ಮಹಾಲಿಂಗಪುರ 10 : ತೇರದಾಳ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯರ, ಕಿರಿಯರ ಅಭಿಪ್ರಾಯ ಪಡೆದು ಮತ್ತು ಅವರು ತೋರುವ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಯುವ ಸಮೂಹದ ಸಂಘಟನೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತೇರದಾಳ ಮತ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಪೂಜಾರಿ ಹೇಳಿದರು.
ಪಟ್ಟಣದ ಜಿಎಲ್ ಬಿಸಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಜಾತಿ, ಮತ, ಪಂಥಗಳನ್ನು ಎನಿಸದೆ, ಸರ್ವೆ ಜನ ಜನ ಸುಖಿನೋ ಭವಂತು ತತ್ವದ ಆಧಾರದ ಮೇಲೆ ಆಡಳಿತ ಮಾಡುವ ಪಕ್ಷವಾಗಿದೆ.ಅದೇ ರೀತಿ ನಾವು ಹಳ್ಳಿ, ಹಳ್ಳಿಗಳಲ್ಲಿ ಎಲ್ಲ ಸಮುದಾಯಗಳ ಜನರನ್ನು ಸಮಾನ ರೀತಿಯಲ್ಲಿ ನೋಡಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರೆ್ಡ ಬಯಸುವ ಯುವಕರನ್ನು ಪಕ್ಷಕ್ಕೆ ಸೇರೆ್ಡ ಗೊಳಿಸಿಕ್ಕೊಂಡು ಒಟ್ಟಾರೆ ಸೇರಿ ಕೆಲಸ ನಿರ್ವಹಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುನೀಲ ಹರಿಜನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಣ್ಮಂತ ಲಟ್ಟಿ, ತೇರದಾಳ ಯುತ್ ಅಧ್ಯಕ್ಷ, ಪ್ರವೀಣ ಪೂಜಾರಿ, ರಬಕವಿ-ಬನಹಟ್ಟಿ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಶೇಖ್, ಅಜಯ ಗಾಣಿಗೇರ, ಯುವ ಕಾಂಗ್ರೆಸ್ ತೇರದಾಳ ಮಂಡಲ ಅಧ್ಯಕ್ಷ ಇಲಿಯಾಸ್ ಯಾದವಾಡ , ಯುವ ಮುಖಂಡ ಯಲ್ಲಪ್ಪ ಭಜಂತ್ರಿ ಇದ್ದರು.