ಧಾರವಾಡ 21: ಇಂದಿನ ಒತ್ತಡದ ದಿನಗಳಲ್ಲಿ ದೇಹಕ್ಕೆ ಯೋಗದ ಅವಶ್ಯಕತೆ ತುಂಬಾ ಇದೆ. ಯೋಗ ಮಾಡುವುದರಿಂದ ರೋಗಗಳು ಮಾನವನಿಂದ ದೂರವಿರಲು ಸಾಧ್ಯವಿದೆ. ಅದರೊಂದಿಗೆ ಮನಸ್ಸಿಗೆ ಸಂಗೀತದ ಅವಶ್ಯಕತೆ ಕೂಡ ತುಂಬಾ ಇದೆ ಎಂದು ಡಿಮ್ಹಾನ್ಸ್ ಸಂಸ್ಥೆಯ ಮನೋರೋಗ ವಿಭಾಗದ ಪ್ರಾಧ್ಯಾಪಕ ಪ್ರೋ. ಡಾ.ರಾಮಪ್ರಸಾದ್ ಹೇಳಿದರು.
ಇಲ್ಲಿನ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ "5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಯೋಗದ ಅವಶ್ಯಕತೆ ಮತ್ತು ಇದರಿಂದ ಆಗುವ ಪ್ರಯೋಜನೆಗಳ ಬಗ್ಗೆ ವಿವರಿಸಿದರು.
ಡಿಮ್ಹಾನ್ಸ್ ಸಂಸ್ಥೆಯ ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ ಭಜಂತ್ರಿ ಇವರು"ಯೋಗ ಮತ್ತು ಮಾನಸಿಕ ಆರೋಗ್ಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಇಂದಿನ ಆಧುನಿಕಜೀವನ ಶೈಲಿ ಮತ್ತು ಕೆಲಸದ ಒತ್ತಡಗಳಿಂದಾಗಿ ನಮಗೆ ಅನೇಕ ರಕ್ತಒತ್ತಡ, ಕ್ಯಾನ್ಸ್ರ್, ಬೊಜ್ಜು, ಸಕ್ಕರೆ ಕಾಯಿಲೆ ಮುಂತಾದ ಕಾಯಿಲೆಗಳು ಬರುತ್ತಿದ್ದು, ಯೋಗವನ್ನು ಪ್ರತಿನಿತ್ಯ ಮಾಡಿದ್ದೇ ಆದಲ್ಲಿ ಇಂತಹ ರೋಗಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದರು. ಖಿನ್ನತೆ ಮತ್ತು ಇತರ ಮಾನಸಿಕ ಕಾಯಿಲೆಗಳಿಂದ ಬಳಲುವಂತಹವರು ಯೋಗವನ್ನು ಪ್ರತಿನಿತ್ಯ ಮಾಡಿದ್ದಲ್ಲಿ ಉತ್ತಮ ಮಾನಸಿಕ ಆರೋಗ್ಯ ಹೊಂದಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀನಿವಾಸ ಕೊಸಗಿ ಅವರು ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಯೋಗ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು ಇದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ಬರುವ ಅನೇಕ ರೋಗಗಳನ್ನು ತಡೆಯಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಯೋಗ ಗುರು ಕಾಶಿನಾಥ ಹಂದ್ರಾಳ್ ಇವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮತ್ತು ಪ್ರತಿದಿನ ಯೋಗ ಮಾಡುವುದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ದೇಹಕ್ಕೆ ಬರುವಂತಹ ಅನೇಕ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ ತಿಳಿಸಿದರು. ಯೋಗಭ್ಯಾಸದಿಂದ ನಮಗೆ ಬರುವ ನಕರಾತ್ಮಕ ಯೋಚನೆಗಳು ಕಡಿಮೆಯಾಗಿ ಸಕರಾತ್ಮಕ ಯೋಚನೆಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು. ವಿವಿಧ ಯೋಗದ ಆಸನಗಳನ್ನು ಮಾಡಿತೋರಿಸುವುದರ ಮೂಲಕ ಇಂತಹ ಯೋಗದ ಆಸನಗಳ ಮಹತ್ವದ ಬಗ್ಗೆ ವಿವರಿಸಿದರು.
ಡಿಮ್ಹಾನ್ಸ್ ಸಂಸ್ಥೆಯ ಡಾ.ಶ್ರೀಧರ್ ಕುಲಕರ್ಣಿ ಇವರು"ಸಂಗೀತ ಚಿಕಿತ್ಸೆಕುರಿತು ಮಾತನಾಡಿ, ಇಂದು ಕೆಲವು ರೋಗಗಳಿಗೆ ನಿಖರವಾದ ಸಂಗೀತ ಚಿಕಿತ್ಸೆಗಳು ಇದ್ದು ಇವುಗಳ ಬಗ್ಗೆ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬೇಕು, ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೇ ದೇಹಕ್ಕೆ ಮತ್ತು ಮನಸ್ಸಿಗೆ ಬರುವ ಕೆಲವು ರೋಗಗಳನ್ನು ವಾಸಿಮಾಡಲು ಸಹಾಯಕವಾಗುತ್ತದೆಎಂದು ತಿಳಿಸಿದರು.
ಪ್ರಶಾಂತ ಪಾಟೀಲ ನಿರೂಪಿಸಿದರು. ಅಶೋಕಕೋರಿ ಸ್ವಾಗತಿಸಿದರು. ಆರ್.ಎಮ್.ತಿಮ್ಮಾಪೂರ ವಂದಿಸಿದರು.ನರ್ಸಿಂಗ್ ಪ್ರಶಿಕ್ಷಾಣರ್ಥ ಗಳು, ಸಮಾಜಕಾರ್ಯ ಪ್ರಶಿಕ್ಷಾಣರ್ಥ ಗಳು ಮತ್ತು ಡಿಮ್ಹಾನ್ಸ್ ಸಂಸ್ಥೆಯ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.