ಮಾನಸಿಕ, ದೈಹಿಕ ಸಮನ್ವಯತೆಗೆ ಯೋಗ ಸಹಕಾರಿ: ನೀಲಗುಂದ ಗುದ್ನೇಶ್ವರಮಠದ ಪ್ರುಭುಲಿಂಗ

ಲೋಕದರ್ಶನ ವರದಿ

ಶಿರಹಟ್ಟಿ 20: ಮನುಷ್ಯನ ಬುದ್ಧಿ ಚಿತ್ತಗಳ ಸಮನ್ವಯತೆ ಸಾಧಿಸಿ, ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೊಂದುವಲ್ಲಿ ಯೋಗ ಸಹಕಾರಿ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.

ಅವರು ಮುಳಗುಂದ ಕೆಎಸ್ಎಸ್ ಕಾಲೇಜು ಆವರಣದಲ್ಲಿ ನೆಹರು ಯುವ ಕೇಂದ್ರ ಗದಗ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಬೀರಲಿಂಗೇಶ್ವರ ಸೇವಾ ಸಮಿತಿ, ಮಹಾಂತೇಶ್ವರ ಯುವಕ ಮಂಡಳ ಹಾಗೂ ಪತಂಜಲ ಯೋಗ ಸಮಿತಿ ಮುಳಗುಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿ, ಯೋಗವು ಭಾರತೀಯ ಪರಂಪರೆಯಿಂದ ಬಳುವಳಿಯಾಗಿ ಬಂದ ವಿದ್ಯಯಾಗಿದ್ದು, ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಾನ್ಯತೆ ಪಡೆದಿದೆ. ಆದುದರಿಂದ ಯೋಗ ಗುರು ಪ್ರಕಾಶ ಮದ್ದಿನ ಅವರಂತಹ ಯೋಗ ಶಿಕ್ಷಕರಿಂದ ತರಬೇತಿ ಪಡೆದು ಶಿಬಿರದ ಸದುಪಯೋಗ ಪಡೆಯಬೇಕು ಎಂದರು.

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಿವಾನಂದ ಆಚಾರ್ಯ ಮಾತನಾಡಿ, ಯೋಗವನ್ನು ನಾವು ದಿನಚರಿಯಲ್ಲಿ ಅಳವಡಿಸಿಕೊಂಡಾಗ ದಿನದ ಪೂತರ್ಿ ಚಟುವಟಿಕೆಯಿಂದ ಕೂಡಿದ ಆರೋಗ್ಯ ಪೂರ್ಣ ಜೀವನ, ಮಾನಸಿಕ ನೆಮ್ಮದಿ ಹೊಂದಲು ಸಾಧ್ಯ ಎಂದರು. ಅಧ್ಯಕ್ಷತೆಯನ್ನು ಸಂಕೇಶ ದಂಡಿನ ವಹಿಸಿದ್ದರು, ಸುಖೇಶ ಸರ್,ರಾಜಕುಮಾರ, ಸಿ.ಎಚ್.ದೊಡ್ಡಮನಿ, ಜೆ.ಎಸ್.ಶಿಶರ್ಿ, ಸುರೇಶ ಯಡ್ರಾವಿ, ಮತ್ತು ಮಹಾಂತೇಶ ಕಳ್ಳಿಮನಿ, ವಷರ್ಾ ಬಾರಕೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಯೋಗ ಗುರು ಪ್ರಕಾಶ ಮದ್ದಿನ ಇವರಿಂದ ಯೋಗ ತರಬೇತಿ ಮಕ್ಕಳಿಗೆ ವಿವಿಧ ಬಂಗಿಗಳನ್ನು ಮಾಡಿ ತೋರಿಸಿದರು.