ಲೋಕದರ್ಶನ ವರದಿ
ಬೆಳಗಾವಿ 27: ಭಾರತ ದೇಶ ಹೆಚ್ಚಾಗಿ ಯುವಜನರನ್ನು ಹೊಂದಿದ ದೇಶ ಪ್ರಗತಿದಾಯಕ ದೇಶದ ಏಳಿಗೆಗೆ ಹಾಗೂ ಸಮ್ರದ್ಧನಾಡ ಕಟ್ಟಲು ಸಮಾಜಮುಖಿ ಕಾಯ ಮಾಡಿ ಮುಂದಿನ ದಿನಮಾನದಲ್ಲಿ ನಮ್ಮ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಇಂದಿನ ಯುವಜನರ ಮೇಲೆ ಇದೆ. ಆ ನಿಟ್ಟಿನಲ್ಲಿ ಯುವಕರು ಜಾಗ್ರತರಾಗ ಬೇಕೆಂದು ಎಸ್.ಎಲ್.ಬಿ.ಎಸ್ ಕಾಲೇಜು ಪ್ರಾಚಾರ್ಯರಾದ ಪಿ.ಎಸ್.ಪಾಟೀಲ ಯುವನರಿಗೆ ಕರೆ ನೀಡಿದರು. ಅವರು ಕಳೆದ ದಿನಾಂಕ 27 ನವೆಂಬರದಿಂದ 29, ರವರೆಗೆ ಮೂರು ದಿನಗಳ ವರೆಗೆ ವಿಠ್ಠಲ ರುಕ್ಮಾಯಿ ಸಮುದಾಯ ಅಭಿವೃದ್ದಿ ಕಲಾ ಸಂಘ,(ರಿ), ಹರಗಾಪೂರ, ನೆಹರು ಯುವ ಕೇಂದ್ರ, ಬೆಳಗಾವಿ, ಗ್ರಾ.ಪಂ.ಯಾದಗೂಡ ರವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಲಕ್ಷ್ಮೀದೇವಿ ಸಭಾ ಭವನದಲ್ಲಿ ಆಯೋಜಿಸಿದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಹಾಗೂ ಭಾರತೀಯ ಸಂವಿಧಾನ ದಿನಾಚರಣೆ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದರು.
ಪ.ಪೂ ಗುರುದೇವ ದೇವರು, ಪ್ರಭುಲಿಂಗೇಶ್ವರ ಸಂಸ್ಥಾನ ಮಠ, ಕಮತೇನಟ್ಟಿ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಯುವಜನರು ನಮ್ಮ ನಾಡಿನ ಆಸ್ತಿ, ಬೆಳೆಯುವ ವಯಸ್ಸಿನಲ್ಲಿ ವಿವಿಧ ಕ್ಷೇತ್ರದಲ್ಲಿ ತಾವು ಆಸಕ್ತಿಯ ಕಾರ್ಯದಲ್ಲಿ ಕ್ರೀಯಾಶೀಲರಾಗಿ ಕಾರ್ಯ ಮಾಡಬೇಕು. ಇಂತಹ ತರಬೇತಿಗಳು ಯುವಜನರಿಗೆ ದಾರಿದೀಪವಿದ್ದಂತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾಧ ಶ್ರೀಮತಿ. ಸುರೇಖಾ ಸಿ.ಮಗೆಪ್ಪಗೋಳ ವಹಿಸಿದರು. ವೇದಿಕೆಯ ಮೇಲೆ ಲಕ್ಷ್ಮೀದೇವಿ ಕಮಿಟಿಯ ಕಾರ್ಯಕರ್ತರಾದ ದಯಾನಂದ ಮ ಜನಮಟ್ಟಿ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶಿವನಗೌಡ ಬಿ.ಪಾಟೀಲ, ವ್ಹಿ.ಆರ್.ಪೋತದಾರ, ಭರತ ಕಲಾಚಂದ್ರ ಉಪಸ್ಥಿತರಿದ್ದರು. ನೆಹರು ಯುವ ಕೇಂದ್ರ ಲೇಕ್ಕಾಧಿಕಾರಿಗಳಾದ ಆರ್.ಆರ್.ಮುತಾಲಿಕ ದೇಸಾಯಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಧ್ಯೇಯ ಉದ್ದೇಶಗಳನ್ನು ತಿಳಿಸಿದರು. ಮೂರು ದಿನ ನಡೆಯುವ ಈ ಶಿಬಿರದಲ್ಲಿ ವಿವಿಧ ಯುವ ಸಂಘದ 50 ಜನ ಯುವಜನರು ಭಾಗವಹಿಸಿದ್ದರು. ಸುಜಾತಾ ಮಗದುಮ್ಮ ಕಾರ್ಯಕ್ರಮ ನಿರೂಪಿಸಿದರು. ಶಾಂಭವಿ ದೇವಋಷಿ ಸ್ವಾಗತಿಸಿದರು. ಪ್ರಕಾಶ ಜನಮಟ್ಟಿ ವಂದಿಸಿದರು.