ಬೆಳಗಾವಿ: ಯುವಕರು ಅತ್ಯುತ್ತಮ ವ್ಯಕ್ತಿತ್ವ ಬೆಳೆಸಿಳ್ಳಿ: ಚನ್ನಣ್ಣವರ

ಲೋಕದರ್ಶನ ವರದಿ

ಬೆಳಗಾವಿ 28:  ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿ. 28ರಂದು ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಪಿ.ಯು.ಸಿ. ವಿದ್ಯಾಥರ್ಿಗಳಿಗಾಗಿ "ಅಣುಕು ಯುವ ಸಂಸತ್ ಸ್ಪಧರ್ೆ 2019-20"ರ ಉದ್ಘಾಟನಾ ಸಮಾರಂಭವು ಜರುಗಿತು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಹನುಮಂತ ಚನ್ನಣ್ಣವರ ಇವರು ಆಗಮಿಸಿ ಮಾತನಾಡುತ್ತಾ, ವಿದ್ಯಾಥರ್ಿಗಳಲ್ಲಿ ಅಭಿವ್ಯಕ್ತಪಡಿಸುವ ಕೌಶಲ್ಯ ವೃದ್ಧಿಯಾಗಬೇಕು.  ಯುವಕರು ಅತ್ಯುತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ರಾಜಕೀಯ ಅನುಭವವನ್ನು ಪಡೆದುಕೊಳ್ಳಬೇಕು.  ರಾಜಕೀಯದಲ್ಲಿ ಭವಿಷ್ಯದಲ್ಲಿ ಮುಂದುವರೆದು ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.

ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ ಅವರು ಮಾತನಾಡುತ್ತಾ, ಮಾತುಗಳನ್ನು ಅಥರ್ೈಸಿಕೊಳ್ಳುವುದು ಒಂದು ಕಲೆ, ಪ್ರಚಲಿತ ವಿಷಯಗಳನ್ನು ಪ್ರಬುದ್ಧವಾಗಿ ಮಂಡಿಸುವ ಕಲೆ ಬೆಳೆಸಿಕೊಳ್ಳಬೇಕು.  ಒಂದೇ ವಿಷಯವನ್ನು ತರ್ಕಬದ್ಧವಾಗಿ ಮಂಡಿಸಬೇಕು ಮತ್ತು ವಿವಿಧ ಪರಿಕಲ್ಪನೆಗಳನ್ನು ಕಲ್ಪಿಸಿಕೊಳ್ಳಬೇಕು.  ವಿಷಯಗಳನ್ನು ನಿಖರವಾಗಿ ಆಳಕ್ಕೆ ಹೋಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು.  ಕೌಶಲ್ಯವನ್ನು ಪಡೆಯುವದಕ್ಕೆ ಪರಿಶ್ರಮ ಬೇಕಾಗುತ್ತದೆ ಅಂದಾಗ ಮಾತ್ರ ವ್ಯಸ್ಥಿತವಾಗಿ ಮಾತನಾಡುವ ಕಲೆ ಯಶಸ್ವಿಯಾಗುತ್ತದೆ ಎಂದು ನುಡಿದರು.

ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿದರ್ೇಶಕ ರಾಜಶೇಖರ ಎನ್. ಪಟ್ಟಣಶೆಟ್ಟಿ ಅವರು ಮಾತನಾಡುತ್ತಾ, ಶಾಸನಗಳನ್ನು ರೂಪಿಸುವಾಗ ಚಿಂತನ-ಮಂಥನ ಮಾಡಬೇಕಾಗುತ್ತದೆ.  ಶಾಸನಗಳಿಂದ ಸಾಮಾನ್ಯರ ಸಮಸ್ಯೆಗಳು ಪರಿಹಾರವಾಗಬೇಕು.  ಯುವ ಪೀಳಿಗೆಗೆ ರಾಜಕಾರಣ ಅನುಕರಣೀಯವಾಗಬೇಕು.  ರಾಜಧರ್ಮವನ್ನು ಪಾಲಿಸಬೇಕು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜಿ. ನಂಜಪ್ಪನವರ ಅವರು ಮಾತನಾಡುತ್ತಾ ಅಣುಕು ಸಂಸತನಂತಹ ವೇದಿಕೆಗಳು ನಿಷ್ಠಾವಂತ ರಾಜಕಾರಣಿಗಳನ್ನು ಹುಟ್ಟುಹಾಕಬೇಕು.  ವಿದ್ಯಾಥರ್ಿಗಳು ಸ್ಪಧರ್ಾ ಮನೋಭಾವನೆ ಹೆಚ್ಚಿಸಿಕೊಳ್ಳಲು ಇಂತಹ ವೇದಿಕೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು.

ಮತದಾರರ ಸಾಕ್ಷರತಾ ಕ್ಲಬ್ನ ಜಿಲ್ಲಾ ನೋಡಲ್ ಅಧಿಕಾರಿ ಮಲಿಕ ಮುಲ್ಲಾ ಕಾರ್ಯಕ್ರಮದ ಧ್ಯೆಯೋದ್ದೇಶಗಳನ್ನು ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ಅಪೂರ್ವ ಕರಿಕಟ್ಟಿ ಸ್ವಾಗತಗೀತೆ ಹಾಡಿದರು. ಎನ್.ಆರ್. ಚಮಕೇರಿ ಸ್ವಾಗತಿಸಿದರು.  ಎ.ಪಿ. ಕರಿಕಟ್ಟಿ ವಂದಿಸಿದರು.  ಎಸ್.ಬಿ. ಬನ್ನಿಮಟ್ಟಿ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಿಂದ 80 ಸ್ಪಧರ್ಾಳುಗಳು ಭಾಗಿಗಳಾಗಿದ್ದರು.  ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಭಾವಚಿತ್ರದಲ್ಲಿ:  ರಾಜಶೇಖರ ಎನ್. ಪಟ್ಟಣಶೆಟ್ಟಿ ಅವರು ಮಾತನಾಡುತ್ತಿದ್ದಾರೆ, ವೇದಿಕೆಯ ಮೇಲೆ ಪದವಿ ಪ್ರಾಚಾರ್ಯ ಡಾ.ವ್ಹಿ.ಡಿ. ಯಳಮಲಿ, ಹನುಮಂತ ಚನ್ನಣ್ಣವರ ಹಾಗೂ ಪದವಿ ಪೂರ್ವ ಪ್ರಾಚಾರ್ಯ. ಎಸ್.ಜಿ. ನಂಜಪ್ಪನವರ ಚಿತ್ರದಲ್ಲಿದ್ದಾರೆ.