ಗದಗ 14: ಯುವಕರು ಸತ್ಯ ಧರ್ಮದಿಂದ ನಡೆದು ನೀತಿವಂತರಾಗಿ ಬಾಳಲಿ ಯುವ ಜನಾಂಗದಲ್ಲಿ ಸಾಮಾಜಿಕ ಮೌಲ್ಯಗಳು ಹಾಗೂ ನೈತಿಕತೆ ಇಲ್ಲದಾಗಿದ್ದು, ಗುರು ಹಿರಿಯರು, ತಂದೆ ತಾಯಿ ಎನ್ನುವ ಗೌರವವಿಲ್ಲದೆ ಆಧುನಿಕ ಮಾಧ್ಯಮದ ತಂತ್ರಜ್ಞಾನಕ್ಕೆ ಮಾರು ಹೋಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ 60% ಇರುವ ಜನರು ತಮ್ಮ ಜವಾಬ್ದಾರಿಯನ್ನು ಅರಿತು ದೇಶದ ಒಳಿತಿಗೆ ಪೂರಕವಾದ ತೀರ್ಮಾಣವನ್ನು ಕೈಗೊಂಡು ಸದೃಡವಾದ ದೇಶ ಕಟ್ಟುವಲ್ಲಿ ಕೈ ಜೋಡಿಸಬೇಕೆಂದು ವೆಂಕಟೇಶ ಮಹಾಜನರವರು ಮಾತನಾಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವದಿನಾಚರಣೆ ಕಾರ್ಯಕ್ರಮ ಜರುಗಿತು.
ಸಮಾರಂಭ ಉದ್ಘಾಟಿಸಿದ ರೇವಣಸಿದ್ದೇಶ್ವೆಸ್ವಾಮಿ ಹಿರೇಮಠ, ಕಾರ್ಯದಶರ್ಿಗಳ ಕನರ್ಾಟಕ ವಿದ್ಯಾವರ್ದಕ ಸಮಿತಿಯ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಗದಗ ಇವರು ಮಾತನಾಡಿ ಜಾಗತಿಕವಾಗಿ ಯುವ ಜನರು ಅನೇಕ ದುಷ್ಛಟಗಳಿಗೆ ಬಲಿಯಾಗಿ ತಮ್ಮ ಯೌವನವನ್ನು ಹಾಳು ಮಾಡುತ್ತಿದ್ದಾರೆ ಯೌವನವನ್ನು ಸದುಪಯೋಗಪಡಿಸಿಕೊಳ್ಳಲು ಮಾನಸಿಕ ದೈಹಿಕ ಸಾಮಾಜಿಕ ಆರೋಗ್ಯದ ಹಿತಕ್ಕಾಗಿ ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರೋಗ್ಯ ಇಲಾಖೆಯ ಬಿ.ಬಿ. ಲಾಳಗಟ್ಟಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರು ರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಇಂದಿನ ಯುಗದಲ್ಲಿ ಯುವಕರು ಆರೋಗ್ಯ ಅರಿವವನ್ನು ಮೂಡಿಸಿ, ಶಿಕ್ಷಣವನ್ನು ಪರಿವರ್ತಿಸುವುದು ಎನ್ನುವ ಘೋಷ ವಾಕ್ಯದೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣವನ್ನು ಹೆಚ್ಚು ಪ್ರಸ್ಥುತ ನ್ಯಾಯ ಸಮ್ಮತವಾಗಿಸುವ ನಿಟ್ಟಿನಲ್ಲಿ ಯುವಜನರ ಪಾತ್ರ ಮುಖ್ಯವಾಗಿರುವುದೆಂದು ತಿಳಿಸಿದರು.
ರಕ್ತದಾನ ಮಹತ್ವವನ್ನು ತಿಳಿಸುತ್ತಾ ರಕ್ತದಾನ ಮಹಾದಾನ, ರಕ್ತದಾನ ಜೀವದಾನ, ರಕ್ತದಾನ ಶ್ರೇಷ್ಠದಾನ ಎಂದು ತಿಳಿಸಿದರು, ರಕ್ತದಾನ ಮಾಡಲು ಹಾಗೂ ರೋಗಿಯ ಜೀವ ಯಳಿಸಲು ವೈದ್ಯರಾಗಬೇಕಿಲ್ಲ 18-60 ವಯೋಮಾನದ, ಹಿಮೋಗ್ಲೋಬಿನ್ ಪ್ರಮಾಣ 12.5 ಇರುವ ಹಾಗೂ 45 ಕೆ.ಜಿಗಿಂತ ತೂಕ ಹೆಚ್ಚಿರುವ ಯಾರು ಬೇಕಾದರು ರಕ್ತದಾನ ಮಾಡಿ ಜೀವ ಉಳಿಸಬಹುದೆಂದು ತಿಳಿಸಿದರು ನಂತರ ಅಂತರಾಷ್ಟ್ರೀಯ ಯುವದಿನಾಚರಣೆ ನಿಮಿತ್ಯ ರಕ್ತದಾನದ ಕುರಿತು ಬಿತ್ತಿಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ಪಾರ್ವತಿ ಕಿತ್ತೂರ ಪ್ರಥಮ, ಕುಮಾರಿ ಸಮ್ರೀನ್ತಾಜ್ ಕರಡಿ ದ್ವಿತೀಯ, ಕುಮಾರಿ ಶಬಾನಾ ಹಳ್ಳಿಗುಡಿ ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಪ್ರೋ. ಹೊಳಗುಂದಿ ಯುವಕರನ್ನು ಉದ್ದೇಶಿಸಿ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳಾದ ಕುಮಾರ. ಈರಣ್ಣ ಬಂಡಿಹಾಳ ಹಾಗೂ ಕುಮಾರ ವಿಕ್ರಮ್ ಸುಣಗಾರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಪ್ರಾಚಾರ್ಯರಾದ ಬಿ.ಸಿ. ಉಪ್ಪಿನ, ಪ್ರೋ. ಬಸವರಾಜ, ಪ್ರೋ. ರಾಯನಗೌಡರ, ಪ್ರೋ. ಹಿರೆಕೆರೂರ, ರವಿ ಪತ್ತಾರ, ಎಸ್.ಹೆಚ್. ಯರಗಟ್ಟಿ, ಮಂಜುನಾಥ ಅಂಗಡಿ, ಜೀವನಸಾಬ ಬಿನ್ನಾಳ, ಕಾಲೇಜ್ ಉಪನ್ಯಾಸಕ ವರ್ಗ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು, ಕುಮಾರಿ. ಪ್ರಮೀದಿನಿ ಕಡ್ಡಿಯವರ ಕಾರ್ಯಕ್ರಮವನ್ನು ನೀರೂಪಿಸಿದರು, ಕುಮಾರ ಬಿ.ಕೆ. ಕೋಳಿ ವಂದನಾರ್ಪಣೆ ಮಾಡಿದರು.