ಪರಿಸರ ಸಂರಕ್ಷಣೆಗೆ ಯುವಶಕ್ತಿ: ಹುನಸೇವಾರಿ ಅರಣ್ಯದಲ್ಲಿ ಬೃಹತ್ ಅಭಿಯಾನ
Youth Power for Environmental Conservation: Massive Campaign in Hunasevari Forest
ಬೆಳಗಾವಿ 27: ಯೂತ್ ಫಾರ್ ಸೇವಾ ಬೆಳಗಾವಿ ಜೆ,ಜಿ, ಏನ್, ಡಿ ಭರತೇಶ ಕಾಲೇಜು ಬೆಳಗಾವಿ ಸಂಯುಕ್ತಾಶ್ರಯದೊಂದಿಗೆ ಪರಿಸರ ಸಂರಕ್ಷಣೆ ಮತ್ತು ಅರಣ್ಯೀಕರಣದ ಉದ್ದೇಶದಿಂದ ಕಾಕತಿಯ ಹುಣಸೇವಾರಿ ಅರಣ್ಯ ಪ್ರದೇಶದಲ್ಲಿ ಬೀಜದುಂಡೆ ತಯಾರಿಕೆ ಮತ್ತು ವೃಕ್ಷಾರೋಪಣ" ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವಿಶೇಷ ಅಭಿಯಾನದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂಸೇವಕರು ಹಾಗೂ ಭರತೇಶ ಕಾಲೇಜಿನ ಸ್ವಯಂಸೇವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, 1800 ಕ್ಕೂ ಹೆಚ್ಚು ವಿವಿಧ ಸ್ಥಳೀಯ ಗಿಡಗಳ ಆಯ್ಕೆ: ಮಳೆಗಾಲದಲ್ಲಿ ಸುಲಭವಾಗಿ ಚಿಗುರೊಡೆಯುವ ಹಾಗೂ ಸ್ಥಳೀಯ ವಾತಾವರಣಕ್ಕೆ ಸೂಕ್ತವಾದ ಆಲ, ಬಸರಿ, ಬೇವಿನಂತಹ ವಿವಿಧ ಉಪಯುಕ್ತ ಮರಗಳ ಬೀಜಗಳನ್ನು ಈ ಬೀಜದುಂಡೆಗಳಲ್ಲಿ ಬಳಸಲಾಯಿತು. ಬೀಜದುಂಡೆಗಳನ್ನು ಸಿದ್ಧಪಡಿಸಿ, ಹುಣಸೇವಾರಿ ಅರಣ್ಯದಲ್ಲಿ ಬಿತ್ತನೆ ಮಾಡಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಯೂತ್ ಫಾರ್ ಸೇವಾ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಶ್ರೀ ಸಂತೋಷ ಖೋತ ಅವರು ಮಳೆಗಾಲದ ಈ ಸಮಯದಲ್ಲಿ ಬೀಜದುಂಡೆಗಳನ್ನು ತಯಾರಿಸಿ ಅರಣ್ಯ ಪ್ರದೇಶಗಳಲ್ಲಿ ಬಿತ್ತನೆಮಾಡುವುದರಿಂದ ಅಥವಾ ನೆಡುವುದರಿಂದ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ನೈಸರ್ಗಿಕವಾಗಿ ಸಾವಿರಾರು ಗಿಡಗಳನ್ನು ಬೆಳೆಸಬಹುದೆಂದು ಯುವಜನತೆಯಲ್ಲಿ ಪರಿಸರ ಕಾಳಜಿ ಮೂಡಿಸುವುದು ಹಾಗೂ ಪರಿಸರ ಸಂರಕ್ಷಣೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ, ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕರಾದ ಶ್ರೀ ಸಂತೋಷ ಖೋತ ಹಾಗೂ ಎನ್ ಎಸ್ ಎಸ್ ಸಂಯೋಜಕರಾದ ಶ್ರೀ ಯಲಪ್ಪ ದಬಾಲಿ ಹಾಗೂ ಸ್ವಯಂಸೇವಕರಾದ ಸಮೀಕ್ಷಾ, ಚೈತ್ರಾ, ಪೃಥ್ವಿ, ಭಾಗ್ಯಶ್ರೀ, ಮೇಘಾ, ರಂಜಿತಾ, ಹರ್ಷಿಣಿ, ರೇಣುಕಾ ಮನೀಶ್, ಸವಿತಾ, ಮನಿಷಾ ಇನ್ನು ಹಲವಾರು ಸ್ವಯಂ ಸೇವಕರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 