ಧಾರವಾಡ ಮೇ. 20: ಮನುಷ್ಯನಿಗೆ ಗುರು ಬೇಕು. ಗುರು ಇಲ್ಲದೇ ಹೋದರೆ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬನಿಗೂ ಹಿಂದೆ ಗುರು, ಮುಂದೆ ಗುರಿ ಇರಬೇಕೆಂದು ಖ್ಯಾತ ಹೃದಯ ರೋಗ ತಜ್ಞ ಡಾ: ಅನಿಲ್ ಹನಮಂತಗೌಡ ತಿಳಿಸಿದರು.
ಇಲ್ಲಿನ ಸಾಧನಕೇರಿ ದ.ರಾ. ಬೇಂದ್ರೆ ಉದ್ಯಾನವನದಲ್ಲಿ ಸಾಧನಕೇರಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಯೋಗ ಶಿಬಿರದ 84ನೇ ವಾಷರ್ಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಮನುಷ್ಯ ತನ್ನ ವಿಚಾರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಾಣಾಯಾಮ ಮಾಡಬೇಕೆಂದು ಸಲಹೆ ಮಾಡಿದರು. ಮನಸ್ಸು ಮತ್ತು ಶರೀರದ ಸಂಪೂರ್ಣ ಶಕ್ತಿಯನ್ನು ಜಾಗೃತಗೊಳಿಸುವ ಸಾಧನೆಯೇ ಯೋಗ. ಪ್ರತಿಯೊಬ್ಬರು ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಬೇಕೆಂದರು.
ಆರಂಭದಲ್ಲಿ ಡಾ: ಗುರುಚಿದಂಬರ ಟಕ್ಕಳಕಿ ವೇದ ಘೋಷಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಸ್ಕೃತ, ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಪ್ರತಿಯೊಬ್ಬರಿಗೂ ತಿಳುವಳಿಕೆ ಮೂಡಿಸುವುದು ಅತ್ಯಂತ ಮಹತ್ವವಾಗಿದೆ ಎಂದರು. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕೃತ ಅಭ್ಯಾಸ ಮಾಡಿಸಬೇಕೆಂದರು.
ಅತಿಥಿಗಳಾಗಿ ಶಂಕರ ಬಸವರೆಡ್ಡಿ ಮಾತನಾಡಿ, ಈ ವಾಡರ್್ನ ಪ್ರತಿಯೊಂದು ಬಡಾವಣೆಗಳಲ್ಲಿ ಯೋಗ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ. ಇದಕ್ಕೆ ನಾಗರಿಕರು ಪ್ರೋತ್ಸಾಹ ನೀಡಬೇಕೆಂದರು.
ಸಾಧನಕೇರಿ ಪತಂಜಲಿ ಯೋಗ ಸಮಿತಿಯ ಕೇಂದ್ರದ ಯೋಗ ಶಿಕ್ಷಕರು ಹಾಗೂ ಮುಖ್ಯಸ್ಥರಾದ ಹಣಮಂತರಾವ್ ಟಕ್ಕಳಕಿ ಮಾತನಾಡಿ ಯೋಗ ಕೇಂದ್ರ ಮೂಲಕ ಆರೋಗ್ಯ ತಪಾಸಣೆ, ಯೋಗ ಕುರಿತು ಉಪನ್ಯಾಸ ಸೇರಿದಂತೆ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೇವಲ ಮಹಿಳೆಯರು, ಪುರುಷರು ಸೇರಿದಂತೆ ಕೇವಲ 24 ಜನರಿಂದ ಆರಂಭಗೊಂಡ ಈ ಯೋಗಕೇಂದ್ರದಲ್ಲಿ ಸಾಕಷ್ಟು ಜನರು ಭಾಗವಹಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಖ್ಯಾತ ಹೃದಯರೋಗ ತಜ್ಞರಾದ ಡಾ: ಅನಿಲ್ ಹನಮಂತಗೌಡ, ಯೋಗ ಶಿಕ್ಷಕರಾದ ಹಣಮಂತರಾವ್ ಟಕ್ಕಳಕಿ ಹಾಗೂ ಜಾತಕ ಪಾರಿಜಾತ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದ ಡಾ; ಗುರು ಚಿದಂಬರ ಅವರನ್ನು ಸಮಿತಿಯಿಂದ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ; ಕೆ.ಜಿ. ಕುಲಕಣರ್ಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಭೇದವಿಲ್ಲದೇ ಎಲ್ಲ ಧರ್ಮ, ಮತ, ಪಂಕ್ತಿ, ಜಾತಿ, ಸಮುದಾಯದವರು, ಯೋಗದ ಅಭ್ಯಾಸ ಮಾಡಿ, ಎಲ್ಲ ತರಹದ ಶಾರೀರಿಕ ಹಾಗೂ ಮಾನಸಿಕ ತೊಂದರೆಗಳನ್ನು ನಿವಾರಿಸಿಕೊಂಡು ಸುಖಮಯ ಜೀವನ ಪಡೆಯುವುದೇ ಯೋಗ. ಇಂತಹ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ಆರಂಭದಲ್ಲಿ ಯೋಗ ಶಿಕ್ಷಕ ಬವರಾಜ ಕಡೆಕರ್ ಸ್ವಾಗತಿಸಿದರು. ಯೋಗ ಶಿಕ್ಷಕ ಎಂ.ಡಿ. ಪಾಟೀಲ ಅತಿಥಿಗಳ ಪರಿಚಯ ಮಾಡಿದರು. ಕಾಶೀನಾಥ ಹಂದ್ರಾಳ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು. ಇದಕ್ಕೂ ಮುಂಚೆ ಯೋಗ ಶಿಕ್ಷಕರಾದ ಅರವಿಂದ ಕುಲಕಣರ್ಿಯವರು ಯೋಗ ಶಿಬಿರ ನಡೆಸಿಕೊಟ್ಟರು. ಯೋಗ ಶಿಬಿರಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.