ಯುವತಿಯರು ಬಣ್ಣ ಎರಚುವ ಮೂಲಕ ಹೋಳಿ ಹಬ್ಬ ಆಚರಣೆ
ಕಂಪ್ಲಿ15 : ಪಟ್ಟಣದ 12ನೇ ವಾರ್ಡಿನ ಶಿಕಾರಿ ಕಾಲೋನಿಯಲ್ಲಿ ಹಕ್ಕಿ ಪಿಕ್ಕಿ ಸಮುದಾಯದ ಯುವಕ, ಯುವತಿಯರು ಒಟ್ಟುಗೂಡಿ ಬಣ್ಣ ಎರಚಿಕೊಂಡು, ನೃತ್ಯದಲ್ಲಿ ತಲ್ಲೀನರಾಗಿರುವುದು ಕಂಡು ಬಂತು.ಬಣ್ಣ ಒಲವಿನ ಬಣ್ಣ ಎಂಬಂತೆ ಇಲ್ಲಿನ ಯುವತಿಯರು ಹೋಳಿ ಹುಣ್ಣಿಮೆಯ ಮರು ದಿನವಾದ ಶನಿವಾರದಂದು ಮಧ್ಯಾಹ್ನ ಬಣ್ಣ ಹಚ್ಚಿಕೊಂಡು, ತಮಟೆ ನಾದಕ್ಕೆ ಹೆಜ್ಜೆ ಹಾಕಿ, ಸಂಭ್ರಮಿಸಿದರು. ನಂತರ ಬಣ್ಣದೋಳಿಯಲ್ಲಿ ಭಾಗವಹಿಸಿದ ನಂತರ ಕರ್ನಾಟಕ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಉಪಾಧ್ಯಕ್ಷ ಹೆಚ್.ಪಿ.ಶಿಕಾರಿರಾಮು ಮಾತನಾಡಿ, ಜಾನಪದ ನೃತ್ಯದ ಮೂಲಕ ಪ್ರತಿ ವರ್ಷದಂತೆ ಈ ವರ್ಷವು ಕೂಡ ಹೋಳಿ ಹಬ್ಬ ಆಚರಿಸಲಾಯಿತು. ಬೇಧ ಭಾವ ಇಲ್ಲದೇ, ಯುವಕ, ಯುವತಿಯರು ಬಣ್ಣ ಹಚ್ಚಿಕೊಂಡು, ಸಡಗರ ಸಂಭ್ರಮದಿಂದ ಆಚರಿಸಿದರು. ಯುಗಾದಿ, ದಸರಾ, ದೀಪಾವಳಿ, ಹೋಳಿ ಹಬ್ಬವನ್ನು ಸಂಪ್ರದಾಯದಂತೆ ಆಚರಣೆ ಮಾಡಿಕೊಂಡು ಬರಲಾಗಿದೆ. ಹೋಳಿ ಹಬ್ಬವು ಪ್ರಾಚೀನ ಕಾಲದಿಂದಲೂ ಆಚರಿಸಲ್ಪಡುವ ಹಬ್ಬವಾಗಿದೆ ಎಂದರು. ಈ ವೇಳೆ ಜಿಲ್ಲಾ ಹಕ್ಕಿ ಪಿಕ್ಕಿ ಅಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್.ಪಿ.ಶ್ರೀಕಾಂತ್, ಹಕ್ಕಿ ಪಿಕ್ಕಿ ಬುಡಕಟ್ಟು ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ಜಾನಕಿ, ಹಕ್ಕಿ ಪಿಕ್ಕಿ ಜಿಲ್ಲಾ ಉಪಾಧ್ಯಕ್ಷ ಜೆ.ಬಾಬು, ಯುವಕ ಸಂಘಟನೆ ಅಧ್ಯಕ್ಷ ಹರಿಕೃಷ್ಣ, ಮುಖಂಡರಾದ ಲತಾ, ಮಹಾದೇವಿ, ಶಾರದಮ್ಮ, ಮೀನಾಕ್ಷಿ, ಲಕ್ಷ್ಮಿ, ರೇಣುಕಾ, ಗೋವಿಂದ, ಗೋಪಿ ಸೇರಿದಂತೆ ಅನೇಕರಿದ್ದರು. ಮಾ001ಸ್ಥಳೀಯ ಶಿಕಾರಿ ಕಾಲೋನಿಯಲ್ಲಿ ಯುವತಿಯರು ಬಣ್ಣ ಎರಚಿಕೊಂಡು, ತಮಟೆ ನಾದಕ್ಕೆ ಹೆಜ್ಜೆ ಹಾಕುತ್ತಿರುವುದು.