ಧಾರವಾಡ 24: ಕರ್ನಾ ಟಕ ಕಲಾ ಮಹಾವಿದ್ಯಾಲಯದ ಯುವಜನೋತ್ಸವದ ವಿದ್ಯಾರ್ಥಿ ಗಳ ತಂಡವು ಅಂತರ ವಿಶ್ವವಿದ್ಯಾಲಯದ ವಲಯ ಮಟ್ಟದಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಕರ್ನಾ ಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಎಫ್.ಚಾಕಲಬ್ಬಿ ಹೇಳಿದರು. ಅವರು ನಗರದ ಸೃಜನಾ ರಂಗಮಂದಿರದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗಾಗಿ ಆಯೋಜಿಸಿದ ಅಂತರ ವಿಶ್ವವಿದ್ಯಾಲಯ ದಕ್ಷಿಣ ವಲಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ಕರ್ನಾಟಕ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸತತವಾಗಿ ಈ ವರ್ಷವು ರಂಗದಿಪ್ತಿ ಪ್ರಶಸ್ತಿ ತಂದಿರುವದು ಬಹಳ ಸಂತೋಷಕರ ವಿಷಯದ ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕರ್ನಾ ಟಕ ವಿಜ್ಞಾನ ಕಾಲೇಜಿನ ಯುವಜನೋತ್ಸವದ ಉಪಾಧ್ಯಕ್ಷ ಡಾ. ಬಿ.ಎಸ್. ಗಿರಿಯಪ್ಪಗೋಳ್ ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು ಅವರು ಈ ಕಾಲೇಜಿನಲ್ಲಿ ವಿದ್ಯಾರ್ಥಿ ಗಳ ತಮ್ಮ ಪ್ರತಿಭೆಯನ್ನು ಪ್ರದರ್ಶಿ ಸಲು ಉತ್ತಮ ವಾತಾವರಣವಿದೆ ಎಂದರು.
ತಮಿಳುನಾಡಿನ ಅಲಗಪ್ಪಾ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯದ ಅಂತರ ಯುವಜನೋತ್ಸವದಲ್ಲಿ ಪ್ರದರ್ಶನಗೊಂಡ ಏಕಾಂಕ ನಾಟಕ 'ಉರಿದ ಬದಕು' ವಿಡಂಬನಾತ್ಮಕ ನಾಟಕ (ಸ್ಕಿಟ್) 'ಹುಚ್ಚು ಬೀಡಿಸೊಣ' ಸೇರಿದಂತೆ ಸಮೂಹ ಗಾಯನ ಮತ್ತು ಸಿತಾರ ವಾದನ ಕಾರ್ಯಕ್ರಮಗಳನ್ನು ವಿದ್ಯಾರ್ಥಿ ಗಳು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೆಸಿಡಿ ಕಲಾ ಕಾಲೇಜಿನ ಯುವಜನೋತ್ಸವದ ಉಪಾಧ್ಯಕ್ಷ ಪ್ರೇಮಾ ಹಳ್ಳಕೇರಿ ಹಾಗೂ ಯುವಜನೋತ್ಸವದ ಅಧ್ಯಕ್ಷ ಪ್ರೊ. ಎಮ್.ಎನ್ ಮ್ಯಾಗೇರಿ ಮಾತನಾಡಿದರು. ಸಮಾರಂಭದಲ್ಲಿ ಕೆಸಿಡಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಫ್. ಮೂಲಿಮನಿ, ಡಾ.ವಿ. ಶಾರದಾ, ಡಾ. ಅರುಣಾ ಹಳ್ಳಿಕೆರಿ, ಡಾ.ಸಿ.ಜಿ.ಪಾಟೀಲ್, ಡಾ.ಮುಕುಂದ ಲಮಾಣಿ, ಡಾ. ಬಿ.ಎಸ್.ಭಜಂತ್ರಿ, ಡಾ. ವಾಯ್.ಎಸ್. ರಾವುತ್, ಶ್ರೇಯಾ ದೇಶಪಾಂಡೆ, ಯುವಜನೋತ್ಸವದ ವಿದ್ಯಾರ್ಥಿ ಕಾರ್ಯದರ್ಶಿ ಶಂಕರನಾಗ ಸೇರಿದಂತೆ ವಿದ್ಯಾರ್ಥಿ ಗಳು ಶಿಕ್ಷಕರು ಇದ್ದರು.