ಸಿದ್ಧ ಸಮಾಧಿಯೋಗ, ವಿವಿಧ ಸಂಘ ಸಂಸ್ಥೆಗಳು,ಹಿಂದೂ ಸಂಘಟನೆಗಳ ವತಿಯಿಂದ ಯೋಗ ದಿನಾಚರಣೆ
Yoga Day celebrated by Siddha Samadhi Yoga, various organizations, and Hindu organizations
ಮಹಾಲಿಂಗಪುರ 21: 2014 ರಲ್ಲಿ ಮೋದೀಜಿ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರ ನೇತೃತ್ವದಲ್ಲಿ ಆರಂಭವಾದ ವಿಶ್ವ ಯೋಗ ದಿನಾಚರಣೆ ಕೇವಲ 11 ವರ್ಷಗಳಲ್ಲಿ ವಿಶ್ವವ್ಯಾಪಿಯಾಗಿದೆ ಎಂದು ಯೋಗ ಗುರು ಎಫ್ ಏಚ್ ಕುಂಟೋಜಿ ಹೇಳಿದರು.ಸ್ಥಳೀಯ ಎಪಿಎಂಸಿಯ ಗಣೇಶ ದೇವಸ್ಥಾನದ ಆವರಣದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ,ದುಡ್ಡಿನ ಕಡೆ ಗಮನ ಕೊಡದೆ ರೋಗಿಗಳ ಕಡೆ ಗಮನ ಕೊಡಿ ಎಂದರು.ಎಲ್ಲಾ ಜನರಿಗೆ ಯೋಗದ ಬಗ್ಗೆ ಜಾಗೃತ ಮೂಡಿಸಿ ಯಾವ ರೋಗಕ್ಕೆ ಯಾವ ಯೋಗವನ್ನು ಮಾಡಬೇಕು ಎಂದು ಹೇಳಿದರು.ದಿನನಿತ್ಯ ಬೆಳಿಗ್ಗೆ 3 ರಿಂದ 6ರ ವೇಳೆ ಯೋಗಮಂತ್ರ,ಜಪ, ಧ್ಯಾನ ಹಾಗೂ ಒಂದು ಗ್ಲಾಸ್ ಬಿಸೀನೀರು ನಿಮ್ಮನ್ನು ಯೋಗಿ ಮತ್ತು ನಿರೋಗಿಯಾಗಿ ಮಾಡುತ್ತದೆ.ಶಾರೀರಿಕ ಮತ್ತು ಮಾನಸಿಕ ಪರಿಪೂರ್ಣತೆಗೆ ಯೋಗ ಆಗತ್ಯ.ದೇಹ ಮತ್ತು ಬದುಕಿನ ಬಗ್ಗೆ ಪ್ರೀತಿ ಹೊಂದಲು ಯೋಗ ಅತ್ಯಾವಶ್ಯಕ ಪ್ರಸ್ತುತ ಕಲುಷಿತ ವಾತಾವರಣದಲ್ಲಿ ಪ್ರತಿಯೊಬ್ಬರಿಗೂ ಯೋಗ ಮತ್ತು ಉತ್ತಮ ಆಹಾರ ಪದ್ಧತಿ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ವೆಂಕಣ್ಣ ಬಿರಾದಾರ, ಶಿವಲಿಂಗ ಟಿರ್ಕಿ,ಪುರಸಭೆ ಸದಸ್ಯ ರವಿ ಜವಳಗಿ,ಶಿನವಗೌಡ ಪಾಟೀಲ,ಹಣಮಂತ ಕೊಣ್ಣೂರ,ಬಸವರಾಜ ಬಟಕುರ್ಕಿ,ಗೋವಿಂದಗೌಡ ಪಾಟೀಲ, ನಾಗಪ್ಪ ಮುದಕವಿ, ಶಿವಾನಂದ ನೇಸೂರು,ಮಹೇಶ ಅಂಬಿ,ಆನಂದ ಪಾಟೀಲ,ಮಹೇಶ ತೇಲಿ ,ಶಿವಲಿಂಗ ಗುಣದಾಳ, ಶ್ರೀನಿವಾಸ ಗುಂಡಾ,ಡಾ. ಹಿಡಕಲ, ಭಾಗೋಜಿ,ಸಂಜು ಬಡಿಗೇರ,ಶಿಕ್ಷಕ ಎಸ್ ಜಿ ಜುಜನಟ್ಟಿ, ಮಹಾಲಿಂಗ ಶಿವಣಗಿ,ವಿನಯ ಚಮಕೆರಿ,ಹನಮಂತ ನಾವಿ,ಅರ್ಜುನ ಪವಾರ,ಅಭಿಷೇಕ ಲಮಾಣಿ, ರಾಘವೇಂದ್ರ ಶಿರೋಳ,ಆನಂದ ಮಡ್ದೇನ್ನವರ,ಬಸು ಮುರಾರಿ, ರಾಘು ಗರಗಟಗಿ,ಬಸು ಹುರಕಡ್ಲಿ, ನಾರಾಯಣ ಡೊಂಬರ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಶಿಕ್ಷಕ ಮಹಾಂತೇಶ ಬೆಟಗೇರಿ ನಿರೂಪಿಸಿ,ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 