ಯುವ ಜನರು ಮಾದಕ ವಸ್ತುಗಳಿಂದ ದೂರವಿರಿ: ಶಿವಾನಂದ ಮಗದುಮ್ಮ

ಬೆಳಗಾವಿ, 05 : ಪ್ರತಿಯೊಬ್ಬರ ಜೀವನ ಅಮೂಲ್ಯವಾದದ್ದು ನವಭಾರತ ನಿಮರ್ಾಣದಲ್ಲಿ ಯುವ ಜನರ ಪಾತ್ರ ಬಹುದೊಡ್ಡದು ಅಂತಹುದರಲ್ಲಿ ಇಂದಿನ ಯುವ ಜನರು ಬೆಳೆಯುವ ವಯಸ್ಸಿನಲ್ಲಿ ಯಾವುದೇ ಮಾದಕ ವಸ್ತುಗಳನ್ನು ಸೇವನೆ ಮಾಡದೆ ಜಾಗೃತರಾಗಿರಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಶಿವಾನಂದ ಮಗದುಮ್ಮ ಯುವಜನರಿಗೆ  ಕರೆ ನೀಡಿದರು.

ಅಕ್ಟೊಬರ್ 5 ರಂದು ನೆಹರು ಯುವ ಕೇಂದ್ರ, ದೆಹಲಿ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ, ಕೆ.ಎಲ್.ಇ ವಿಶ್ವವಿದ್ಯಾಲಯದ ನಸರ್ಿಂಗ್ ವಿದ್ಯಾ ಸಂಸ್ಥೆ ಎನ್.ಎಸ್.ಎಸ್.ಘಟಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಪ್ರಾದೇಶಿಕ ಸಾರಿಗೆ ಇಲಾಖೆ ಬೆಳಗಾವಿ ಹಾಗೂ ಜೈ ಹನುಮಾನ ಯುವಕ ಸಂಘ ನಿವರ್ಾನಟ್ಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ  "ಜಿಲ್ಲಾ ಮಟ್ಟದ ಮಾದಕ ವಸ್ತುಗಳ ವ್ಯರ್ಜನೆ ಜಾಗೃತಿ ಕಾಯ್ರಕ್ರಮ" ಹಾಗೂ ರಸ್ತೆ ಸುರಕ್ಷತಾ ಜಾಗ್ರತಿ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು.  

ಅಬಕಾರಿ ಉಪ ಅಧೀಕ್ಷಕರಾದ ಜಗದೀಶ ಕುಲಕಣರ್ಿ ಅವರು ಮಾತನಾಡಿ, ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಕಾನೂನ ಪ್ರಕಾರ ಅಪರಾಧವಾಗಿದೆ. ಇಂತಹ ದುಷ್ಠ ಚಟಕೆ ಇಂದಿನ ಯುವಜನರು ಬಲಿಯಾಗದೆ ಸಮಾಜದ ದೇಶದ ಹೀತದೃಷ್ಟಿಯಿಂದ ಆರೋಗ್ಯವಂತ ಬದುಕು ಸಾಗಿಸಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆ.ಎಲ್.ಇ ನಸರ್ಿಂಗ್ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುಧಾರೆಡ್ಡಿ ಅವರು ಮಾತನಾಡಿ ಮಧ್ಯಪಾನ ಜೊತೆಗೆ ಹಲವಾರು ಮಾದಕ ವಸ್ತುಗಳು ಯುವ ಜನರನ್ನು ದಾರಿ ತಪ್ಪಿಸುತ್ತವೆ. ಸಹಜವಾಗಿ ಹಿಡಿದಂತ ಚಟ ಮುಂದೆ ಬಿಡಬೇಕೆಂದರೆ ಕಷ್ಟಕರವಾಗುತ್ತದೆ. ಆ ನಿಟ್ಟಿನಲ್ಲಿ ವ್ಯಸನಮುಕ್ತ ನಾಡ ಕಟ್ಟಲು ಯುವಜನರು ಜಾಗ್ರತರಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಾರಿಗೆ ಅಧಿಕ್ಷಕರಾದ ಶರಣಪ್ಪ ಹುಗ್ಗಿ, ನಿವೃತ್ತ ಜಿಲ್ಲಾ ಯುವಸಮನ್ವಯ ಅಧಿಕಾರಿ ಎಸ್.ಯು. ಜಮಾದಾರ, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಭರತಕಲಾಚಂದ್ರ ಡಾ. ಶಿವಸ್ವಾಮಿ ಉಪಸ್ಥಿರಿದ್ದರು.

ನಂತರ ನಡೆದ ಉಪನ್ಯಾಸದಲ್ಲಿ  ಸಂಪನ್ಮೂಲ ಡಾ.  ಎನ್. ಶಿವಸ್ವಾಮಿ,  ಸುರೇಖಾ ಪಾಟೀಲ, ಡಾ. ಅಶ್ವೀನಿ ನರಸಣ್ಣವರ, ಸುನೀಲ ಮೇತ್ರಿ, ಸೋಮು ಪುಜಾರಿ ಮಾದಕ ವಸ್ತುಗಳ ವಿಸರ್ಜನೆ ಕುರಿತು  ಉಪನ್ಯಾಸ ನೀಡಿದರು ಜ್ಯೋತಿ ಮಾಹಾವಿದ್ಯಾಲಯದ ತಂಡದವರು ಯೋಗ ನೃತ್ಯ ಪ್ರರ್ದಶಿಸಿದರು.

       ಇದೇ ಸಂದರ್ಭದಲ್ಲಿ ಜಿಲ್ಲೇಯ ಆಯ್ದ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

ನೆಹರು ಯುವ ಕೇಂದ್ರದ ಲೆಕ್ಕಪಾಲಕರಾದ ಆರ್.ಆರ್. ಮುತಾಲಿಕ ದೇಸಾಯಿ  ಶೀಬಿರದ ಧೇಯ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎನ್.ಎಸ್.ಎಸ್.ಅಧಿಕಾರಿ ಶಿವರಾಜ ದಂಡಗಿ ನಿರೂಪಿಸಿದರು. ಸುಜಾತಾ ಮಗದುಮ್ಮ ಜಾಗೃತಿ ಗೀತೆ ಹಾಡಿದರು ಕಾರ್ಯಕ್ರಮ ಸಂಯೋಜನ ಅಧಿಕಾರಿ ವಿಕಾಸ ಎಮ್. ವಂದಿಸಿದರು. ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ  ಯುವಜನರು ಭಾಗವಹಿಸಿದರು.