ಕೇಂದ್ರದ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ : ಸಂಸದ ಕಾಗೇರಿ ಆರೋಪ
State government not cooperating in implementation of central scheme: MP Kageri alleges
ಕಾರವಾರ 10 : ಕೇಂದ್ರದ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಮಂಗಳವಾರ ಕಾರವಾರದಲ್ಲಿ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ ಮಾಡಿದರು ಕಾರವಾರದ ಪತ್ರಿಕಾಭವನದಲ್ಲಿ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.ಮೋದಿ ಪ್ರಚಾರದಿಂದ ಬದುಕಿದ್ದಾರೆ. ಅವರ ಸರ್ಕಾರಕ್ಕೆ ಹತ್ತು ಅಂಕಗಳಿಗೆ ಜಿರೋ ಮಾರ್ಕ್ಸ ಎಂದು ಮುಖ್ಯಮಂತ್ರಿಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ , ಸಿದ್ದರಾಮಯ್ಯ ಇನ್ನೇನು ಹೇಳಲು ಸಾಧ್ಯ ಎಂದರು. ಅವರು ಕಾಂಗ್ರೆಸ್ ಪಕ್ಷದವರು. ಹಾಗೆ ಹೇಳವುದು ಸಹಜ. ಅವರ ಸರ್ಕಾರಕ್ಕೆ ಹಾಗೂ ಅವರಿಗೆ ಎಷ್ಟು ಮಾರ್ಕ್ಸ್ ಕೊಡ್ತಾರೆ ಅಂತ ಅವರ ನೋಡಿಕೊಳ್ಳಲಿ ಎಂದು ಕಾಗೇರಿ ವ್ಯಂಗ್ಯವಾಡಿದರು.ಕೇಂದ್ರದ ಬಿಜೆಪಿ ಕರ್ನಾಟಕ್ಕೆ, ದಕ್ಷಿಣದ ರಾಜ್ಯಗಳಿಗೆಅನುದಾನ ನೀಡಿಕೆಯಲ್ಲಿ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ ಎಂದರು. ನೀತಿ ಆಯೋಗದ ಸಭೆಗೆ ಸಿಎಂ ಹೋಗಬೇಕಿತ್ತು.
ಯಾಕೆ ಹೋಗಲಿಲ್ಲ ಎಂದರು.ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಾಗೆ ಮಾತಾಡುತ್ತಾರೆ ಎಂದರು.ಸಿಎಂ, ಡಿಸಿಎಂ ಮತ್ತು ಗೃಹ ಸಚಿವರ ಮಧ್ಯೆ ಹೊಂದಾಣಿಕೆಯಿಲ್ಲ. ಈ ಕಾರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಅಗಿದೆ. ಇದನ್ನು ತಡೆಯುವಲ್ಲಿ ಸರ್ಕಾರ ವಿಫವಾಗಿದೆ. ಈ ಘಟನೆ ನಂತರ ಡಿಸಿಎಂ ರಾಜೀನಾಮೆ ಕೊಡಬೇಕಿತ್ತು. ಅದರೆ ಕೊಟ್ಟಿಲ್ಲ ಎಂದರು. ಕಾಂಗ್ರೆಸ್ ತನ್ನ ಪಕ್ಷದ ಮುಖ್ಯಮಂತ್ರಿ ,ಉಪ ಮುಖ್ಯಮಂತ್ರಿ ಅವಧಿ, ಅಧಿಕಾರ ಹಂಚಕೆ ಸಮಸ್ಯೆ ಬಗೆ ಹರಿಸಿಕೊಳ್ಳಲಿ ಎಂದರು.ಕಾಶ್ಮೀರದ ಎತ್ತರದ ಸೇತುವೆ ಮೇಲೆ ಪ್ರಧಾನಿ ಪೋಟೋ ಶೂಟ್ ಮಾಡಿಸಿಕೊಂಡ ಕಾರಣ ಒಬ್ಬರೇ ಇದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಪ್ರೋಟೋಕಾಲ್ ಪ್ರಕಾರ ಕಾಶ್ಮೀರ ಮುಖ್ಯಮಂತ್ರಿ, ರೈಲ್ವೆ ಮಂತ್ರಿಗಳು ಇದ್ದರು ಎಂದು ಸಂಸದ ಕಾಗೇರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೋದಿ ಒಮ್ಮೆಯೂ ಯಾಕೆಮಣಿಪುರಕ್ಕೆ ಹೋಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ. ಕಾಗೇರಿ ಜೊತೆಗೆ ಮಾಜಿ ಶಾಸಕಿ ರೂಪಾಲಿ, ಜಿಲ್ಲಾ ಭಾಜಪ ಅಧ್ಯಕ್ಷ ಎನ್ .ಎಸ್.ಹೆಗಡೆ ಕರ್ಕಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 