ಹಾವೇರಿ, 27: ವಿದೇಶಿ ಸರಕಾಗಿರುವ ತಂಬಾಕು ಇಂದು ಇಡೀ ದೇಶವನ್ನು ಆಕ್ರಮಿಸಿ ಪಿಡುಗಾಗಿ ಕಾಡುತ್ತಿದೆ. ಆದ್ದರಿಂದ ಈ ತಂಬಾಕಿನ ಕುರಿತಾಗಿ ಯುವಜನತೆಯಲಿ ಅರಿವು ಅಗತ್ಯವೆಂದು ಜಿಲ್ಲಾ ತಂಬಾಕು ನಿಯಂತ್ರಣ ಮಂಡಳಿಯ ಸಲಹೆಗಾರರಾಗಿರುವ ಡಾ. ಸಂತೋಷ್ ವಿ.ಡಿ ಅವರು ಹೇಳಿದರು.
ಹಾವೇರಿಯ ಗುದ್ಲೆಪ್ಪ ಹಳ್ಳೀಕೆರಿ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ, ಮಹಿಳಾ ಸಂಘ, ದೂರು ನಿವಾರಣ ಘಟಕ ಇವುಗಳ ಆಶ್ರಯದೊಂಗೆ, ಹಾವೇರಿಯ ಇನ್ನರ್ ವೀಲ್ ಕ್ಲಬ್ನ ಸಹಕಾರದೊಂದಿಗೆ ತಂಬಾಕಿನ ಬಳಕೆಯಿಂದಾಗುವ ದುಷ್ಪರಿಣಾಮದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಇನ್ನೊರ್ವ ಅತಿಥಿಗಳಾದ ದಾದಾಪೀರ್ ಹುಲಿಕಟ್ಟಿ ಇವರು 'ಕೊಟ್ಪಾ ಖಾಯಿದೆ-2003' ಕುರಿತಾಗಿ ವಿದ್ಯಾಥರ್ಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಎಮ್.ಎಸ್ ಯರಗೊಪ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾದ ಇನ್ನರ್ ವೀಲ್ನ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ವಿರಾಜ ಕೊಟಕ್, ಕಾರ್ಯದಶರ್ಿ ಶ್ರೀಮತಿ ಶಿಲ್ಪ ಚಚರ್ಿಲ್, ಖಜಾಂಚಿ ಶ್ರೀಮತಿ ರೇಖಾ ಯಡ್ರಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಉಮಾ ಜಾಲಿ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ, ಶಶಿಕಲಾ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ರಾಜೇಶ್ವರಿ ಹೊಂಗಲಮಠ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಶಮಂತ ಕುಮಾರ್ ವಂದಿಸಿದರು.