ಯುವ ಶಕ್ತಿ ದೇಶಪ್ರೇಮ ಬೆಳೆಸಿಕೊಂಡು ಸೈನ್ಯ ಸೇರಬೇಕು: ಸದಾಶಿವಶ್ರೀ

ಲೋಕದರ್ಶನವರದಿ

ರಾಣೇಬೆನ್ನೂರು: ಶಾಲಾ-ಕಾಲೇಜುಗಳಿಗೆ ತೆರಳಿ ಇಂದಿನ ಯುವಶಕ್ತಿಗೆ ದೇಶಪ್ರೇಮ ಬೆಳೆಸುವುದರ ಜೊತೆಗೆ ಸೈನ್ಯ ಸೇರಲು ಪ್ರೋತ್ಸಾಹಿಸುವ ಕಾರ್ಯ ನಿಮ್ಮಿಂದಾಗಬೇಕು ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವಶ್ರೀ ಹೇಳಿದರು.

ತಾಲೂಕಿನ ಐರಣಿ ಗ್ರಾಮದ ನಿವೃತ್ತಿ ಹೊಂದಿದ ಸೈನಿಕರು ಹುಟ್ಟೂರಿಗೆ ಆಗಮಿಸಿದ ಸೈನಿಕರಿಗೆ ನಗರದಲ್ಲಿ ನಾಗಮಂಗಳ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಗೌರ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಭಾರತೀಯ ಸೇನೆಗೆ ಸೇರಲು ಯುವ ಜನತೆ ಮುಂದೆ ಬರಬೇಕು ಎಂದರು. 

ಜಗತ್ತನ್ನು ತಿಳಿಯುವ ವಯಸ್ಸಿನಲ್ಲಿ ಸೈನ್ಯ ಸೇರುವ ಸೈನಿಕ ತನ್ನ ಸಂಪೂರ್ಣ ಯೌವ್ವನವನ್ನು ತಾಯ್ನಾಡಿಗೆ ಮೀಸಲಿಡುತ್ತಾನೆ. ಯಾವುದೇ ಸಕರ್ಾರಿ ಸೇವೆಯಿಂದ ನಿವೃತ್ತಿ ಹೊಂದಿದವರಿಗೆ ಇಂತಹ ಸ್ವಾಗತ, ಗೌರವ ದೊರಕಲಾರದು. ಬಂಧು-ಬಳಗ, ಜಾತಿ, ಪಕ್ಷ, ಧರ್ಮ ಮುಂತಾದವುಗಳಿಂದ ದೂರವಿದ್ದು, ದೇಶ ಪ್ರೇಮಿಗಳಾದ ಯೋಧರಿಗೆ ಮಾತ್ರ ದೊರಕುತ್ತದೆ. ಗ್ರಾಮದಾಧ್ಯಂತ ಇಂದು ಹಬ್ಬದ ಆಚರಣೆ ನಡೆಯುತ್ತಿದೆ ಎಂದು ಶ್ರೀಗಳು ನುಡಿದರು. 

     ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಪರಶುರಾಮ ಕಟಗಿ, ಬಸವರಾಜ ಯಡಿಕಾಲ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಕ್ಕಿಆಲೂರಿನ ಶಿವಬಸವ ಸ್ವಾಮಿಗಳು, ಬಿಜೆಪಿ ಮುಖಂಡ ಡಾ| ಬಸವರಾಜ ಕೇಲಗಾರ, ಎಸ್.ಎಸ್. ರಾಮಲಿಂಗಣ್ಣನವರ, ಐರಣಿ ಗ್ರಾಪಂ ಅಧ್ಯಕ್ಷ ಗುಳ್ಳಜ್ಜ, ಭಾರತಿ ಜಂಬಗಿ, ಬಾಬು ಶೆಟ್ಟರ್ ಸೇರಿದಂತೆ ಮತ್ತಿತರರು ಇದ್ದರು.