ಯುವಕರು ಚಟಗಳಿಗೆ ದಾಸರಾಗದೇ ಕ್ರೀಡೆಗೆ ದಾಸರಾಗಿ : ಶ್ರೀಕಾಂತ ದುಂಡಿಗೌಡ್ರ
Youth should not become slaves to addictions but slaves to sports: Srikanth Dundigowdra
ಶಿಗ್ಗಾವಿ 10 : ಯುವಕರು ಕೆಟ್ಟ ಹವ್ಯಾಸಗಳಿಗೆ ದಾಸರಾಗುವ ಬದಲು ತಮ್ಮ ಪ್ರತಿ ದಿನದ ಸಮಯದಲ್ಲಿ ಕ್ರೀಡೆಗಳಿಗೆ ಅಲ್ಪ ಸಮಯವನ್ನು ವ್ಯಯ ಮಾಡುವುದರಿಂದ ದೈಹಿಕವಾಗಿ ಸದೃಡರಾಗಬಹುದು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಸ್ವಸ್ತಿಕ ಸ್ಪೋರ್ಟ್ಸ್ ಕ್ಲಬ್ ಶಿಗ್ಗಾವಿ ಆಯೋಜಿಸಿದ್ದ ಶಿಗ್ಗಾಂವ-ಸವಣೂರ ಚಾಂಪಿಯನ್ ಲೀಗ್ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟೀನ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಕ್ರೀಡೆಗಳು ನಮಗೆ ಶಿಸ್ತು, ಸಮಯಪಾಲನೆ ಕಠಿಣ ಪರಿಶ್ರಮವನ್ನು ರೂಪಿಸುತ್ತವೆ.ಗುಂಪಿನ ಆಟಗಳು ನಾಯಕತ್ವ ಕೌಶಲ್ಯಗಳನ್ನು ಬೆಳೆಸುತ್ತದೆ ಅಲ್ಲದೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ಆರೋಗ್ಯಕರ ಜೀವನಶೈಲಿ ಹೊಂದಬಹುದು ಎಂದರು.
ಈ ಸಂದರ್ಭದಲ್ಲಿ ಗದಿಗಯ್ಯ ಸದಾಶಿವಪೇಟೆ, ನಜೀರ ಶೇತಸನದಿ, ಮುಕ್ತಾರ ತಿಮ್ಮಾಪೂರ, ಆನಂದ ಸುಭೇದಾರ, ರಮೇಶ ಸಾತಣ್ಣವರ, ಬಸವರಾಜ ಮಾಯಣ್ಣವರ, ಶಂಕರ ಧಾರವಾಡ, ಸಾಧಿಕ ಸವಣೂರ, ಸಂತೋಷ ಧಾರವಾಡಹಾಗೂ ಕ್ರಿಕೆಟ್ ಆಟಗಾರರು ಯುವಕರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 