ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಖುಷಿಗೆ 603 ಅಂಕ

ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಖುಷಿಗೆ 603 ಅಂಕ  Khushi scores 603 marks in SSLC

ಲೋಕದರ್ಶನ ವರದಿ 

ಧಾರವಾಡ 26 : ಇತ್ತೀಚೆಗಷ್ಟೇ ಪ್ರಕಟಗೊಂಡ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ನಗರದ ಪ್ರಜೆಂಟೇಷನ್ ಆಂಗ್ಲ ಮಾಧ್ಯಮ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಖುಷಿ ಮಲ್ಲಿಕಾರ್ಜುನ ಹೊಸಮನಿ ಒಟ್ಟು 603 (ಶೇ.96.48) ಅಂಕ ಸಂಪಾದಿಸಿದ್ದಾಳೆ. ದ್ವಿತೀಯ ಭಾಷೆ ಕನ್ನಡ ಹಾಗೂ ಸಮಾಜ ವಿಜ್ಞಾನದಲ್ಲಿ 100ಕ್ಕೆ 99 ಅಂಕ ಪಡೆದಿದ್ದಾಳೆ.