ಬೆಂಗಳೂರು, ಆ 3 ಸಂಪುಟ ರಚನೆ ವಿಳಂಬ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾಲೆಳೆದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದ್ದಾರೆ
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿ 8 ದಿನಗಳು ಕಳೆದಿವೆ. ಸರ್ಕಾರ ರಚನೆಯಾಗಿ ಒಂದು ವಾರವಾದರೂ ಸಹ ಇದೂವರೆಗೂ ಮಂತ್ರಿ ಮಂಡಲ ರಚನೆಯಾಗಿಲ್ಲ. ಅದು ರಚನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿರುವ ಯಡಿಯೂರಪ್ಪ ಅವರದ್ದು ಏಕಚಕ್ರಾಧಿಪತ್ಯ ರಾಜ್ಯಭಾರ. ರಾಜ್ಯದಲ್ಲಿ ಆಡಳಿತ ಇನ್ನೂ ಪ್ರಾರಂಭವೇ ಆಗಿಲ್ಲ. ಈ ರಾಜ್ಯಭಾರವನ್ನು ಅವರಿನ್ನೂ ಬಹಳ ದಿನಗಳ ಕಾಲ ಮುಂದುವರೆಸುವ ಮನಸಿನಲ್ಲಿದ್ದಾರೆ. ಎಂದು ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.