ಆರೋಗ್ಯಯುತ ಜೀವನ ಸಾಗಿಸಲು ಯೋಗ ಅವಶ್ಯಕ'

ಲೋಕದರ್ಶನ ವರದಿ

ರಾಮದುರ್ಗ, 12: ಶಾರೀರಿಕ, ದೈಹಿಕ ಆರೋಗ್ಯಕ್ಕಾಗಿ ಯೋಗ ಬಹುಮುಖ್ಯ ಸಾಧನವಾಗಿದೆ. ಒತ್ತಡದ ಬದುಕಿನಲ್ಲಿ ಯೋಗದಿಂದ ರೋಗಮುಕ್ತ ಸಮಾಜ ನಿಮರ್ಾಣ ಸಾಧ್ಯವಿದೆ ಎಂದು ನಿವೃತ್ತ ಮುಖ್ಯಾಧ್ಯಾಪಕ ಶಿವಯೋಗಿ ಕುರುಬಗಟ್ಟಿಮಠ ತಿಳಿಸಿದರು.

ತಾಲೂಕಿನ ಬಟಕುಕರ್ಿಯ ಶ್ರೀ ವಿಜಯ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಮೌಲ್ಯಸಂಪದ ಸೇವಾ ಸಂಸ್ಥೆ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇತ್ತಿಚೆಗೆ ಸ್ವಾಮಿ ವಿವೇಕಾನಂದ 156 ನೇ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಸರಳ ಸ್ವಾಸ್ಥ್ಯ ಬದುಕಿಗಾಗಿ ಯೋಗ, ಆರೋಗ್ಯ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘರ್ಾಟಿಸಿ ಅವರು ಮಾತನಾಡಿದರು.

ಸಕಲರ ಅಂತರ್ಯದಲ್ಲಿಯೂ ಒಂದೊಂದು ವಿದ್ವತ್ತು ಅಡಗಿರುತ್ತದೆ. ಅದು ಹೊರಬರಬೇಕಾದರೆ ಆರೋಗ್ಯಯುತ ಜೀವನ ಶೈಲಿ ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಯೋಗದಿಂದ ಎಲ್ಲವೂ ಸಾಧ್ಯವಿದೆ ಎಂದರು.

ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಮುಳ್ಳೂರ ಅನ್ನದಾನೇಶ್ವರ ಮಠದ ಶ್ರೀ ಚಂದ್ರೇಶಖರ ಶಿವಾಚಾರ್ಯ ಸ್ವಾಮೀಜಿ, ಯೋಗ, ಜ್ಞಾನದಿಂದ ಸರ್ವ ರೋಗ ನಿವಾರಣೆ ಸಾಧ್ಯವಿದೆ. ಯುವ ಪೀಳಿಗೆ ದುಶ್ಟಟಗಳಿಂದ ದೂರವಿದ್ದು, ಯೋಗದತ್ತ ಗಮನ ಹರಿಸಬೇಕೆಂದರು.

ಸಮಾಜ ಸೇವಕ ಕೆ.ವ್ಹಿ. ಪಾಟೀಲ, ಹಿರಿಯ ನ್ಯಾಯವಾದಿ ಬಿ.ಎನ್. ದಳವಾಯಿ, ರಾಜೇಶ್ವರ ಯಾದವಾಡ ಹಾಗೂ ಇತರರು ಮಾತನಾಡಿದರು.  

ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎನ್.ವ್ಹಿ. ಬಾರಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ನಾರಾಯಣಗೌಡ ಡುಳ್ಳೋಳ್ಳಿ, ಬಟಕುಕರ್ಿ ಸರಕಾರಿ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್ ಹಿತ್ತಲಮನಿ, ರವಿ ಗಿರಿಯನ್ನವರ, ಶ್ರೀಶೈಲ ತುಳಸಿಗೇರಿ, ಶಿವಕುಮಾರ ಕಡೋಲಿ ಹಾಗೂ ಇತರರಿದ್ದರು.

ಶಿಕ್ಷಕ ಡಿ. ಎಂ. ಪತ್ತಾರ ಸ್ವಾಗತಿಸಿದರು. ಮೌಲ್ಯ ಸಂಪದ ಸಂಸ್ಥೆಯ ಕಾರ್ಯದಶರ್ಿ ಸೋಮಶೇಖರ ಸೊಗಲದ ನಿರೂಪಿಸಿದರು. ಬಿ.ಟಿ. ಕಲಹಾಳ ವಂದಿಸಿದರು.