ಯುವ ಪೀಳಿಗೆ ದೇಶ ಪ್ರೇಮ ಬೆಳೆಸಿಕೊಳ್ಳಬೇಕು: ರಾಮಕೃಷ್ಣ

ಲೋಕದರ್ಶನವರದಿ

ರಾಣೇಬೆನ್ನೂರು-ಅ.4: ಬದಲಾವಣೆಯ ದಾಪುಗಾಲು ಇಡುತ್ತಿರುವ  ಇಂದಿನ ಯುವ ಪೀಳಿಗೆಯು ದೇಶಪ್ರೇಮ ಮೂಡಿಸಿಕೊಂಡು  ಮಾತೃಭೂಮಿಯ ಬಗ್ಗೆ ನಿಷ್ಠೆಯಿಂದ ದೇಶದ ಹಿತಕ್ಕಾಗಿ ಪ್ರಾಮಾಣಿಕವಾಗಿ ಶೃಮಿಸುವ ಪ್ರತಿಜ್ಞೆ  ಕೈಗೊಳ್ಳಬೇಕಿದೆ. ಇದರಿಂದ ದೇಶವು ಪ್ರಗತಿ ಪಥದತ್ತ ಸಾಗಲು ಸಹಕಾರಿಯಾಗುತ್ತದೆ ಎಂದು ಬೆಂಗಳೂರಿನ ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ತಿನ ಅಧ್ಯಕ್ಷ ಟಿ.ಎನ್.ರಾಮಕೃಷ್ಣ ಹೇಳಿದರು.

     ತಾಲೂಕಿನ ಕೊಡಿಯಾಲ ಹೊಸಪೇಟೆಯ ಬಸವೇಶ್ವರ ಫ್ರೌಢಶಾಲೆಯಲ್ಲಿ ಆದಿತ್ಯ ಬಿಲರ್ಾ ವಿದ್ಯಾಲಯ, ಎಂ.ಎಸ್. ಪಾಟೀಲ ಫ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಸ್ಥಾಪಿಸಿದ ಆಝಾಧ್ ಹಿಂದ್ ಸಕರ್ಾರದ 75ನೇ ವಷರ್ಾಚರಣೆ, ಲಾಲಾ ಲಜಪತರಾಯ್ ರವರು ಅಮೆರಿಕದಲ್ಲಿ ಸ್ಥಾಪಿಸಿದ ಇಂಡಿಯನ್ ಹೋಮ್ರೂಲ್ ಲೀಣ್, ಜಲಿಯಾನಾ ವಾಲಾ ದುರಂತದ ಶತಮಾನೋತ್ಸವದ ಅಂಗವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆಗೊಳಿಸಿ ಮಾತನಾಡಿದರು. 

     ನಮ್ಮ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದಿಂದ  ನಾವು ಬ್ರಿಟಿಷರ ದಾಸ್ಯದಿಂದ  ಮುಕ್ತಿ ಹೊಂದಿ ನಾವೀಗ ಸ್ವತಂತ್ರರಾಗಿದ್ದೇವೆ. ಹಿರಿಯರಿಂದ ಗಳಿಸಿದ ಸ್ವಾತಂತ್ರವನ್ನು ಉಳಿಸಿಕೊಳ್ಳುವ ಕೆಲಸ ಯುವಕರು ಮಾಡಬೇಕಿದೆ, 2019 ರಿಂದ 2020 ರವರೆಗೆ  ಅಮೇರಿಕಾ ಮತ್ತು ಕೆನಡಾ, ಮಲೇಶಿಯಾಗಳಲ್ಲಿ ಕ್ರಾಂತಿಕಾರಿಗಳ ಉಪನ್ಯಾಸ ಹಾಗೂ ಅವರ ಭಾವಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳುವ ಅಮೂಲಕ ಯುವಕರಲ್ಲಿ ದೇಶ ಪ್ರೇಮ, ಹೋರಾಟಗಾರರ ತ್ಯಾಗ ಬಲಿದಾನದ ಸಂಪೂರ್ಣ ಚಿತ್ರಣ ಮೂಡಿಸಬೇಕಿದೆ ಎಂದರು.

    ಕಲಾವಿದ  ಡಾ.ಜಿ.ಜೆ.ಮೆಹೆಂದಳೆ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಹೋರಾಟಗಾರರ ಬದುಕು, ದೇಶ ಪ್ರೇಮ ಹಾಗೂ ದೇಶ ಭಕ್ತಿ ಹಾಗೂ ಅವರು ನಡೆದು ಬಂದ ದಾರಿ ಬಗ್ಗೆ ಟಿ.ಎನ್. ರಾಮಕೃಷ್ಣ ರವರು ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ವತಿಯಿಂದ ದೇಶದ ನಾನಾ ಭಾಗಗಳಲ್ಲಿ ಹಾಗೂ ಸಿಂಗಪೂರ, ಕೆನಡಾ, ಮಲೇಶಿಯಾ, ಹಾಗೂ ಕೌಲಾಲಂಪೂರಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅನೇಕ ಉಪನ್ಯಾಸಗಳನ್ನು ನೀಡುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶಾಘ್ಲನೀಯವಾಗಿದೆ ಎಂದರು.

      ಇದೇ ಸಂದರ್ಭದಲ್ಲಿ ಡಾ.ಜಿ.ಜೆ.ಮೆಹೆಂದಳೆ ಚಿತ್ರಿಸಿದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಪ್ರದಶರ್ಿಸಲಾಯಿತು. ಮುಖ್ಯ ಶಿಕ್ಷಕ  ಜಿ.ಎಸ್.ಓಲೇಕಾರ್, ನೀತಾ ಮೇನನ್,  ಹನುಮಾತಪ್ಪ ಜಿ.ಆರ್ ಶಿಕ್ಷಕರು ಸೇರಿದಂತೆ ಗ್ರಾಮದ ಹಿರಿಯರು ಮತ್ತಿತರರು ಇದ್ದರು.