ಬೇರಲಸಿನ ಕಾಯಿ ಫ್ರೈ ಗಂಟಲಿಗೆ ಸಿಲುಕಿ ಯುವಕ ಸಾವು
Young man dies after food gets stuck in his throat
ಕಾರವಾರ 01: ಊಟ ಮಾಡುವಾಗ ಅನ್ನ ಹಾಗೂ ಬೇರಲಸಿನ ಕಾಯಿ ತುಂಡುಗಂಟಲಿಗೆ ಸಿಲುಕಿದ ಪರಿಣಾಮ ಯುವಕನೊಬ್ಬ ಮೃತಪಟ್ಟ ದುರ್ಘಟನೆ ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆದಿದೆ.
ಮೃತ ಯುವಕನನ್ನು ಬಿಣಗಾ ಮಾಳಸವಾಡದ ಅಮಿತ್ ಮಾಳಸೇಕರ್ (38) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕಾರು ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅಮಿತ್, ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ, ಹುಬ್ಬಳ್ಳಿಯಲ್ಲಿ ಒಂದು ವಾರಚಿಕಿತ್ಸೆ ಪಡೆದು ಮನೆಗೆ ಬಂದಿದ್ದ.ಮನೆಯಲ್ಲಿ ಊಟ ಮಾಡುವಾಗ ಅನ್ನ, ಬೇರಲಸಿನ ಕಾಯಿ ತುಂಡು ಗಂಟಲಲ್ಲಿ ಸಿಲುಕಿದ ಪರಿಣಾಮ ತೊಂದರೆ ಅನುಭವಿಸಿದ ಅಮಿತ್, ಮನೆಯವರು ನೀರು ಕುಡಿಸಲು ಪ್ರಯತ್ನಿಸಿದರೂ, ಬದುಕಿಸುವ ಯತ್ನ ಫಲ ಕಂಡಿಲ್ಲ. ತಕ್ಷಣವೇ ಕುಸಿದುಬಿದ್ದ ಆತನನ್ನು ಕೂಡಲೇ ಸರ್ಕಾರಿ ಆ್ಯಂಬುಲೆನ್ಸ್ ಮೂಲಕ ಕಾರವಾರ ಕ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ವೈದ್ಯರು ಪರೀಕ್ಷಿಸಿ, ಆಸ್ಪತ್ರೆಗೆ ತರುವ ಮುನ್ನ ಪ್ರಾಣ ಹೋಗಿರುವುದನ್ನು ದೃಢಪಡಿಸಿದರು.
ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಅಮಿತ್ ಸಹೋದರ ಘಟನೆವಿವರಿಸಿ ದೂರು ನೀಡಿದ್ದಾನೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 