ಲೋಕದರ್ಶನ ವರದಿ
ಧಾರವಾಡ 04: ಯುವಜನಾಂಗ ದೇಶದ ದೊಡ್ಡ ಶಕ್ತಿ. 2020 ರ ಹೊತ್ತಿಗೆ ಭಾರತವು ಇಡೀ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುತ್ತದೆ, ಇದಕ್ಕೆ ಯುವಜನಾಂಗವೇ ಬುನಾದಿ ಎಂದು ಮಾಜಿ ರಾಷ್ಟ್ರಪತಿ ದಿ. ಎ.ಪಿ.ಜೆ. ಅಬ್ದುಲ ಕಲಾಂ ಅವರ ವಿಜನ್ ಇಂಡಿಯಾ ಬಗ್ಗೆ ಹೇಳಿದನ್ನು ಸ್ಮರಿಸಿ, ದೇಶವು ಹೊಸ ಆಥರ್ಿಕ ನೀತಿಯನ್ನು ರೂಪಿಸಿಕೊಂಡು ಸರಿಯಾದ ದಿಶೆಯಲ್ಲಿ ಯುವಜನಾಂಗವನ್ನು ಬಳಸಿಕೊಂಡಿದ್ದೇ ಆದಲ್ಲಿ ಇದು ಸಾಧ್ಯವಾಗಬಲ್ಲದು ಎಂದು ಕನರ್ಾಟಕ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಎನ್. ಜಿ. ಚಚಡಿ ಅಭಿಪ್ರಾಯಪಟ್ಟರು. ಅವರು ಕನರ್ಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕುಮಾರ ವಿಶಾಲ ರಾಜಶೇಖರ ಹಂಚಿನಮನಿ ಸಂಸ್ಮರಣೆ ದತ್ತಿ ಕಾರ್ಯಕ್ರಮಲ್ಲಿ ``ಭಾರತದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ' ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಡಾ. ಚಚಡಿ, ಸರಕಾರದ ರಾಷ್ಟ್ರೀಯ ಆದಾಯದಲ್ಲಿ ಶಿಕ್ಷಣಕ್ಕೆ ಈಗಿರುವ ಶೇ 4 ರಿಂದ 10 ಕ್ಕೆ ನಿದರ್ಿಷ್ಟಪಡಿಸಿ ಶಿಕ್ಷಣಕ್ಕೆ ಆಧ್ಯತೆ ನೀಡಿದಲ್ಲಿ, ಸರಕಾರ ಯುವಜನಾಂಗವನ್ನು ಸುಶಿಕ್ಷಿತರನ್ನಾಗಿ ಮಾಡುವಲ್ಲಿ, ಅವರ ಕೌಶಲ್ಯ ಹೆಚ್ಚಿಸಿ, ಉತ್ತಮ ಆರೋಗ್ಯ ಒದಗಿಸಿ, ಉದ್ಯೋಗ ಸೃಷ್ಠಿ ಮಾಡುವುದರಿಂದ ದೇಶದ ಅಭಿವೃದ್ಧಿಯಾಗುವುದು. ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕವಾದರೂ ಇಲ್ಲಿಯವರೆಗೆ ಶೇ. 76 ರಷ್ಟು ಮಾತ್ರ ಅಕ್ಷರಸ್ಥರು, ಸುಶಿಕ್ಷಿತರಾಗಿದ್ದಾರೆ ಇದು ಖೇದಕರ ಎಂದ ಅವರು, ಯುವಕರು ನಮ್ಮ ದೇಶದ ಇತಿಹಾಸವನ್ನು ಅರಿತುಕೊಂಡು, ಸಾತ್ವಿಕ ವಿಚಾರ, ಸದ್ಗುಣಗಳನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು, ದಿ. ವಿಶಾಲ ಹಂಚಿನಮನಿ ಕುರಿತ ದತ್ತಿ ಕಾರ್ಯಕ್ರಮ ಯುವ ಪೀಳಿಗೆಗೆ ಹೊಸ ಸಂದೇಶ ನೀಡುವಂತಹ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಪ್ರತಿ ವರ್ಷ ಈ ಕಾರ್ಯಕ್ರಮ ಜರುಗಲು ಅವಕಾಶ ಮಾಡಿಕೊಟ್ಟಿರುವ ದತ್ತಿದಾನಿ ಚನ್ನಬಸಪ್ಪ ಮರದ ಹಾಗೂ ಕನರ್ಾಟಕ ವಿದ್ಯಾವರ್ಧಕ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿದ್ದ ಸಿದ್ಧಶಿವಯೋಗಿ ಅಪ್ಪಗಳವರು, ಸಿದ್ಧಾರೂಢ ಆಶ್ರಮ, ದೇವರಹುಬ್ಬಳ್ಳಿ ಅವರು ಮಾತನಾಡಿ, ಈ ದೇಶದ ತರುಣರೇ ದೇಶದ ಅಭಿವೃದ್ಧಿಯ ಭದ್ರಬುನಾದಿ. ತಾರುಣ್ಯದಲ್ಲಿಯೇ ಯುವಕರು ಸಾಧನೆ ಮಾಡಲು ಸಾಧ್ಯ. ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಸುಭಾಷಶ್ಚಂದ್ರ ಭೋಸ, ಭಗತಸಿಂಗ್, ಚಂದ್ರಶೇಖರ ಆಝಾದ, ವೀರಸಾವರಕರ ಮುಂತಾದ ತರುಣರ ಧೈರ್ಯ, ಸಾಹಸ, ತ್ಯಾಗ, ಬಲಿದಾನಗಳನ್ನು ಎಂದೂ ಮರೆಯುವಂತಿಲ್ಲ. ಇಂದಿನ ತಾಂತ್ರಿಕ ಯುಗದಲ್ಲಿ ತರುಣರು ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಆವಿಷ್ಕಾರ, ಸಂಶೋಧನೆ, ಸಂಘಟನೆಯಲ್ಲಿ ತೊಡಗಿಕೊಂಡು ತರುಣರು ದೇಶಕ್ಕೆ ತಮ್ಮಿಂದ ಇನ್ನೂ ಹೆಚ್ಚಿನ ಉತ್ಕೃಷ್ಠ ಕೊಡುಗೆ ನೀಡಿ, ವಿಶ್ವದಲ್ಲಿ ಭಾರತವು ಇನ್ನೂ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವಂತೆ ಕಾರ್ಯ ಮಾಡಬೇಕೆಂದು ಕರೆ ನೀಡಿದರು.
ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2017-18 ನೇ ಸಾಲಿನಲ್ಲಿ ಕೆ.ಎಚ್. ಪಾಟೀಲ ಕಾಮಸರ್್ ಮತ್ತು ಬಿ.ಬಿ.ಎ ಕಾಲೇಜಿನ ವಿದ್ಯಾಥರ್ಿನಿ ಬಿ.ಬಿ.ಎ.ದಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಪೂಣರ್ಿಮಾ ಶೆಟ್ಟರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿ, ತಾನು ಕಲಿತ ಕಾಲೇಜಿನಲ್ಲಿ ದಿ. ವಿಶಾಲ ಒಬ್ಬ ಉತ್ತಮ ವಿದ್ಯಾಥರ್ಿಯೆಂದು ಇಂದಿಗೂ ನೆನಪಿನಲ್ಲಿ ಉಳಿದುಕೊಂಡಿರುವುದು ಆತನ ಜಾಣ್ಮೆ, ಉತ್ತಮ ವ್ಯಕ್ತಿತ್ವ ಹಾಗೂ ಕೌಶಲ್ಯವೆ ಕಾರಣವಾಗಿದೆ ಎಂದು ಹೇಳಿ ಆತನ ಹೆಸರಿನಲ್ಲಿ ಸನ್ಮಾನ ಸ್ವೀಕರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದಳು.
ವೇದಿಕೆಯಲ್ಲಿ ದಿ. ವಿಶಾಲನ ತಾಯಿ ವಿಜಯಲಕ್ಷ್ಮೀ ಹಂಚಿನಮನಿ ಉಪಸ್ಥಿತರಿದ್ದರು. ದಿ. ಕುಮಾರ ವಿಶಾಲ ರಾಜಶೇಖರ ಹಂಚಿನಮನಿ ಅವರ ಭಾವಚಿತ್ರಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು.
ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ದತ್ತಿದಾನಿ, ಚನ್ನಬಸಪ್ಪ ಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಗಸ್ಟ್ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕರಾದ ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತೇಶ ಗಾಮನಗಟ್ಟಿ ವಂದಿಸಿದರು. ಎಸ್.ಎ. ದೇವಲಾಪುರ ಪ್ರಾಥರ್ಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ), ಕಾ.ಕಾ.ಸಮಿತಿ ಸದಸ್ಯ ಬಸವಪ್ರಭು ಹೊಸಕೇರಿ ಹಾಗೂ ಮಾಜಿ ಶಾಸಕ ಎ. ಬಿ. ದೇಸಾಯಿ, ಶಶಿಧರ ತೋಡಕರ, ವೀರಣ್ಣ ಒಡ್ಡಿನ, ವಾಯ್. ಸಿ. ಬಿಜಾಪುರ, ರಾಮಚಂದ್ರ ಧೋಂಗಡೆ, ಮಹೇಶ ಕುಲಕಣರ್ಿ, ದುಗರ್ಾಡೆ, ಶೆಟ್ಟರ ದಂಪತಿಗಳು ಹಾಗೂ ಮರದ ಮತ್ತು ಹಂಚಿನಮನಿ ಪರಿವಾರದವರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.