ಲೋಕದರ್ಶನವರದಿ
ರಾಣೇಬೆನ್ನೂರು೧೬: ಯಾಂತ್ರಿಕ ಬದುಕಿನಲ್ಲಿ ತನ್ನ ಜೀವನವನ್ನು ಸಾಗಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಒಂದಿಲ್ಲ-ಒಂದು ಕಾಯಿಲೆಗಳಿಂದ ನಿತ್ಯವೂ ಬಳಲುವಂತಾಗಿದೆ. ಆರೋಗ್ಯವಂತ ಜೀವನ ಬದುಕಿಗೆ ಯೋಗ ಧ್ಯಾನ, ಪ್ರಾಣಾಯಾಮ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ಪತಂಜಲಿ ಮಂಡಲ ಪ್ರಭಾರಿ ಎಸ್.ಎಸ್.ಷಣ್ಮುಖಪ್ಪ ಹೇಳಿದರು.
ಅವರು ಸೋಮವಾರ ಮುಂಜಾನೆ ಮೆಡ್ಲೇರಿ ರಸ್ತೆಯ ಆದಿಶಕ್ತಿ ಧ್ಯಾನ ಮಂದಿರದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್ ಟ್ರಸ್ಟ್, ಮಹಿಳಾ ಪತಂಜಲಿ ಸಮಿತಿ, ಕಿಸಾನ್ ಸೇವಾ ಸಮಿತಿ, ಯುವ-ಭಾರತ್ ಸಂಯುಕ್ತವಾಗಿ ಆಯೋಜಿಸಿದ್ದ, ಸಹಯೋಗ ಶಿಕ್ಷಕರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಪತಂಜಲಿಯ ಪಿತಾಮಹಾ ಬಾಬಾ ರಾಮ್ದೇವಜೀ ಅವರು ತಮ್ಮ ಜೀವನದ ಬದುಕಿನುದ್ದಕ್ಕೂ ಇಂತಹ ಮಹತ್ವಪೂರ್ಣವಾದ ಮತ್ತು ಸಾರ್ವಜನಿಕರ ಆರೋಗ್ಯಯುತ ಬದುಕಿಗೆ ಬೇಕಾಗುವಂತಹ ಯೋಗವನ್ನು ಕಲಿತು ಸಾರ್ವಜನಿಕರಿಗೆ ಹಂಚುವುದರ ಮೂಲಕ ತಮ್ಮ ಸೇವಾ ಕಾರ್ಯವನ್ನು ಮೆರೆಯುತ್ತಿದ್ದಾರೆ.
ಇದನ್ನು ಪ್ರತಿಯೊಬ್ಬ ನಾಗರೀಕರು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಶಾಶ್ವತ ಆರೋಗ್ಯಯುತ ಜೀವನ ನಡೆಸಲು ಮುಂದಾಗಬೇಕು ಎಂದು ಕರೆನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಗಗುರು ಕೆ.ಸಿ.ಕೋಮಲಾಚಾರ್ ಅವರು ಈಗಾಗಲೇ ಕಳೆದ 10ವರ್ಷಗಳಿಂದ ನಗರ-ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ ಜಿಲ್ಲಾ ಪತಂಜಲಿ ಯೋಗಸಮಿತಿಯು ಯೋಗಕೇಂದ್ರಗಳನ್ನು ಆರಂಭಿಸಲಾಗಿದ್ದು.
ಅದರ ಮೂಲಕ ನಿತ್ಯವೂ ಹತ್ತಾರು ಸಾವಿರ ನಾಗರೀಕರು ಯೋಗ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಸಹ, 15 ದಿವಸಗಳ ಕಾಲದ ಸಹಯೋಗ ಶಿಕ್ಷಕರ ತರಬೇತಿ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆಯಲು ಮುಂದಾಗಬೇಕು ಎಂದರು.
ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರವೀಂದ್ರ ಬಿಜಾಪುರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಬಿಎಸ್ಟಿ ಅಧ್ಯಕ್ಷ ಆರ್.ಎನ್.ರಾಠೋಡ, ಮಹಿಳಾ ಅಧ್ಯಕ್ಷೆ ವಜ್ರೇಶ್ವರಿ ಲದ್ವಾ, ಯುವ ಭಾರತ ಪ್ರಭಾರಿ ಕೆ.ಜಿ.ದಿವಾಕರಮೂತರ್ಿ, ಕಿಸಾನ್ ಸೇವಾಸಮಿತಿಯ ಪ್ರಭಾರಿ ನಾಗಪ್ಪ ಲಮಾಣಿ, ಯೋಗಶಿಕ್ಷಕರಾದ ಪಾಂಡುರಂಗ ರಾಂಪೂರ, ಜಗದೀಶ ಜಂಬಗಿ, ಕೃಷ್ಣಾ ಐರಣಿ, ಡಾ|| ಕೃಷ್ಣಾ ಚವ್ಹಾಣ, ಸರೋಜ ಸುಣಗಾರ, ಕೃಷ್ಣಾ ರಾಂಪೂರ, ಜ್ಯೋತಿ ಜಂಬಗಿ, ಹೇಮಾ ತಾಳೂರ, ರೇಖಾ ಜಾಲಗಾರ, ಸುವರ್ಣಮ್ಮ ಬಾನುವಳ್ಳಿ, ಎಸ್.ಎಸ್.ಸಣ್ಣಗೌಡ್ರ, ನ್ಯಾಯವಾದಿ ವಿಜಯ್ ಕುಲಕಣರ್ಿ, ಡಾ|| ಕೆ.ಎಚ್.ಮುಕ್ಕಣ್ಣನವರ, ಮಹೇಶ್ವರಪ್ಪ ಜಾಡರ, ಕಮಲಾ ಬಣಗಾರ, ಡಿ.ಡಿ.ರೋಖಡೆ, ಲಲಿತಾ ಮೇಲಗಿರಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಶಶಿಕಲಾ ಬಡೆಂಕಲ್ ಪ್ರಾಥರ್ಿಸಿದರು, ಪಾಂಡುರಂಗ ಪೂಜಾರ ಸ್ವಾಗತಿಸಿದರು, ಎಂ.ಬಿ.ಮೊಟಳ್ಳಿ ಪರಿಚಯಿಸಿದರು, ಆರ್.ಬಿ.ಪಾಟೀಲ ನಿರೂಪಿಸಿ, ಶಿವಾನಂದ ಬಡೆಂಕಲ್ ವಂದಿಸಿದರು. ಸಹಯೋಗ ಶಿಕ್ಷಕರ ಕಾಯರ್ಾಗಾರದಲ್ಲಿ ಜಿಲ್ಲೆಯ ನೂರಾರು ಯೋಗಾಸಕ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಶಿಬಿರವು 15 ದಿವಸಗಳ ಕಾಲ ನಡೆಯಲಿದೆ.