ಶ್ರೀನಗರ, ಫೆ 07 ,ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಸ್ಥಳೀಯ ಯುವಕನ ಹತ್ಯೆ ಖಂಡಿಸಿ ಶುಕ್ರವಾರ ಕುಪ್ವಾರಾದ ಗಡಿನಾಡಿನ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಸಾಮಾನ್ಯ ಜೀವನಕ್ಕೆ ಧಕ್ಕೆಯಾಗಿದೆ. ಕುನಾನ್ ಮತ್ತು ಪಕ್ಕದ ಪ್ರದೇಶಗಳಲ್ಲಿನ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟು, ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.ಹತ್ಯೆಗೀಡಾದ ಯುವಕನನ್ನು ಕುನಾನ್ ನಿವಾಸಿ ಬಸಿತ್ ಎಂದು ಗುರುತಿಸಿದ್ದು, ಈತ ರಾಜಸ್ಥಾನದ ಜೈಪುರದಲ್ಲಿ ಕ್ಯಾಟರಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಬಸಿತ್ ಮೇಲೆ ಹಲ್ಲೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದರು. "ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಶಸ್ತ್ರಚಿಕಿತ್ಸೆ ಬಳಿಕ ಕೋಮಾಕ್ಕೆ ಜಾರಿದ ಆತ ಇಂದು ಮುಂಜಾನೆ ಮೃತಪಟ್ಟಿದ್ದಾರೆ”ಎಂದು ಸಂಬಂಧಿಕರು ಹೇಳಿದ್ದಾರೆ. ಬಸಿತ್ ಮೇಲೆ ಹಲ್ಲೆಯಾಗಿದ್ದೇಕೆ? ಇದರ ಹಿಂದೆ ಯಾರು ಇದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಏತನ್ಮಧ್ಯೆ, ಕುನನ್ ಮತ್ತು ಪಕ್ಕದ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯ ಜನರು ಬಸಿತ್ ಅವರ ನಿವಾಸದ ಬಳಿ ಜಮಾಯಿಸಿ, ಅವರ ಸಾವಿಗೆ ಪ್ರತಿಭಟಿಸಿದರು.ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆಯಾದರೂ, ನಿಯಂತ್ರಣದಲ್ಲಿದೆ ಎಂದು ತಿಳಿದುಬಂದಿದೆ.