ಲೋಕದರ್ಶನ ವರದಿ
ಶಿರಹಟ್ಟಿ 15: ಕನ್ನಡ ನಾಡಿನಲ್ಲಿ ಯುವಕರನ್ನು ಕನ್ನಡ ಸಾಹಿತ್ಯದ ಸದಭಿರುಚಿಯನ್ನು ಹೊಂದುವಂತೆ ಮಾಡಲು ವೇದಿಕೆಯನ್ನು ಸೃಷ್ಠಿಸಲಾಗುತ್ತಿದ್ದು, ಯುವಕರು ಇದರ ಲಾಭವನ್ನು ಪಡೆದುಕೊಳ್ಳಬೇಕು. ಯುವಕರು ಪರಭಾಷಾ ವ್ಯಾಮೋಹಕ್ಕೆ ಒಳಗಾಗಿ ಮಾತೃಭಾಷೆಗೆ ಧಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಕಸಾಪ ಯವಕರಿಗಾಗಿ ವೇದಿಕೆಯನ್ನು ಸೃಷ್ಠಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣು ಗೋಗೇರಿ ಹೇಳಿದರು.
ಅವರು ತಾಲೂಕಿನ ಬೆಳ್ಳಟ್ಟಿಯ ಬಿ.ಪಿ.ಅಳವಂಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಜಿಲ್ಲಾ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರೌಢ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಗ್ರಾಮೀಣ ಭಾಗದ ಯುವಕರ ಕನ್ನಡ ಸಾಹಿತ್ಯವನ್ನು ಅಭಿವೃದ್ಧಿ ಪಡಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿಸುವುದಕ್ಕಾಗಿ ಈ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಸಾಹಿತ್ಯ ಆಸಕ್ತಿಯನ್ನು ಯುವಕರಲ್ಲಿ ಹುಟ್ಟಿಹಾಕುವ ಕರ್ತವ್ಯ ಈ ವೇದಿಕೆಯದ್ದಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ರಾಜ್ಯದಲ್ಲಿ ಯುವ ಸಾಹಿತಿಗಳು ವ್ಯಕ್ತವಾಗಬೇಕು. ಕನ್ನಡ ಮಾತೃ ಭಾಷಾ ಪ್ರೇಮದ ಕಹಳೆ ಮೊಳಗಬೇಕಾಗಿದೆ. ಇಂತಹ ವೇದಿಕೆಯನ್ನು ಗ್ರಾಮೀಣ ಭಾಗದಲ್ಲಿ ಅಡಗಿರುವ ಸಾಹಿತಿಗಳು ಲಾಭವನ್ನು ಪಡೆದುಕೊಂಡು ಕನ್ನಡ ಭಾಷೆಯ ಮೆರಗನ್ನು ಹೆಚ್ಚಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ಪ್ರತಿಯೊಬ್ಬರೂ ಮಾತೃಭಾಷೆಯನ್ನು ಹೃದಯದಿಂದ ಪ್ರೀತಿಸುವುದರ ಜೊತೆಗೆ ಆರಾಧಿಸುವಂತಾಗಬೇಕು. ಕನ್ನಡ ಸಾಹಿತ್ಯ ಗಟ್ಟಿಯಾಗಿರಬೇಕಾದರೆ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಕನ್ನಡ ಶಿಕ್ಷಣ ದೊರೆತಾಗ ಮಾತ್ರ ಸಾಧ್ಯವಾಗುತ್ತದೆ. ಪರಭಾಷಾ ಮೋಹ ಇರಲಿ ಆದರೆ ವ್ಯಾಮೋಹ ಇರಬಾರದು. ಕನ್ನಡ ನಾಡಿನಲ್ಲಿ ಕನ್ನಡವೇ ಪ್ರಥಮವಾಗಲಿ ಎಂದು ಹೇಳಿದರು.
ಜಿಪಂ ಸದಸ್ಯೆ ರೇಖಾ ಅಳವಂಡಿ ಮಾತನಾಡಿ, ಕನ್ನಡ ಭಾಷೆ, ಕನ್ನಡ ಲಿಪಿ, ಬೆಳವಣಿಗೆಯಾಗಬೇಕಾದರೆ ರಾಜ್ಯ ಸರಕಾರದ ಮಟ್ಟದಿಂದ ಹಿಡಿದು ಗ್ರಾಮೀಣ ಭಾಗದ ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯವಾಗಬೇಕು. ಕನ್ನಡಿಗರು ಸ್ವಾಭಿಮಾನದಿಂದ ಕನ್ನಡ ಭಾಷೆಯಲ್ಲಿಯೇ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷೆ ಫಕ್ಕಿರವ್ವ ಭಾವಳ್ಳಿ, ಕಸಾಪ ತಾಲೂಕ ಅಧ್ಯಕ್ಷ ಎಮ.ಕೆ.ಲಮಾಣಿ, ತಿಮ್ಮರೆಡ್ಡಿ ಅಳವಂಡಿ, ಪಿ.ಡಿ.ಮಂಗಳೂರ, ಹೆಚ್.ಬಿ.ರೆಡ್ಡೇರ, ಎ.ಬಿ.ಪಾಟೀಲ, ಆರ್.ಆರ್. ಗಡ್ಡದ್ದೇವರಮಠ, ಬಿ.ಎಮ್.ಹುರಕದ, ತಿಮ್ಮರೆಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಎಫ್.ಎಮ್.ಹಳ್ಳೆಮ್ಮನವರ, ಜಿ.ಎ.ಕೊಡಬಾಳ, ಎಮ್.ಬಿ. ಹಾವೇರಿ, ಎಸ್.ಎಫ್.ಮಠದ, ಎ.ಸಿ.ಪಾಟೀಲ್, ಎಮ್.ಸಿ.ಮರಡೂ ರಮಠ, ಹೆಚ್. ಮಲ್ಲಿಕಾಜರ್ುನರೆಡ್ಡಿ, ಎಸ್.ಬಿ.ಮೇಕಳಿ, ಎಮ್.ಎ.ಮಕಾನದಾರ, ಮುಖ್ಯೋಪಾದ್ಯಾಯ ಅಶೋಕ ಇಚ್ಛಂಗಿ ಮುಂತಾದವರು ಉಪಸ್ಥಿತರಿದ್ದರು.