ದೈತ್ಯ ಗಾತ್ರದ ಮೊಸಳೆಯನ್ನು ಸೆರೆ ಹಿಡಿದ ಯುವಕರು
ಸಂಬರಗಿ 02: ಗ್ರಾಮದ ಅಗ್ರಣಿ ನದಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಆರು ಅಡಿ ದೈತ್ಯ ಗಾತ್ರದ ಮೊಸಳೆಯನ್ನ ಗ್ರಾಮದ ಯುವಕರು ರಾತ್ರಿ ಸಮಯದಲ್ಲಿ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಶನಿವಾರ ಸಾಯಂಕಾಲ 4: ಗಂಟೆಯಿಂದ ಮೊಸಳೆ ಹಿಡಿಯಲು ಹರಸಾಹಸ ಪಟ್ಟ ಯುವಕರು ಕಡೆಗೆ ತಡ ರಾತ್ರಿ 10ಗಂಟೆ ಸುಮಾರಿಗೆ ಕಟ್ಟಿಗೆ ಹಾಗೂ ಜಾಳಿಗೆಯ ಸಹಾಯದಿಂದ ಮೊಸಳೆ ಸೆರೆ ಹಿಡಿದಿದ್ದಾರೆ. ಅದರಲ್ಲೂ ಯುವಕನೊಬ್ಬ ಮೊಸಳೆಯನ್ನ ಹೆಗಲ ಮೇಲೆ ಹೊತ್ತು ಗ್ರಾಮದ ದ್ವಾರದವರೆಗೆ ತಂದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಯುವಕರ ಈ ಸಾಹಸಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಲಯ ಅರಣ್ಯ ಅಧಿಕಾರಿ ರಾಕೇಶ್ ಅರ್ಜುನ್ ವಾಡ್ ಇವರ ಮಾರ್ಗದರ್ಶನದಲ್ಲಿ ಸಕಾಯಕ ವಲಯ ಅರಣ್ಯ ಅಧಿಕಾರಿ ಶಿವಾಜಿ ಮುಂಜಿ, ಸುರೇಶ್ ಬಾಗಿ, ಮಾಂತೇಶ್ ಜೋಗುಲಾ ಸೇರಿ ಮೊಸಳೆಯನ್ನು ಹಿಡಕಲ್ ಜಲಾಶಯದಲ್ಲಿ ಬಿಡಲಾಯಿತು.