ಯುವಕರು ಸಕಾರಾತ್ಮಕವಾಗಿ ಬೆಳೆಯಬೇಕು : ರಾಜಶೇಖರ ದೈವಾಡಿ

ಫುಟ್ಬಾಲ್ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭ

ವಿಜಯಪುರ 27: ಇಂದಿನ ದಿನದಲ್ಲಿ ಎಲ್ಲ ವ್ಯಕ್ತಿಗಳು ಎಲ್ಲಾ ವಿಷಯವನ್ನು ಸಕಾರಾತ್ಮಕವಾಗಿ ತಗೆದುಕೊಳ್ಳಬೇಕು. ಉತ್ತೀರ್ಣ ಅನುತ್ತೀರ್ಣ ಎಂಬ ವಿಷಯವನ್ನು ಬದಿಗಿಟ್ಟು ಸುಂದರ ಭವಿಷ್ಯಕ್ಕೆ ನಾವೆಲ್ಲರೂ ಬೆರತುಕೊಳ್ಳಬೇಕೆಂದು ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರಾಜಶೇಖರ ದೈವಾಡಿಯವರು ಹೇಳಿದರು.  

ಅವರು ನಗರದ ಡಾ. ಬಿ.ಆರ್‌. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಲಯನ್ಸ್‌ ಫುಟ್ಬಾಲ್ ಕ್ಲಬ್ ವತಿಯಿಂದ ಆಯೋಜಿಸಿದ 19 ಒಳಗಿನ ಬಾಲಕ ಬಾಲಕಿಯರ ಆಹ್ವಾನಿತ ಫುಟ್ಬಾಲ್ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಸಮಾಜದಲ್ಲಿ ಕೆಳವರ್ಗದವರೊಂದಿಗೆ ಬೆರೆಯಬೇಕು. ಅವರಲ್ಲಿರುವ ಪ್ರತಿಭೆಗೆ ನಾವು ಬೆಂಬಲಿಸಬೇಕು. ಸಮಾಜದಲ್ಲಿ ತಂದೆ ತಾಯಿ ಮಹತ್ವ ದೊಡ್ಡದಾಗಿದೆ, ಅವರು ನೀಡುವ ಒಳ್ಳೆಯ ಸಂಸ್ಕಾರ ಅರಿತುಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಅದಾದ ನಂತರ ಗುರುವಿನ ಮಾರ್ಗದೊಂದಿಗೆ ನಮ್ಮ ಹೆಜ್ಜೆ ಇತಿಹಾಸದತ್ತ ಸಾಗಬೇಕು. ಒಟ್ಟಿನಲ್ಲಿ ನಮ್ಮ ಜೀವನ ಸಮಾಜಕ್ಕೆ ಮಾದರಿಯಾಗುವಂತೆ ಬೆಳೆಯಬೇಕೆಂದು ಹೇಳಿದರು.  

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಫಯಾಜ ಕಲಾದಗಿ, ಅಧ್ಯಕ್ಷತೆ ವಹಿಸಿದ ಶ್ರೀ ಕೈಲಾಸ್ ಹಿರೇಮಠ ಮಾತನಾಡಿದರು. ಹಿರಿಯ ಆಟಗಾರರಾದ ಸುರೇಶ ಜಮಖಂಡಿ, ಮಾನಿಕ ಗುಳಸ್ಕರ, ಸಂತೋಷ ರಾಠೋಡ, ಪಾರಿತೋಷಕಗಳನ್ನು ಕೊಡಗೆ ಆಗಿ ನೀಡಿದ ದಾರಸಿಂಗ್ ಪವಾರ್ ಮತ್ತು ಕ್ಲಬ್ ನ ಕಾರ್ಯದರ್ಶಿ ವಾಯ. ಬಿ .ಜಂಪ್ಲೆ ವೇದಿಕೆ ಮೇಲೆ ಉಪಸ್ಥಿತಿರಿದ್ದರು. 

ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಲಯನ್ಸ್‌ ಪುಟಬಾಲ್ ಕ್ಲಬ್‌ನ ಬಾಲಕ/ಬಾಲಕೀಯರು ಪ್ರಥಮ ಸ್ಥಾನಕ್ಕೆ ಆಯ್ಕೆಯಾದರು. ಪ್ರಥಮ ಸ್ಥಾನಗೈದ ಕ್ರೀಡಾ ಪಟುಗಳಿಗೆ ಪ್ರಮಾಣಪತ್ರ, ಪದಕಗಳು ಹಾಗೂ ಟ್ರೋಪಿ ವಿತರಿಸಲಾಯಿತು.  

ಈ ಸಂದರ್ಭದಲ್ಲಿ ವಿನಾಯಕ್ ಸಿಂಗೆ, ಸತೀಶ್ ಶಾಪುರ್ ಬಾಬು ಮೈಲಾರಿ, ಸೋಮೇಶ್ ಅಳಗುಂಡಗಿ, ಸಂತೋಷ್ ಕಬಾಡೆ, ಮನೋಜ್ ದೋಡ್ಡಮನಿ, ಪ್ರಜ್ವಲ್ ಭೋಸಲೆ, ಆಕಾಶ್ ಕವಟಗಿ, ಮಾದೇವ್ ಕವಟಗಿ, ಮೊಹಮ್ಮದ, ಹರೀಶ್ ಬೇವಿನಕಟ್ಟಿ, ಬಸು ಬಾಂಡೆಕರ್, ಫ್ರಧೀನ್ ಮುತ್ತವಲ್ಲಿ, ನಿರ್ಣಾಯಕರಾಗಿ ಗಣೇಶ್ ಬಾಂಡೆಕರ್, ನಿಂಗಪ್ಪ ಸುರ​‍್ುರ್, ತಬರೈಜ ಶಿವಣಗಿ, ಜಬೀರ್ ಮುತ್ತವಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣೇಶ ಭೋಸಲೆ ನಿರೂಪಿಸಿ, ಯಲ್ಲಪ್ಪ ಜಂಪಲೆ ವಂದಿಸಿದರು.