ಯಲಬುರ್ಗಾ: ಚಿಕ್ಕವಂಕಲಕುಂಟಾ ಆಂಜನೇಯ ದೇವಸ್ಥಾನಕ್ಕೆ ಯಡಿಯೂರಪ್ಪ ಭೇಟಿ

ಲೋಕದರ್ಶನ ವರದಿ 

ಯಲಬುರ್ಗಾ  09: ರಾಜ್ಯದಲ್ಲಿ ಭೀಕರ ಬರಗಾಲಬಿದ್ದರೂ ಮುಖ್ಯಮಂತ್ರಿ ಪ್ರವಾಸ ಮಾಡದೇ ಹೊಟೇಲಿನಲ್ಲಿ ಗುತ್ತಿಗೆದಾರರ ಜೊತೆ ಮಜಾ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ತಾಲೂಕಿನ ಹಿರೇವಂಕಲಕುಂಟಾ ಗ್ರಾಮಕ್ಕೆ  ಚಿಕ್ಕವಂಕಲಕುಂಟಾ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಷಶೇ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆದ ಕಲಭಾವಿ ಕೆರೆ ವೀಕ್ಷಣೆ ಮಾಡಿ ಹಾಗೂ  ಬಿಜೆಪಿ ಬರ ಅಧ್ಯಯನ ತಂಡ ಗೋಡೆ ಕುಸಿದು ಮೃತಪಟ್ಟ ವ್ಯಕ್ತಿ ಮನೆಗೆ ಭೇಟಿ ನೀಡಿ  ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿ  ವೈಯಕ್ತಿಕ 50 ಸಾವಿರ ಪರಿಹಾರ ನೀಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಾಲಮನ್ನಾ ಮತ್ತು ಜಿಂದಾಲ್ಗೆ ಭೂಮಿ ನೀಡಿದ ವಿರುದ್ಧ ಬಿಜೆಪಿ 13 ಮತ್ತು 14ರಂದು ಉಗ್ರ ಪ್ರತಿಭಟನೆ ಹಮ್ಮಿಕೊಂಡಿದೆ. ಮೊನ್ನೆ ಕ್ಯಾಬಿನೆಟ್ ಮೀಟಿಂಗ್ ಮಾಡಿ ಜಮೀನು ನೀಡಿದರೂ ಆ ಜಾಗದಲ್ಲಿ ಒಂದೇ ಒಂದು ಇಂಚು ಅದಿರು ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ನಿರ್ಣಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳುದ್ದಾರೆ ಖರೀದಿಸಿದವರು ಸುಮ್ಮನೆ ಇರುತ್ತಾರೆಯೇ? ಇದು ಮುಖ್ಯಮಂತ್ರಿ ಜನರೇನು ಮೂರ್ಖರೇ, ನಾಚಿಕೆಯಾಗಬೇಕು' ಎಂದು ಗುಡುಗಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಸರಿಯಲ್ಲ ಜಾನುವಾರುಗಳಿಗೆ ಗುಣಮಟ್ಟದ ಮೇವು ಖರೀಸುತ್ತಿಲ್ಲ ರೈತರ ಸಾಲಮನ್ನಾ ದೊಡ್ಡ ನಾಟಕವಾಗಿ ಮಾಡಿದ್ದಾರೆ.ಕೊಪ್ಪಳ  ಸಚಿವರು ಕೆಲಸ ಮಾಡುವುದನ್ನೇ ಮರೆತಿದ್ದಾರೆ ಬರಗಾಲ ನಿರ್ವಹಣೆ ತೃಪ್ತಿ ತಂದಿಲ್ಲ ಎಂದು ಟೀಕಿಸಿದರು.

ಯಾವುದೇ ಒಬ್ಬ ಅಧಿಕಾರಿ, ಸಚಿವ ಜನರ ಸಮಸ್ಯೆ ಕೇಳುವುದಾಗಲಿ, ಗ್ರಾಮಕ್ಕೆ ಭೇಟಿ ನೀಡುವುದಾಗಲಿ ನಡೆಯುತ್ತಿಲ್ಲ. ಸಿಎಂ ಗ್ರಾಮ ವಾಸ್ತವ್ಯಕ್ಕೆ ನಾವು ಸ್ವಾಗತ ಮಾಡುತ್ತೇವೆ. ಈ ಹಿಂದೆ 40 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಯಾವ ಬದಲಾವಣೆ ತಂದಿದ್ದಾರೆ. ಗ್ರಾಮೀಣ ಅಭಿವೃದ್ಧಿಗೆ 1 ಲಕ್ಷ ಕೋಟಿ ಹಣ ನೀಡಿದ್ದೇನೆ ಎಂದು ಹೇಳುತ್ತಾರೆ. ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, ಜನರ ತೆರಿಗೆ ಹಣ ಎಲ್ಲಿ ಹೋಗುತ್ತಿದೆ. ವಗರ್ಾವಣೆ ದಂಧೆ, ಖಜಾನೆ ಲೂಟಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ನ 13 ಅತೃಪ್ತ ಶಾಸಕರು ಪಕ್ಷ ಬಿಡುವ ಚಿಂತನೆ ನಡೆಸಿದ್ದಾರೆ. ಕೆಲವರು ಗೊಂದಲದಲ್ಲಿ ಇದ್ದಾರೆ. ಕಾಯ್ದು ನೋಡಿ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಬಿಜೆಪಿ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದು ಹೇಳಿದರು. ಜಿಂದಾಲ್ಗೆ 3.660 ಎಕರೆ ಜಮೀನನ್ನು ಕಡಿಮೆ ಬೆಲೆಗೆ ನೀಡಿ ಮುಖ್ಯಮಂತ್ರಿ ಕುಮಾರಸ್ವಾಮಿ 'ಕಿಕ್ ಬ್ಯಾಕ್ ಪಡೆದಿದ್ದಾರೆ' ಲೋಕಸಭಾ ಚುನಾವಣೆ ನಂತರ ಈ ನಿಧರ್ಾರ ಕೈಗೊಂಡಿದ್ದು, ರಾಜ್ಯದ ಇತಿಹಾಸದಲ್ಲೇ ದೊಡ್ಡ ಹಗರಣ. 2007ರಲ್ಲಿ ಇದ್ದ ಬೆಲೆಗೆ ಬೆಲೆ ಬಾಳುವ ಭೂಮಿ ಮಾರಾಟ ಮಾಡಿ ರಾಜ್ಯದ ಸಮ್ಮಿಶ್ರ ಸಕರ್ಾರ ಖಜಾನೆ ಲೂಟಿ ಹೊಡೆದಿದೆ. ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಎಡವಿದೆ. ರೈತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಗೋವಿಂದ ಕಾರಜೋಳ, ಮಾಜಿ ಶಾಸಕ ಲಕ್ಷ್ಮಣ ಸವದಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ,ಬಸವರಾಜ ದೂಡೇಸುಗೂರ್, ಮಾಜಿ ಶಾಸಕ ದೋಡ್ಡನಗೌಡ ಪಾಟೀಲ್, ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಗವಿಸಿದ್ದಪ್ಪ ಕರಡಿ,ತಾಲೂಕ ಅಧ್ಯಕ್ಷ ರತನ್ ದೇಸಾಯಿ,ಬಸಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಶಿವಶಂಕರ್ ದೇಸಾಯಿ, ಈರಪ್ಪ ಕುಡಗುಂಟಿ, ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರು, ಆದೇಶ ರೂಟ್ಟಿ, ಹಾಗೂ ಉಪಸ್ಥಿತರಿದ್ದರು.