ಯುವಕರು ಸ್ವಉದ್ಯೋಗ ಮಾಡಿ: ಸಂಸದ ರಮೇಶ ಜಿಗಜಿಣಗಿ

Youth should be self-employed: MP Ramesh Jigajinagi

ವಿಜಯಪುರ 28: ಎಲ್ಲರಿಗೂ ಸರ್ಕಾರಿ ನೌಕರಿ ಕೊಡಿಸಲು ಸಾಧ್ಯವಿಲ್ಲ. ಹಾಗಾಗಿ ಸ್ವಉದ್ಯೋಗ ಮಾಡುವುದರತ್ತ ಯುವಕರು ಪ್ರಯತ್ನಿಸಬೇಕುಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. 

ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕುಲಕರ್ಣಿ ಆಕ್ಸಿಜನ್ ಪ್ಲಾಂಟ್‌ನಲ್ಲಿ ನಿರ್ಮಿಸಲಾಗಿರುವ ನೂತನ ಛಿಠ2ಕಾರ್ಬನ್‌ಡೈಆಕ್ಸೈಡ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು ಕುಲಕರ್ಣಿ ಆಕ್ಸಿಜನ್ ಪ್ಲಾಂಟ್ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಶ್ರಮ ಹಾಕಿದಿದೆ. ಆರೋಗ್ಯ ತುರ್ತು ಪರಸ್ಥಿತಿ ಇದ್ದಾಗ ಜಿಲ್ಲೆಯಲ್ಲಿ ದೊಡ್ಡ ಇಂಡಸ್ಟ್ರಿ ಪ್ರಾರಂಭಿಸಲು ಸಾಧ್ಯವಿಲ್ಲ. ಕಾರಣ ಕಾರ್ಖಾನೆಗಳಿಗೆ ಕಚ್ಚಾ ಸಾಮಗ್ರಿಗಳು ಈ ಭಾಗದಲ್ಲಿ ಸಿಗುವುದಿಲ್ಲ. ಹಾಗಾಗಿ ವಿಜಯಪುರದಲ್ಲಿ ಕೃಷಿಗೆ ಪೂರಕವಾಗಿರುವಂತಹ ಕಾರ್ಖಾನೆಗಳನ್ನು ಪ್ರಾರಂಭಿಸಬೇಕಿದೆ. ಯುವಕರು ಸ್ವಉದ್ಯೋಗ ಮಾಡಬೇಕು. ಸರ್ಕಾರ ಯುವಕರಿಗಾಗಿಯೇ ಸಾಲ ಸೌಲಭ್ಯ ಒದಗಿಸುತ್ತಿದೆ. ಆ ಸೌಲಭ್ಯ ಬಳಸಿಕೊಂಡು ಸ್ವಾವಲಂಬಿ ಜೀವನ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು. 

ಕುಲಕರ್ಣಿ ಆಕ್ಸಿಜನ್ ಅಧ್ಯಕ್ಷ ವಿ.ಬಿ.ಕುಲಕರ್ಣಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಮಹತ್ವ ಎಲ್ಲರಿಗೂ ಅರ್ಥವಾಗಿದೆ. ಅಠ2 ಕಾರ್ಬನ್‌ಡೈಆಕ್ಸೈಡ್ ಉತ್ಪಾದನೆ ಕೇವಲ ಹುಬ್ಬಳ್ಳಿ ಬೆಳಗಾವಿಯಿಂದ ತರಬೇಕಾಗಿತ್ತು. ಈಗ ನಾವು ವಿಜಯಪುರದಲ್ಲೇ ಪ್ರಾರಂಭಿಸಿದ್ದೇವೆ. ಇದರಿಂದ ಸೋಡಾ ತಯಾರಿ ಮಾಡಿ ಮಾರಾಟ ಮಾಡುವ ಬಡ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದರು. 

ಹಿರಿಯ ಪತ್ರಕರ್ತ ಗೋಪಾಲ ನಾಯಿಕ್ ಮಾತನಾಡಿ, ಕೋವಿಡ್ ಸಮಯದಲ್ಲಿ ಆಕ್ಸಿಜನ್ ಕೊರತೆ ಬಹಳಷ್ಟು ಇತ್ತು. ಅಂದು ಜಿಲ್ಲಾಧಿಕಾರಿಗಳು ದಿನದ 24*7  ಆಕ್ಸಿಜನ್ ಉತ್ಪಾದನೆ ಮಾಡಿ ಅವರು ಸಂಜೀವಿನಿ ಕುಲಕರ್ಣಿ ಎನಿಸಿಕೊಂಡಿದ್ದಾರೆ. 

ಜಿಲ್ಲೆಯ 5 ಜನಖ್ಯಾತ ವೈದ್ಯರಿಗೆ ಸಂಜೀವಿನಿ ಪ್ರಶಸ್ತಿ ನೀಡಿದ್ದಾರೆ. ಇಂದು ಛಿಠ2 ಪ್ರಾರಂಭಿಸಲಾಗಿದೆ. ಬೆಂಕಿ ನಂದಿಸುವಾಗ ಛಿಠ2 ಬಹಳಷ್ಟು ಉಪಯುಕ್ತವಾಗುತ್ತದೆ. 16 ವರ್ಷಗಳಿಂದ ಕುಲಕರ್ಣಿ ಆಕ್ಸಿಜನ್ ಸರಾಗವಾಗಿ ಕೆಲಸ ಮಾಡುತ್ತಿದೆ ಶುಭವಾಗಲಿ ಎಂದರು. 

ಶಿವಾನಂದ ಮಾಸ್ತಿಹೋಳಿ ಮಾತನಾಡಿ, ವಿ. ಬಿ. ಕುಲಕರ್ಣಿಉತ್ಸಾಹಿ ಉದ್ಯಮಿಗಳು, ಪ್ರಾಮಾಣಿಕತೆ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿ ಅವರು ಇಂದು ಕಾರ್ಬನ್‌ಡೈಆಕ್ಸೈಡ್ ಘಟಕ ಉದ್ಘಾಟನೆಯಾಗಿದೆ. ಈ ಛಿಠ2 ಘಟಕ ನಿರಂತರ ವಿಜಯಪುರ ಜನರಿಗೆ ಸೇವೆ ನೀಡಲಿದೆ. 

ಮಕ್ಕಳಿಗೆ ಹೆಚ್ಚಿಗೆ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು. ನಾವು ದೈಹಿಕವಾಗಿ ಸದೃಢವಾಗಿರಬೇಕಾದರೆ ಮೊದಲು ಮಾನಸಿಕವಾಗಿ ಸದೃಢವಾಗಿರಬೇಕು. ನಾವು ಯಾವತ್ತಿಗೂಕಲಿಯುತ್ತಲೇ ಇರಬೇಕು. ಹೊಸ-ಹೊಸ ವಿಚಾರವನ್ನು ಕಲಿಯುವುದರಿಂದ ನಮ್ಮ ಬೌದ್ಧಿಕ ಮಟ್ಟ ನಮಗೆ ಗೊತ್ತಿಲ್ಲದಂತೆ ಬೆಳವಣಿಗೆಯಾಗುತ್ತದೆ. ಯಾವಾಗ ನಾವು ಕಲಿಯುವುದನ್ನು ನಿಲ್ಲಿಸುತ್ತೇವೆಯೋ ಆಗ ನಮಗೆ ವಯಸ್ಸಾಗುತ್ತದೆ ಎಂದರು. 

ಪತ್ರಕರ್ತ ವಾಸುದೇವ ಹೆರಕಲ್ ಮಾತನಾಡಿದರು. 

ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ, ಬೆಳಗಾವಿಯ ಪಾಟೀಲ ಆಕ್ಸಿಜನ್ ಮಾಲೀಕರಾದ ವಿ. ಕೆ. ಪಾಟೀಲ, ಪ್ರಕಾಶ ಅಕ್ಕಲಕೋಟ ವಿಜಯ್ ಜೋಶಿ ವಿಕಾಸ್ ಪದಕಿಗೋವಿಂದ ಜೋಶಿ ರಾಕೇಶ್ ಕುಲಕರ್ಣಿ ಉಪಸ್ಥಿತರಿದ್ದರು.