ಲೋಕದರ್ಶನ ವರದಿ
ಯಲಬುಗರ್ಾ: ಮನುಷ್ಯ ತನ್ನಲ್ಲಿರುವ ಸಂಪಾದನೆಯಲ್ಲಿ ಇತರರಿಗೆ ಸ್ವಲ್ಪನಾದರು ಹಂಚಿಕೆ ಮಾಡಿ ಇತರರ ಕಷ್ಟಕ್ಕೆ ಸಹಾಯ ಮಾಡುವದರಲ್ಲಿ ಸಿಗುವ ನೆಮ್ಮದಿ ಮತ್ಯಾವುದರಲ್ಲಿಯೂ ಸಿಗುವದಿಲ್ಲ ಎಂದು ಯುವ ಮುಖಂಡ ಕಳಕನಗೌಡ ಜುಮಲಾಪೂರ ಹೇಳಿದರು.
ಕಲ್ಲೂರಿನಲ್ಲಿ ನಡೆದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರಿಗೆ ತುಲಾಭಾರ ನೆರವೇರಿಸಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಚಿಕ್ಕಂದಿನಿಂದ ಅತ್ಯಂತ ಬಡತನದಿಂದ ಬಂದಿದ್ದು ಬಡವರ ನೋವು ಏನು ಎನ್ನುವದು ನನಗೆ ಚೆನ್ನಾಗಿ ಗೊತ್ತಿದೆ, ನಾನು ಪರಿಶ್ರಮದಿಂದ ದುಡಿದ ಹಣದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎನ್ನುವ ಸಂಕಲ್ಪದಿಂದ ಇಂದು ಇಂತಹ ಒಂದು ಧಾಮರ್ಿಕ ಕಾರ್ಯಕ್ರಮವನ್ನು ಮಾಡುತ್ತಿದ್ದೆನೆ ಇದಕ್ಕೆಲ್ಲಾ ನಮ್ಮ ಗ್ರಾಮಸ್ಥರ ಸಹಕಾರ ತುಂಬಾ ಇದೆ, ನಮ್ಮ ಗ್ರಾಮಕ್ಕೆ ತನ್ನದೆ ಆದಂತಹ ವಿಶಿಷ್ಟ ಪರಂಪರೆ ಹಾಗೂ ನಾಡಿನಲ್ಲಿ ಉತ್ತಮ ಹೆಸರು ಮಾಡಿದಂತಹ ಮಹಾನ್ ಪುರುಷರು ಜನಿಸಿದ ಗ್ರಾಮವಿದು ಇಲ್ಲಿ ನೆಲೆಸಿರುವ ಕಲ್ಲಿನಾಥೇಶ್ವರನ ಕೃಪಾಶಿವರ್ಾದವು ನಮ್ಮ ಗ್ರಾಮದ ಜನತೆಯ ಮೇಲಿದೆ, ಅದರಂತೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ನಮ್ಮ ಗ್ರಾಮದ ಕಿತರ್ಿಯನ್ನು ಹೆಚ್ಚಿಸುವ ಜನಪರ ಹಾಗೂ ಅತ್ಯುತ್ತಮ ಕಾರ್ಯಗಳನ್ನ ಹಮ್ಮಿಕೊಳ್ಳಲು ನಾನು ಸಿದ್ದನಿದ್ದೆನೆ ಅದಕ್ಕೆ ಗ್ರಾಮಸ್ಥರ ಸಹಕಾರ ಅತ್ಯಂತ ಮುಖ್ಯವಾಗಿದೆ ಮೇಲು ಕೀಳು ಎಂಬ ಭಾವನೆಯನ್ನು ತೊಡೆದು ಹಾಕಿ ಎಲ್ಲರೂ ಒಂದೆ ಎಂದು ಬದುಕಬೇಕು ಅಂದಾಗ ನಾವು ಮನುಷ್ಯರಾಗಿ ಜನಿಸಿದ್ದಕ್ಕೂ ಸಾರ್ಥಕತೆಯಾಗುತ್ತದೆ ಎಂದರು.
ಕಲ್ಲಯ್ಯಜ್ಜನವರು, ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮೀಗಳು ಹಿರೇಮಠ ಬೆದವಟ್ಟಿ, ಗಣೇಶ ಸ್ವಾಮೀಗಳು ಶಕ್ತಿಪೀಠ ಕಲ್ಗುಡಿ, ವಿಜಯಮಹಾಂತೇಶ ಮಹಾಸ್ವಾಮೀಗಳು, ಕುದರಿಮೋತಿ, ಮಹದೇವ ದೇವರು ಕುಕನೂರು, ಸಿದ್ದಲಿಂಗೇಶ್ವರ ಶಿವಾಚಾರ್ಯರು ಅರಳೇಲೆ ಹೀರೆಮಠ ಮಂಗಳೂರು, ಸೇರಿದಂತೆ ಅನೇಕ ಗಣ್ಯರು ಶಾಸ್ತ್ರೀಗಳು, ಗ್ರಾಮಸ್ಥರು ಹಾಜರಿದ್ದರು.