ಯುವ ಪಿಳಿಗೆ ಕನ್ನಡವನ್ನು ಹೆಚ್ಚು ಬಳಸಬೇಕು: ಶಿವುಕುಮಾರ

ಲೋಕದರ್ಶನ ವರದಿ

ಯಲಬುಗರ್ಾ: ಇಂದಿನ ಕಾಲದ ಯುವ ಜನತೆ ಇನ್ನೀತರ ಭಾಷೆಗಳ ವ್ಯಾಮೋಹಕ್ಕೆ ಸಿಲುಕಿ ಕನ್ನಡ ಭಾಷೆಯನ್ನು ಮರೆಯಬಾರದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಶಿವಕುಮಾರ ಐನಕ್ಕಿ ಹೇಳಿದರು.

ತಾಲೂಕಿನ ಮೂದೋಳ ಗ್ರಾಮದ ಸ್ನೇಹಜೀವಿ ಗೆಳೆಯರ ಬಳಗ ಕನ್ನಡ ರಾಜ್ಯೋತ್ಸವ ನಿಮಿತ್ಯ ಏರ್ಪಡಿಸಿದ್ದ ಬೈಕ್ ರ್ಯಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂಗ್ಲೀಷ್ ಭಾಷೆಯನ್ನು ಕಲಿಯಿರಿ ಆದರೆ ಎಲ್ಲದರಲ್ಲಿಯೂ ಅದನ್ನೆ ಮುಂದುವರೆಸಬಾರದು ಯಾಕೆಂದರೆ ನಮ್ಮ ಮೊದಲ ಆದ್ಯತೆ ಕನ್ನಡಕ್ಕಿರಬೇಕು ಕನ್ನಡ ಭಾಷೆಯಷ್ಟು ಶ್ರೀಮಂತ ಭಾಷೆ ಮತ್ತೊಂದು ಇಲ್ಲಾ ಆದ್ದರಿಂದ ಯುವಕರು ಹೆಚ್ಚು ಕನ್ನಡಕ್ಕೆ ಮಹತ್ವ ನೀಡಬೆಕು ಎಂದರು.

ಈ ಸಂದರ್ಭದಲ್ಲಿ ಯುವಕರಾದ ಪ್ರಭುಸ್ವಾಮೀ, ವಿರೇಶ ಮಾಸ್ತಿ, ಶಿವಮೂರ್ತಯ್ಯ ಕಳ್ಳಿಮಠ,  ಪ್ರಶಾಂತ ವಡ್ಡರ, ಮಹೇಶ ವಿವೇಕಿ, ಶರಣು ದೇವಕ್ಕಿ, ನಬಿಸಾಬ, ಬಸವರಾಜ ಗುದಗಿ, ಬಂಗಾರಪ್ಪ, ಶರಣು, ಸೈಯದ್ ಇಲಕಲ್, ಅಬ್ದುಲ್, ರೇಣಕಪ್ಪ ದೊಡ್ಡಮನಿ, ಪರಸಪ್ಪ, ವೀರಯ್ಯ ಮಠದ, ಸೇರಿದಂತೆ ಇನ್ನೂ ಅನೇಕ ಯುವಕರು ಹಾಜರಿದ್ದರು.