಿ, ಮಾದಕ ದ್ರವ್ಯಗಳ ವಿರುದ್ಧದ ಹೋರಾಟದ ಬಗ್ಗೆ ಮಾತನಾಡಿದರು ಮತ್ತು ಮಾದಕದ್ರವ್ಯ ಮಹಾಮಾರಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಗೂ ಅವರ ಭವಿಷ್ಯವನ್ನು ನಾಶಪಡಿಸುತ್ತದೆ ಎಂದು ಹೇಳಿದರು. ಎಚ್ಚರಿಕೆಯಿಂದ ಇರಿ ಒಂದು ತಪ್ಪು ಹೆಜ್ಜೆ ತಮ್ಮ ದಿಕ್ಕನ್ನೆ ಬದಲಾಯಿಸುವ ಸಾಧ್ಯತೆ ಇದೆ ಎಂದು ಹೇಳುತ್ತಾ ಮಾದಕ ವಸ್ತುಗಳ ಬಗೆಗಳನ್ನು ವಿವರಿಸಿದರು.
ಮಾದಕ ವಿರೊಧಿಸುವ ಕುರಿತು ಪ್ರತಿ ಪ್ರತಿಜ್ಞೆ ಮಾಡಿಸಿ ಡ್ರಗ್ ಮಹಾಮಾರಿ ಮಾನಸಿಕ, ದೈಹಿಕ, ಆರೋಗ್ಯವನ್ನು ಹಾಳು ಮಾಡುವುದರೊಂದಿಗೆ ತಮ್ಮ ಭವಿಷ್ಯವನ್ನು ಹಾಳುಮಾಡುತ್ತದೆ ಎಚ್ಚರಿಕೆಯಿಂದ ಇರಿ ಒಂದು ತಪ್ಪು ಹೆಜ್ಜೆ ತಮ್ಮ ದಿಕ್ಕನ್ನೆ ಬದಲಾಯಿಸುವ ಸಾಧ್ಯತೆ ಇದೆ ಎಂದು ಹೇಳುತ್ತಾ ಮಾದಕ ವಸ್ತುಗಳ ಬಗೆಗಳನ್ನು ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷರು, ಕಾಲೇಜಿನ ಪ್ರಾಂಶುಪಾಲರಾದ ಎಸ್. ಎಸ್. ಸಿಮಾನಿ, ಮಾತನಾಡುತ್ತಾ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂಥಹ ಮಾದಕ ವ್ಯಸನಗಳಿಗೆ ಬಲಿಯಾಗದೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮವನ್ನು ಎಲ್ ಕೆ. ಪೊಳ್, ಉಪನ್ಯಾಸಕರು ನಿರೂಪಿಸಿದರು, ವಿ. ಎನ್. ಮೇಳವಂಕಿ ಗತಿಸಿದರು. ಉಪನ್ಯಾಸಕರು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಎಪ್ .ಪಿ ಎ. ಐ. ಸಿಬ್ಬಂದಿ, ಕಾಲೇಜಿನ ಉಪನ್ಯಾಸಕರು, ಪೊಲೀಸ ಠಾಣೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 