ವ್ಯಸನ ಮುಕ್ತ ಸಮಾಜಕ್ಕೆ ಯೋಗ ಸಂಜೀವಿನಿ: ಶ್ರಾವಗೆ

ಡಾ.ಶ್ರಾವಗೆ ಝೆಂಕಾರ ಭಿತ್ತಿ ಪತ್ರ ಉದ್ಘಾಟಿಸುವಾಗ ಡಾ.ಡಿ.ಟಿ.ಪಾಟೀಲ, ಡಾ.ಮೀನಾ ಮೋಹಿತೆ, ಎನ್.ಬಿ.ಖಾಂಡೇಕರ್,ಪ್ರೊ. ವಿಕ

    ಬೆಳಗಾವಿ 10: ವ್ಯಸನ ಮುಕ್ತ ಸಮಾಜಕ್ಕಾಗಿ ಯೋಗಕ್ಕಿಂತ ಇನ್ನೊಂದು ಸಂಜೀವಿನಿ ಇಲ್ಲ.  ಮಾನಸಿಕ, ಶಾರೀರಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕಾಗಿ ನಿತ್ಯ ವ್ಯಾಯಮ ಮತ್ತು ಯೋಗ ಅಭ್ಯಾಸದ ಅಗತ್ಯವಿದೆ. ಅದರ ಜೊತೆಗೆ ಸಾಹಿತ,್ಯ ಚಿತ್ರಕಲ,ೆ ಸಂಗೀತಗಳ ಮೂಲಕ ಅಭಿವ್ಯಕ್ತಿ ಹೊಂದುವುದರ ಅಗತ್ಯವಿದೆ.  ಮನದೊಳಗೆ ಸೂಕ್ತವಾಗಿ ಹುದುಗಿದ್ದ ಕಲೆಯನ್ನು ಹೊರ ಜಗತ್ತಿಗೆ ಪರಿಚಯಿಸಬೇಕು. ಇದು ಇಂದಿನ ಅತ್ಯವಶ್ಯಕತೆಯಾಗಿದೆಯೆಂದು ಬೆಳಗಾವಿಯ ಹಿರಿಯ ವೈದ್ಯ ಡಾ. ಸಿ.ಟಿ .ಶ್ರಾವಗೆ ಅವರು ಹೇಳಿದರು.  

ಅವರು ಇಲ್ಲಿಯ ಭಾವುರಾವ ಕಾಕತಕರ ಮಹಾವಿದ್ಯಾಲಯ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಝೆಂಕಾರ ಭಿತ್ತಿ ಪತ್ರ ಉದ್ಘಾಟಿಸಿ ಮಾತನಾಡುತ್ತಿದ್ದರು.  ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎನ್.ಪಾಟೀಲ ಇವರು ಅಧ್ಯಕ್ಷತೆ ವಹಿಸಿದ್ದರು.  

ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಖಜಾಂಚಿ ಎನ್.ಬಿ.ಖಾಂಡೇಕರ ಅವರು ಮಾತನಾಡಿ, ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರರು ಸಿದ್ಧ್ದಗೊಳ್ಳಬೇಕಿದೆ ಎಂದರು.  ಸಂಸ್ಥೆಯ ಸಹ ಕಾರ್ಯದಶರ್ಿ ಪ್ರೊ. ವಿಕ್ರಮ ಪಾಟೀಲ ಅವರು ಮಾತನಾಡುತ್ತ ಅಂಗಸೌಷ್ಟವದೊಂದಿಗೆ ಮೌಲ್ಯವರ್ಧನೆ ಮತ್ತು ಚರಿತ್ರೆ ನಿಮರ್ಿತಿಗಳಿಗಾಗಿ ವಿದ್ಯಾಥರ್ಿಗಳು ಸಂಘರ್ಷ ಮಾಡಬೇಕೆಂದು ಕರೆ ನೀಡಿದರು.  

ವಿದ್ಯಾಥರ್ಿನಿ ಸುಮನ ಗೋಡಬೊಲೆ ಸ್ವಾಗತಗೀತೆ ಹಾಡಿದರು. ಡಾ. ಡಿ.ಟಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಡಾ.ಮೀನಾ ಮೋಹಿತೆ ಪರಿಚಯಿಸಿದರು. ವಿದ್ಯಾಥರ್ಿಗಳ ಸೃಜನಶೀಲ ರಚನೆಗಳ ಭಿತ್ತಿಪತ್ರ 'ಝೇಂಕಾರ'ದ ಸಂಪಾದಕ ಪ್ರೊ. ಅನಿತಾ ಪಾಟೀಲ (ಇಂಗ್ಲಿಷ್), ಡಾ.ಡಿ.ಟಿ.ಪಾಟೀಲ (ಮರಾಠಿ), ಪ್ರೊ.ನೀತಾ ಪಾಟೀಲ (ಹಿಂದಿ), ಡಾ.ಡಿ.ಎಸ್.ಚೌಗಲೆ (ಕನ್ನಡ) ಅವರುಗಳು ಉಪಸ್ಥಿತರಿದ್ದರು. ವಿದ್ಯಾಥರ್ಿ ಪ್ರತಿನಿಧಿ ಸೂರಜ ಹತ್ತಲಗೆ ವಂದಿಸಿದರು.