22ರಂದು ಸೂರ್ಯ ನಮಸ್ಕಾರ, ಮ್ಯಾರಾಥಾನ್‌ದೊಂದಿಗೆ ಯೋಗ ದಿನ: ಕಟಕೋಳ

22ರಂದು ಸೂರ್ಯ ನಮಸ್ಕಾರ, ಮ್ಯಾರಾಥಾನ್‌ದೊಂದಿಗೆ ಯೋಗ ದಿನ: ಕಟಕೋಳ Yoga Day with Surya Namaskar, Marathon on 22nd: Katakola

ಬೆಳಗಾವಿ 18: ಸನಾತನ ಸಂಸ್ಕೃತಿ ಏವಂ ಯೋಗ ಸೇವಾ ಸಂಘವು ಭಾರತೀಯ ಸಂಸ್ಕೃತಿ ಜ್ಞಾನ ಆಚಾರ ವಿಚಾರ ಹಾಗೂ ಪರಂಪರೆಯನ್ನು ರಕ್ಷಿಸುವ, ಮುಂದುವರೆಸುವ ಹಾಗೂ ಬೆಳೆಸುವ ನಿಟ್ಟನಲ್ಲಿ ಕಾರ್ಯಪ್ರವೃತ್ತವಾಗಿದೆ. ಮನುಕುಲದ ಏಳಿಗೆಯೇ ಸಂಘದ ಮೂಲ ಧ್ಯೇಯ ಎಂದು ಸಂಘದ ಅಧ್ಯಕ್ಷ ಡಾ. ಪ್ರಶಾಂತ ಕಟಕೋಳ ಹೇಳಿದರು. 

ನಗರದ ಆದರ್ಶ ಪ್ಯಾಲೇಸ್‌ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 2025 ನೇ ಇಸವಿಯ ಅಂತರಾಷ್ಟ್ರೀಯ ಯೋಗ ದಿವಸವನ್ನು ಈ ವರ್ಷ ಜೂನ್ 22 ರವಿವಾರದಂದು ಸೂರ್ಯ ನಮಸ್ಕಾರ ಮ್ಯಾರಾಥಾನ್‌ದೊಂದಿಗೆ ಆಚರಿಸುತ್ತಿದ್ದೇವೆ. ಬೆಳಗಾವಿಯ ಮರಾಠಾ ಮಂದಿರ ಮಂಟಪದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಗಿದೆ.  

ಸುಮಾರು 500 ಜನರು ಈ ಆಚರಣೆಯಲ್ಲಿ ಪಾಲ್ಗೊಳ್ಳುವರು ಆರು ವಯೋಮಿತಿಗಳಲ್ಲಿ ಈ ಮ್ಯಾರಾಥಾನ್ ನಡೆಯುವುದು  

 8 ರಿಂದ 15ವರ್ಷ, 16 ರಿಂದ 25 ವರ್ಷ, 26 ರಿಂದ 35 ವರ್ಷ, 36 ರಿಂದ 45 ವರ್ಷ, 46 ರಿಂದ 60 ವರ್ಷ ಮತ್ತು 61 ವರ್ಷ ಮೇಲ್ಪಟ್ಟು ಇದರಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ಹಾಗೂ ಟಿ-ಶರ್ಟ ಕೊಡಲಾಗುವುದು ಎಂದು ಕಟಕೋಳ ಅವರು ಹೇಳಿದರು. 

108 ಸೂರ್ಯ ನಮಸ್ಕಾರಗಳುನ್ನು ಪೂರ್ಣಗೊಳಿಸಿದವರಿಗೆ ಪದಕ ಕೊಡಲಾಗುವುದು. ಪ್ರತೀ ವಯೋ ವರ್ಗದಲ್ಲಿಯೂ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಮೊದಲ ಹಾಗೂ ಎರಡನೆಯ ಸ್ಥಾನಗಳಿಸಿದವರಿಗೆ ನಗದು ಬಹುಮಾನ ಕೊಟ್ಟು ಗೌರವಿಸಲಾಗುವುದು (24 ಬಹುಮಾನಗಳು) ಎಲ್ಲರಿಗಿಂತ ಹೆಚ್ಚು ಸೂರ್ಯ ನಮಸ್ಕಾರಗಳನ್ನು ಪೂರ್ಣಗೊಳಿಸಿದವರಿಗೆ ಈ ವರ್ಷದ ಚಾಂಪಿಯನ್ ಆಪ್ ಚಾಂಪಿಯನ್ಸ್‌ ಪದವಿ ಕೊಟ್ಟು ಗೌರವಿಸಲಾಗುವುದು. 40,000ರೂ ಮೌಲ್ಯಕ್ಕೂ ಹೆಚ್ಚಿನ ನಗದು ಹಾಗು ಉಡುಗೊರೆಗಳನ್ನು ಪಡೆಯುವ ಅವಕಾಶ ಇರುತ್ತದೆ, 1.50.000 ರೂ ಹೆಚ್ಚಿನ ಮೌಲ್ಯದ ಬಹುಮಾನಗಳನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ ಎಂದು ಕಟಕೋಳ ಅವರು ಹೇಳಿದರು. 

ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟು ವೈಭವಯುತವಾಗಿ ಸೂರ್ಯನಮಸ್ಕಾರದ ಸಾಮೂಹಿಕ ಸಾಧನೆ ಕೈಗೊಳ್ಳುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಯೋಗ ಶಿಕ್ಷಣ ಸಂಸ್ಥೆಗಳು ಶಿಕ್ಷಕರು ಹಾಗೂ ಸಮಾಜವನ್ನು ಒಗ್ಗೂಡಿಸಿ ಈ ವರ್ಷದ ಯೋಗ ದಿವಸದ ಧ್ಯೇಯ ಘೋಷಣೆ ಒಂದು ಭುವಿ ಒಂದು ಆರೋಗ್ಯಕ್ಕಾಗಿ ಯೋಗ ಇದರ ಸಾಕಾರ ಮಂತ್ರವನ್ನು ಹಾಡುತ್ತಿದ್ದೇವೆ ಎಂದು ಪ್ರಶಾಂತ ಕಟಕೋಳ ಅವರು ಹೇಳಿದರು.  

ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ ಕಟಕೋಳ ಅವರೊಂದಿಗೆ ಸಂಘದ ಸೆಕ್ರೆಟರಿ ವೈಭವ ವೇರ್ಣೆಕರ, ವ್ಹಾ. ಸೆಕ್ರೆಟರಿ ವಿಶ್ವನಾಥ ಮಾಂಗುಟಕರ, ನಿಮಯ ಪಾಟೀಲ ಉಪಸ್ಥಿತರಿದ್ದರು.