ಹೋವ್, ಆ 12 ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 19 ವಯೋಮಿತಿ ಯುವ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆರು ವಿಕೆಟ್ಗಳಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇಲ್ಲಿನ, ಕೌಂಟಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ನಿಗದಿತ 50 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 261 ರನ್ ಗಳಿಸಿತು. ಬಳಿಕ, ಗುರಿ ಬೆನ್ನತ್ತಿದ ಭಾರತ ಕಿರಿಯರು 48.4 ಓವರ್ಗಳಿಗೆ ನಾಲ್ಕು ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿ ತ್ರಿಕೋನ ಸರಣಿಯ ಚಾಂಪಿಯನ್ ಆಯಿತು. 262 ರನ್ ಗುರಿ ಹಿಂಬಾಲಿಸಿದ ಭಾರತದ ಅಗ್ರ ಕ್ರಮಾಂಕದ ನಾಲ್ಕು ಬ್ಯಾಟ್ಸ್ಮನ್ಗಳು ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ಕಣಕ್ಕೆ ಇಳಿದ ಯಶಸ್ವಿ ಜೈಸ್ವಾಲ್(50 ರನ್) ಹಾಗೂ ದಿವ್ಯಾಂಶು ಸೆಕ್ಸೇನಾ(55 ರನ್) ತಲಾ ಅರ್ಧ ಶತಕ ಸಿಡಿಸುವ ಮೂಲಕ ಮುರಿಯದ ಮೊದಲನೇ ವಿಕೆಟ್ಗೆ 104 ರನ್ ಗಳಿಸಿದರು. ಬಳಿಕ ಈ ಜೋಡಿ ರಕಿಬುಲ್ಲಾ ಹಸನ್ಗೆ ವಿಕೆಟ್ ಒಪ್ಪಿಸಿತು. ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಪ್ರಿಯಮ್ ಗಾರ್ಗ್ 66 ಎಸೆತಗಳಲ್ಲಿ 73 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜವಾಭ್ದಾರಿಯುತ ಬ್ಯಾಟಿಂಗ್ ಮಾಡಿದ ಧ್ರುವ್ ಜುರೆಲ್ ಅವರು 73 ಎಸೆತಗಳಲ್ಲಿ 59 ರನ್ ಗಳಿಸಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶರ ಪರ ಮಹ್ಮುದುಲ್ಹಾ ಹಸನ್ ಜಾಯ್ ಅವರು ಅದ್ಭುತ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾದರು. 134 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸ್ ಹಾಗೂ 9 ಬೌಂಡರಿಯೊಂದಿಗೆ 109 ರನ್ ಗಳಿಸಿ ಶತಕ ಸಿಡಿಸಿದರು. ಇವರನ್ನು ಬಿಟ್ಟರೆ ಪರ್ವೇಜ್ ಹೊಸೈನ್ 64 ಎಸೆತಗಳಲ್ಲಿ 60 ರನ್ ಗಳಿಸಿದರು. ಇವರಿಬ್ಬರನ್ನು ಬಿಟ್ಟರೆ ಶಮೀಮ್ ಹೊಸೈನ್ ಅವರು 32 ರನ್ ಗಳಿಸಿದ್ದರು. ಭಾರತದ ಪರ ಕಾರ್ತಿಕ್ ತ್ಯಾಗಿ ಹಾಗೂ ಸುಶಾಂತ್ ಮಿಶ್ರಾ ಅವರು ತಲಾ ಎರಡು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಬಾಂಗ್ಲಾದೇಶ(19): 261 (50) ಮಹ್ಮುದುಲ್ಹಾ-109 ಪರ್ವೇಜ್ ಹೊಸೈನ್-60 ಶಮೀಮ್ ಹೊಸೈನ್-32 ಬೌಲಿಂಗ್: ಕಾರ್ತಿಕ್ ತ್ಯಾಗಿ-49 ಕ್ಕೆ 2, ಸುಶಾಂತ್ ಮಿಶ್ರಾ 33 ಕ್ಕೆ 2 ಭಾರತ(19): 264/4 (48.4) ಯಶಸ್ವಿ ಜೈಸ್ವಾಲ್-50 ದಿವ್ಯಾಂಶ್ ಸೆಕ್ಸೇನಾ-55 ಪ್ರಿಯಮ್ ಗಾರ್ಗ್-73 ಧ್ರುವ್