ಕೆಲಸದ ಒತ್ತಡ ನೀಗಿಸಲು ಯೋಗ ಸಹಕಾರಿ: ಯೋಗಿಶ್ರೀ

ಲೋಕದರ್ಶನವರದಿ

ಮುಧೋಳ:  ಇಂದಿನ ಅವಸರದ ಜಗತ್ತಿನಲ್ಲಿ ಎಲ್ಲ ಕೆಲಸಗಳನ್ನು ನಿಭಾಯಿಸಲು, ಉದ್ಯೋಗದಲ್ಲಿ ಯಶಸ್ಸು ಕಾಣಲು ಯೋಗ,ಧ್ಯಾನಗಳನ್ನು ರೂಢಿಸಿಕೊಳ್ಳುವದು ಅಗತ್ಯ ಎಂದು ಯೋಗ ಗುರು ಸದಾಶಿವ ಗುರೂಜಿ ತಿಳಿಸಿದರು.

ಕಳೆದ ಒಂದು ತಿಂಗಳಿನಿಂದ ಯಾದವಾಡದ ರತ್ನಾ ಸಿಮೆಂಟ್ಸ್ನಲ್ಲಿ ನಿರಾಣಿ ಫೌಂಡೇಷನ್ ವತಿಯಿಂದ ನಡೆದ ಯೋಗಾಸನ ಶಿಬಿರದ ಸಮಾರೋಪ ಸಮಾರಂಭ ಹಾಗೂ ಅಲ್ಲಮಪ್ರಭು ಕುಂಬಾರವರ "ಅದ್ಭುತ ರಾಷ್ಟ್ರ ಪರಮಾದ್ಭುತ ನಾಯಕ" ಎಂಬ ಪುಸ್ತಕ ಬಿಡುಗಡೆ ನಂತರ ಮಾತನಾಡಿದರು. 

  ಕೆಲಸದ ಒತ್ತಡಗಳಿಂದ ಆರೋಗ್ಯ ಕೆಡುತ್ತದೆ. ಬಿಪಿ, ಶುಗರ್ನಂಥ ಮಾರಕ ರೋಗಗಳು ಆವರಿಸಿ ಇಡೀ ಜೀವನ ನರಕವಾಗುತ್ತದೆ. ಮಾಡುವ ಕಲಸದ ಮೇಲೆ ನಿಯಂತ್ರಣ ತಪ್ಪುತ್ತದೆ. ಆದ್ದರಿಂದ ನಿತ್ಯ ಜೀವನದಲ್ಲಿ ಬೆಳಿಗ್ಗೆ ಬೇಗ ಏಳುವದನ್ನು ರೂಢಿಸಿಕೊಂಡು ಯೋಗ, ಧ್ಯಾನ, ಪ್ರಾಣಾಯಾಮ ಮಾಡುವದನ್ನು ರೂಢಿಸಿಕೊಳ್ಳಿ ಅದರಿಂದ ಯಶಸ್ವಿಜೀವನ ನಡೆಸಲು ಸಾಧ್ಯವಾಗುತ್ತದೆ. ಆಸ್ಪತ್ರೆಗಳಿಂದ ದೂರ ಇರಬಹುದು. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿಯಾಗುತ್ತದೆ. ಜೊತೆಗೆ ಖಚರ್ು ವೆಚ್ಚಗಳು ಕಡಿಮೆಯಾಗುತ್ತವೆ. ಒಂದು ಯೋಗದಿಂದನೂರೆಂಟಯ ಪ್ರಯೋಜನಗಳಾಗುತ್ತವೆ ಎಂದರು. 

     ಅತಿಥಿಗಳಾಗಿ ಭಾಗವಹಿಸಿದ ಜೇಸೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶ್ವರ ಕತ್ತಿ ಮಾತನಾಡಿ "ಅದ್ಭುತ ದೇಶ ಅತ್ಯಾದ್ಭುತ ನಾಯಕ" ಪುಸ್ತಕ ಬಿಡುಗಡೆ ಈ ಕಾರ್ಯಕ್ರಮದಲ್ಲಿ ಆದದ್ದು  ಒಂದು ವಿಶೇಷವಾಗಿದ್ದು, ಜಗತ್ತಿಗೆ ಯೋಗದ ಮಹತ್ವ ತಿಳಿಸಿಕೊಟ್ಟ ಮೋದಿಯವರ ಕುರಿತಾದ ಈ ಪುಸ್ತಕ ಯೋಗಾಸನ ಶಿಬಿರದ ಸಮಾರೋಪದಲ್ಲಿ ಬಿಡುಗಡೆಯಾಗಿದ್ದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.

 ಪುಸ್ತಕ ಬಿಡುಗಡೆಗೊಳಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಜ್ವಲ್ ಸೊಸೈಯಿಟಿಯ ಅಧ್ಯಕ್ಷ ಮಲ್ಲಪ್ಪ ಪೂಜಾರಿ ಮಾತನಾಡಿ ಭಾರತದಂಥ ಅದ್ಭುತ ದೇಶದಲ್ಲಿ ಹುಟ್ಟಿ ಆಧ್ಯಾತ್ಮ, ಯೋಗದಂಥ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳದಿದ್ದರೆ ಜೀವನ ವ್ಯರ್ಥವಾಗುತ್ತದೆ. ನಿರಾಣಿ ಕುಟುಂಬದವರ ಇಂಥ ಹಲವಾರು ಜನಪರ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಗಳು  ಇವೆ ಎಂದರು. 

   ಸಾಹಿತಿ ಹಾಗೂ ಪತ್ರಕರ್ತ ಅಲ್ಲಮಪ್ರಭು ಕುಂಬಾರ ತಮ್ಮ ಪುಸ್ತಕ ಕೇವಲ ಒಬ್ಬ ವ್ಯಕ್ತಿಯನ್ನು ವೈಭವೀಕರಿಸುವ ಉದ್ದೇಶವಲ್ಲ. ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಾಡಿದವರ ಪ್ರಯತ್ನವನ್ನು ಬಿಂಬಿಸಲಾಗಿದೆ. 

 ಈಜಿಪ್ಟ್ ಸೇರಿದಂತೆ ಹಲವಾರು ದೇಶಗಳ ಮೂಲ ಸಂಸ್ಕೃತಿಗಳು ಸಾವಿರಾರು ವರ್ಷಗಳ ಹಿಂದೆಯೇ ನಾಶವಾಗಿವೆ. ಆದರೆ ಭಾರತ ಅಂದೂ ಇತ್ತು, ಇಂದೂ ಇದೆ ಮುಂದೆಯೂ ಇರುತ್ತದೆ, ಮೂಲ ಸಂಸ್ಕೃತಿಯನ್ನು ಹಾಳು ಮಾಡಿಕೊಂಡಿಲ್ಲ. ಅದಕ್ಕೆ ಮೋದಿಯಂಥವರ ಜನನವಾಗಿ ಸಂಸ್ಕೃತಿ ಉಳಿವಿಗೆ ಕಾರಣವಾಗುತ್ತಾರೆ ಎಂದರು. 

  ಪ್ರಗತಿಪರ ರೈತ ಸೋಮಶೇಖರ ಗುಡಿ ಮಾತನಾಡಿ ಪ್ರತಿವರ್ಷ ನಿರಾಣಿ ಫೌಂಡೇಷನ್ ವತಿಯಿಂದ ಯೋಗಾಸನ ಶಿಬಿರವನ್ನು  ಆಯೋಜಿಸಲು ಮನವಿ ಮಾಡಿಕೊಂಡರು.

 ಕಾಖರ್ಾನೆ ಜಿಎಂ ಸುಜಯ ಹೆಬಸೂರ ಮಾತನಾಡಿ    ನಿರಾಣಿ ಸಮೂಹ ಉದ್ಯೋಗ ಸಂಸ್ಥೆಗಳಲ್ಲಿ, ಅವರ ಕಾಖರ್ಾನೆಗಳೊಂದಿಗೆ ಸಂಪರ್ಕವಿದ್ದ ಲಕ್ಷಾಂತರ ರೈತರು ಹಾಗೂ ಕಾಮರ್ಿಕರ ಕುಟುಂಬದವರಿಗೆ ಮಾತ್ರವಲ್ಲದೆ ಸಮಾಜದ   ಎಲ್ಲರಿಗಾಗಿ ಆರೋಗ್ಯ ಶಿಬಿರಗಳನ್ನು, ಯೋಗಾಸನ ಶಿಬಿರಗಳನ್ನು ಹಮ್ಮಿಕೊಂಡು ಜನಪರಕಾರ್ಯಗಳನ್ನು ಮಾಡುತ್ತಿದ್ದು, ಸರಕಾರ ಮಾಡುವ ಕಲೆಸವನ್ನು ಒಂದು ಸಂಸ್ಥೆಯವರು ಮಾಡುತ್ತಿರುವದು ಶ್ಲಾಘನೀಯವೆಂದರು. ರಾಜು ಜೋಶಿ ಮಾತನಾಡಿದರು.ಶಿಕ್ಷಕ ಎಂ.ಜಿ.ಕರೆಣ್ಣವರ ಬಿಡುಗಡೆಗೊಂಡ ಪುಸ್ತಕದ ಕುರಿತು ಮಾತನಾಡಿದರು. ಯೋಗಿಶ್ರೀ ಸದಾಶಿವ ಗುರುಗಳಿಗೆ ಹಾಗೂ ಸಾಹಿತಿ ಅಲ್ಲಮಪ್ರಭು ಸಿ.ಕೆ ಅವರಿಗೆ, ಮಲ್ಲಪ್ಪಾ ಪೂಜಾರಿಯವರಿಗೆ ಯಾದವಾಡ ಗ್ರಾಮಸ್ಥರು, ಶಿಕ್ಷಕ ವೃಂದದವರು ಹಾಗೂ ರತ್ನಾಸಿಮೆಂಟ್ಸನ ಕಾಮರ್ಿಕರು ಸನ್ಮಾನಿಸಿ ಗೌರವಿಸಿದರು. ಶಿಬಿರದ ಕುರಿತು ಶಿಬಿರಾಥರ್ಿಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿದರು.ಶಿಕ್ಷಕ ಆರ್.ಎಚ್.ಮಾಯಪ್ಪಗೋಳ ಸ್ವಾಗತಿಸಿದರು. ಶಿಕ್ಷಕ ಎಂ.ಆಯ್.ಛಾಯಪ್ಪಗೋಳ ನಿರೂಪಿಸಿದರು. ಎಸ್.ಬಿ.ಗೋಡಿ ವಂದಿಸಿದರು