ಯೋಗದಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ: ಬೋಗರಾಜ್

ಬಳ್ಳಾರಿ15: ಪ್ರತಿ ದಿನ ಯೋಗ ಮಾಡುವುದರಿಂದ ದೈಹಿಕವಾಗಿ ಹಾಗು ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ತಾಲೂಕ ಪಂಚಾಯತ ಸದಸ್ಯ ಯು. ಬೋಗರಾಜ್ ಹೇಳಿದರು.

ಬಳ್ಳಾರಿ ತಾಲೂಕಿನ ಕೋಳಗಲ್ಲು ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಭಾರತ ಸಕರ್ಾರದ  ವಾತರ್ಾ ಮತ್ತು ಪ್ರಸಾರ ಸಚಿವಾಲಯದ, ಕ್ಷೇತ್ರ ಜನ ಸಂಪರ್ಕ ಕಾಯರ್ಾಲಯ ಬಳ್ಳಾರಿ ಹಾಗೂ ಜಿಲ್ಲಾ ವಾತರ್ಾ ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆ,  ಗ್ರಾಮ ಪಂಚಾಯತಿ ಕೋಳಗಲ್ಲು ಇವರುಗಳ ಸಂಯುಕ್ತ ಅಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ "ಯೋಗದ ಮಹತ್ವ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

       ಯೋಗವು ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಕೊಡುಗೆಯಾಗಿದ್ದು, ಭಾರತೀಯರಾದ ನಾವು ಪ್ರತಿ ದಿನ  ಯೋಗವನ್ನು ಮಾಡುವುದರಿಂದ  ಮಾನಸಿಕ ಒತ್ತಡದಿಂದ ಬರುವ ಅನೇಕ ರೋಗಗಳನ್ನು ನಿಗ್ರಹಿಸಬಹುದು ಎಂದು ಹೇಳಿದರು.

ಕ್ಷೇತ್ರ ಜನ ಸಂಪರ್ಕ ಕಾಯರ್ಾಲಯ ಉಪನಿದರ್ೇಶಕ  ಡಾ. ಜಿ.ಡಿ.ಹಳ್ಳಿಕೇರಿ ಪ್ರಾಸಚಿ್ತಾವಿಕವಾಗಿ ಮಾತನಾಡಿ, ಜೀವನದಲ್ಲಿ ಯೋಗ ಮತ್ತು ಧ್ಯಾನ ಅಳವಡಿಸಿಕೊಂಡರೆ ಮನಸ್ಸಿನ ಮೇಲೆ ಹಿಡಿತ ಸಾಧಿಸಬಹುದು ಎಂದರು.  

       ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದಮನಹಳ್ಳಿ ಹುಲಗೆಪ್ಪ  ಚಾಲನೆ ನೀಡಿದರು.  ಶಾಲಾ ಮಕ್ಕಳಿಗಾಗಿ ಚಿತ್ರ ಕಲಾ ಸ್ಪಧರ್ೆ, ಭಾಷಣ ಸ್ಪಧರ್ೆ ಹಾಗೂ ಯೋಗದ ಅಭ್ಯಾಸ ಆಯೋಜಿಸಿ ವಿಜೇತರಿಗೆ ಬಹಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಕೆ. ಗಾದಿಲಿಂಗಪ್ಪ, ದೈಹಿಕ ಶಿಕ್ಷಕರಾದ ವರದೆಂದ್ರ,  ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಶೇಶಾವಲಿ, ಸದಸ್ಯ ಈರಣ್ಣ  ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

ಕ್ಷೇತ್ರ ಜನ ಸಂಪರ್ಕ ಕಾಯರ್ಾಲಯದ ಕ್ಷೇತ್ರ ಪ್ರಚಾರ ಸಹಾಯಕ ಎನ್. ರಾಮಕೃಷ್ಣ ಸ್ವಾಗತಿಸಿ ವಂದಿಸಿದರು.