ಕಾರಹುಣ್ಣಿಮೆ: ಎತ್ತುಗಳ ಶಿಂಗರಿಸಿ ಭವ್ಯ ಮೆರವಣಿಗೆ
ವರದಿ: ಲಕ್ಷ್ಮಣ ಹಿರೇಕುರುಬರ
ತಾಂಬಾ 10: ಮಳೆಗಾಲದ ಆರಂಭದಲ್ಲಿ ಬರುವ ಕಾರಹುಣ್ಣಿಮೆಯ ಬಂಡಿ ಹಬ್ಬ ಕೃಷಿಕರ ಹಬ್ಬ. ಇದು ಬುಧವಾರ ದಿ. 11 ರಂದು ಜರುಗಲಿದೆ. ಕಾರ ಎಂದರೆ ಕಪ್ಪು ಮೋಡ, ಮಳೆ ಎಂಬ ಅರ್ಥವಿದೆ. ಹಿಂಗಾರು ಬೆಳೆಗಳ ರಾಶಿ ಮಾಡಿದ ಬಳಿಕ ಆಳವಾಗಿ ಮಾಗಿ ಉಳಿಮೆ ಮಾಡಿದ ರೈತ ಬೇಸಿಗೆಯಲ್ಲಿ ಸ್ವಲ್ಪ ಶ್ರಮೀಸಿ, ತನ್ನ ಕೃಷಿ ಕಾರ್ಯದ ಜೀವಾಳವಾದ ಎತ್ತುಗಳಿಗೆ ಈ ಹುಣ್ಣಿಮೆಯಂದು ಪೂಜೆ ಸಲ್ಲಿಸುವ ಪದ್ದತಿ. ಮುಂಗಾರು ಮಳೆ ಪ್ರಾರಂಬವಾದ ಈ ಕಾಲದಲ್ಲೆ ನಿಜವಾದ ಕೃಷಿ ಚಟುವಟಿಕೆ ಪ್ರಾರಂಭವಾಗುವದು. ಹೀಗಾಗಿ ರೈತರಿಗೆ ಇದು ಪ್ರಮುಖ ಹಬ್ಬವಾಗಿದೆ. ಇದನ್ನೂ ಪ್ರತಿ ರೈತರು ಸಂಭ್ರಮವಾಗಿ ಆಚರಿಸುತ್ತಾರೆ. ಈ ಕಾರಹುಣ್ಣಿಮೆಯನ್ನು ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಕರಿ ಹರಿಯುವ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ತಾಂಬಾ ಗ್ರಾಮದ ಹಾಲು ಮತ ಸಮಾಜದ ಸಿದ್ದನಗೌಡ ಪಾಟೀಲರ ಮನೆಯಿಂದ ಸಂಜೆ ಹೊರಡುವ ಬಂಡಿಯನ್ನು ಶುಚಿಗೊಳಿಸಿ ಸಿದ್ದಪಡಿಸಲಾಗುತ್ತದೆ. ಮುತೈದಿಯರಿಗೆ ಉಡಿ ತುಂಬಿದ ಬಳಿಕ ಗ್ರಾಮದ ಪ್ರಸಿದ್ದವಾದ ಮಾಹಾಲಕ್ಷ್ಮೀ ದೇವಿಗೆ, ಶ್ರೀ ಗವೀಸಿದ್ದೆಶ್ವರನಿಗೆ ಹಾಗೂ ಬಂಡಿಗಾಡಿಗೆ ಪೂಜೆ ಸಲ್ಲಿಸುತ್ತಾರೆ. ಬಂಡಿ ಒಡಿಸುವರನ್ನು ಹಿಡಿದುಕೊಂಡು ಕುಳಿತುಕೋಳ್ಳಲೇಂದೆ ಒಬ್ಬರು ಇರುತ್ತಾರೆ. ಎತ್ತುಗಳನ್ನು ಬಣ್ಣಗಳಿಂದ ಸಿಂಗರಸಿ ಗ್ರಾಮದಲ್ಲಿ ಅನೆಕ ವಾದ್ಯ ವೈಭವಗಳಿಂದ ಭವ್ಯ ಮೆರವಣಿಗೆಮಾಡಿತ್ತಾರೆ. ನಂತರ ಸಂಜೆ ಹೊತ್ತಿಗೆ ಉತ್ತಮ ಎತ್ತಗಳನ್ನು ಬಂಡಿಗೆ ಕಟ್ಟಿಕೋಂಡು ಹೊರಟ ಸವಾರಿ ಊರ ಮುಂದಿನ ಅಗಸಿ ಬಾಗಲವರೆಗೆ ಬರುತ್ತದೆ.
ಅಲ್ಲಿ ಅನೇಕ ರೈತರು ತಮ್ಮ ಎತ್ತುಗಳನ್ನು ಓಡಿಸಿ ಸಂಭ್ರಮಿಸತ್ತಾರೆ. ನಂತರ ಬಿಳಿ, ಕೆಂಪು ಎತ್ತುಗಳು ಅಗಸಿಯಲ್ಲಿ ಕಟ್ಟಿದ ಕರಿ ಹರಿದುಕೋಂಡು ಅಗಸಿ ಬಾಗಿಲು ದಾಟಿ ಮರಳಿ ಮನೆಯ ಕಡೆಗೆ ಹೊರಟ ಸವಾರ ಬಂಡಿಯ ವೇಗ ಹೆಚ್ಚಿಸುತ್ತಾನೆ. ಸರ ವೇಗದಲ್ಲಿ ಸಾಗುವ ಬಂಡಿ ಜೊತೆಗೆ ನೂರಾರು ಹಿಂಬಾಲಕರು ಈ ಕಣ್ಮನ ಸೇಳೆಯುವ ದೃಷ್ಯವನ್ನು ನೊಡಲು ದಾರಿಯಲ್ಲಿ ಎರಡು ಬದಿಗೆ ಸೇರಿದ ಸಹಸ್ರಾರು ಜನರು ನೋಡಿ ಸಂಭ್ರಮಿಸುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 