ಮೂಡಲಗಿ: ಗ್ರಾಮೀಣ ಭಾಗದಲ್ಲೊಬ್ಬ ಯೋಗ ಗುರು

ಸುಧೀರ ನಾಯರ್

ಮೂಡಲಗಿ 20:  ಐದು ವರ್ಷಗಳ ಹಿಂದೆ ಜಾಗತಿಕ ಮನ್ನಣೆ ಪಡೆದ ಯೋಗವು ಭಾರತವನ್ನು ಜಾಗತಿಕ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ಸಾಧಕರ ಗಮನ ಸೆಳೆದ ಭಾರತೀಯ ಯೋಗವೂ ವಿಶ್ವ ಸಂಸ್ಥೆಯಿಂದ ಮಾನ್ಯತೆ ಪಡೆದು ಜೂನ್ 21 ರಂದು ಯೋಗ ದಿನವನ್ನಾಗಿ ಆಚರಿಸಿಕೊಳ್ಳುತ್ತಿದೆ. ವಿಶ್ವಯೋಗ ದಿನದಂದು ಯೋಗಸನಗಳೂ ದೇಶದ್ಯಾಂತ ಸಾರ್ವಜನಿಕವಾಗಿ ಪ್ರದರ್ಶನ, ಚಚರ್ೆ ಹಾಗೂ ತರಬೇತಿಗಳು ಕಾಣಸಿಗುತ್ತದೆ.

ನಾವೆಲ್ಲ ಯೋಗ ಗುರು ರಾಮದೇವ ಬಾಬಾರ ಕಾರ್ಯಕ್ರಮಗಳನ್ನು ದೂರದರ್ಶನಗಳಲ್ಲಿ ಕಂಡು ಆಕಷರ್ಿತರಾಗುತ್ತಿದ್ದೇವೆ. ಯೋಗದ ಮಹತ್ವವನ್ನು ಮತ್ತು ಪ್ರಾಣಾಯಾಮ ಯೋಗಸನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಲವೂ ಸಂಘ ಸಂಸ್ಥೆಗಳು ದೇಶದ್ಯಾಂತ ಶಿಬಿರಗಳನ್ನು ನಡೆಸುತ್ತಿವೆ.  ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿಯೂ ಯೋಗವನ್ನು ಗುರುತಿಸಿ ಕಲಿಸುವ ಕಾರ್ಯದಲ್ಲಿ  ಅವಿರತವಾಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಗ್ರಾಮೀಣ ಭಾಗದ ಶಿಕ್ಷಕ ಬಸು ಬಡವನ್ನಿಯೂ ಒಬ್ಬರು.

ಮೂಡಲಗಿ ತಾಲೂಕಿನ  ಬಾಳೋಬಾಲದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 12 ವರ್ಷಗಳಿಂದ ನಿರಂತರವಾಗಿ ಯೋಗ ತರಬೇತಿ ನೀಡುತ್ತ ಬಂದಿದ್ದಾರೆ. ಪ್ರತಿದಿನ ಸುಮಾರು 25 ಮಕ್ಕಳು ಇವರ ಬಳಿ ಯೋಗ ಕಲಿಯುತ್ತಿದ್ದು ಮಕ್ಕಳ ಶ್ರೇಯೋಭಿವೃದ್ದಿಗೆ ದುಡಿಯುತ್ತಿದ್ದಾರೆ. ಇವರ ಬಳಿ ಯೋಗಭ್ಯಾಸ ಕಲಿತಿರುವ 14 ವಿದ್ಯಾಥರ್ಿಗಳು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ  8ನೇ ತರಗತಿಗೆ ಹಾಗೂ ಸಾಗರ ತಾಲೂಕಿಗೆ 3 ವಿದ್ಯಾಥರ್ಿಗಳು ಉಚಿತ ಶಿಕ್ಷಣಕ್ಕಾಗಿ ಆಯ್ಕೆಗೊಂಡಿರುವುದು ಸಂತಸದ ವಿಷಯವಾಗಿದೆ. ಯಾವುದೇ ರಜಾದಿನ ಇದ್ದರು ಸಹ  ಇವರ ಯೋಗ ಅಭ್ಯಾಸ ನಿಲ್ಲುವುದಿಲ್ಲ ಎನ್ನುತ್ತಾರೆ ಇವರ ಮುದ್ದು ವಿದ್ಯಾಥರ್ಿಗಳು.

ಸತತ ಏಳು ವರ್ಷಗಳಿಂದ ರಾಷ್ಟ್ರಮಟ್ಟದ ಯೋಗ ಸ್ಪಧರ್ೆಗಳಲ್ಲಿ ಭಾಗವಹಿಸಿರುವ  ವಿದ್ಯಾಥರ್ಿಗಳು  ಕಳೆದ ಬಾರಿ ರಾಷ್ಟ್ರಮಟ್ಟದ ತೃತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ ರಾಜ್ಯ, ಜಿಲ್ಲಾ, ತಾಲೂಕು ಮಟ್ಟುಗಳಲ್ಲಿ ಹಲವೂ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈ ರೀತಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಗ ಗುರುವಿಗೆ  ನಾವೇಲ್ಲರೂ ಸಹಕಾರ ನೀಡುವುದರ ಜೊತೆ ಆ ಗುರುಗಳಿಗೆ ನಮ್ಮದೊಂದು ನಮನವಿರಲಿ.