ಲೋಕದರ್ಶನ ವರದಿ
ರಾಣೇಬೆನ್ನೂರು: ಯಾಂತ್ರೀಕ ಬದುಕಿನಲ್ಲಿ ಸಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಸ್ತ್ರೀ-ಪುರಷರು ಮಾನಸೀಕ ಶಾಂತಿ, ನೆಮ್ಮದಿ ಕಾಣದೇ ನಿತ್ಯವೂ ತೊಳಲಾಡುವಂತಾಗಿದೆ. ಇದನ್ನು ಹೋಗಲಾಡಿಸಲು ನಿತ್ಯದ ಬದುಕಿನಲ್ಲಿ ಕನಿಷ್ಟ ಸಮಯಕಾಲವಾದರೂ ಯೋಗ, ಧ್ಯಾನ, ಪ್ರಾಣಾಯಾಮದ ಕಡೆ ಗಮನ ಹರಿಸಬೇಕಾಗಿದೆ. ಇಲ್ಲದೇ ಹೋದರೆ, ಆರೋಗ್ಯ ಹದಗೆಟ್ಟು ಶಾಂತಿ-ನೆಮ್ಮದಿ ಕಾಣದೇ ಬದುಕು ದುರಂತದ ಕಡೆ ಸಾಗಬೇಕಾಗುತ್ತದೆ ಎಂದು ಕನರ್ಾಟಕ ರಾಜ್ಯ ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಭಾರಿ ಆರತಿ ಕಾನಗೋ ಹೇಳಿದರು.
ಅವರು ಇಲ್ಲಿನ ಮೇಡ್ಲೇರಿ ರಸ್ತೆ ಆದಿಶಕ್ತಿ ದೇವಸ್ಥಾನ ಧ್ಯಾನ ಮಂದಿರದಲ್ಲಿ ಜಿಲ್ಲಾ ಪತಂಜಲಿ ಯೋಗ ಮಹಿಳಾ ಸಮಿತಿಯು ಆಯೋಜಿಸಿದ್ದ, ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಮತ್ತು ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕನರ್ಾಟಕದಲ್ಲಿ ಪ್ರತಿಯೊಬ್ಬ ಮಹಿಳೆಯರು ಯೋಗದತ್ತ ಮುಖಮಾಡುತ್ತಿರುವುದು ಡಾ|| ಬಾಬಾ ರಾಮ್ದೇವ್ಜೀ ಅವರ ಉದ್ದೇಶಿತ ಯೋಜನೆ ಆರೋಗ್ಯ ಭಾಗ್ಯ ಮತ್ತು ಯೋಗದತ್ತ ನಮ್ಮ ನಡಿಗೆ ಯಶಸ್ವಿ ಕಾಣುತ್ತಲಿದೆ. ಮಹಿಳೆಯರು ನಿತ್ಯದ ಬದುಕಿನ ಜಂಜಾಟದಲ್ಲಿ ಜೀವನ ಸಾಗಿಸುತ್ತಿದ್ದರೂ ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ಯೋಗದತ್ತ ಸಾಗಬೇಕಾಗಿದೆ ಎಂದು ಶಿಭಿರಾಥರ್ಿಗಳಿಗೆ ಕಾನಗೋ ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಮಂಡಳ ಮಹಿಳಾ ಪ್ರಭಾರಿಯಾಗಿ ನೇಮಕಗೊಂಡ ವಜ್ರೇಶ್ವರಿ ವಾ. ಲದ್ವಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಜ್ಯೋತಿ ಜ. ಜಂಬಿಗಿ ಅವರು ಮಹಿಳಾ ಪ್ರಭಾರಿಯಾಗಿ ಹಾಗೂ ಸರೋಜಾ ಸುಣಗಾರ ಜಿಲ್ಲಾ ಮಹಿಳಾ ಸಹ ಪ್ರಭಾರಿಯಾಗಿ ನೇಮಕಗೊಳಿಸಲಾಯಿತು. ವೇದಿಕೆಯಲ್ಲಿ ರೇಖಾ ರಮಾಳದ, ಕವಿತಾ ಕುಬಸದ, ಶೋಭಾ ಗುಡಮಿ, ಎಂ.ಹೆಚ್.ಹರವಿಶೆಟ್ಟರ, ಗೀರಿಶ್ ವಾಲಿ, ರೂಪಾ ಅಂಬ್ಲೇರ್, ಗಂಗಮ್ಮ, ಹಾವೇರಿಯ ಶಿಲ್ಪಾ ಬೆನ್ನೂರು, ರಟ್ಟಿಹಳ್ಳಿಯ ಸರೋಜಮ್ಮ ಸೇರಿದಂತೆ ಜಿಲ್ಲೆ ಮತ್ತು ತಾಲೂಕಿನ ನೂರಾರು ಮಹಿಳಾ ಯೋಗ ಸಾಧಕಿಯರು-ಸಾಧಕರು ಪಾಲ್ಗೊಂಡಿದ್ದರು.